ಕೂದಲು ಉದ್ದವಾಗಿ ಹಾಗೂ ದಟ್ಟವಾಗಿ ಬೆಳೆಯಲು ನೀವು ರೋಸ್ಮರಿ ಬಳಸುತ್ತಿದ್ದೀರಾ? ಹಾಗಾದರೆ, ಇದನ್ನು ಬಳಸುವ ಮುನ್ನ ನೀವು ಕೆಲವು ಪ್ರಮುಖ ವಿಚಾರಗಳನ್ನು ತಿಳಿದಿರಲೇಬೇಕು.
health-life Sep 29 2026
Author: Shriram Bhat Image Credits:pinterest
Kannada
ರೋಸ್ಮರಿ ಬಳಕೆ
ಕೂದಲು ಬೆಳೆಯಲು ಇಂದು ಅನೇಕರು ರೋಸ್ಮರಿ ಬಳಸುತ್ತಾರೆ. ಎಣ್ಣೆಯಲ್ಲಿ ಬೆರೆಸಿ, ಹೇರ್ ಪ್ಯಾಕ್ ರೂಪದಲ್ಲಿ ಅಥವಾ ಹೇರ್ ಸ್ಪ್ರೇ ಆಗಿ ಇದನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ.
Image credits: pexels
Kannada
ಅಡ್ಡಪರಿಣಾಮಗಳ ಬಗ್ಗೆ ಇರಲಿ ಎಚ್ಚರ
ಮಾರುಕಟ್ಟೆಯಲ್ಲಿ ಹಲವು ಬಗೆಯ ರೋಸ್ಮರಿ ಉತ್ಪನ್ನಗಳು ಲಭ್ಯವಿವೆ. ಆದರೆ, ಕೆಲವು ಅಧ್ಯಯನಗಳ ಪ್ರಕಾರ ರೋಸ್ಮರಿ ಬಳಕೆಯಿಂದ ಯಾವುದೇ ಪ್ರಯೋಜನವಿಲ್ಲ, ಬದಲಾಗಿ ಅಡ್ಡಪರಿಣಾಮಗಳು ಉಂಟಾಗಬಹುದು.
Image credits: freepik
Kannada
ರಕ್ತಸಂಚಾರ ಹೆಚ್ಚಳ
ರೋಸ್ಮರಿಯಲ್ಲಿರುವ ಕೆಲವು ಆಲ್ಕಲಾಯ್ಡ್‌ಗಳು ಕೂದಲು ಬೆಳೆಯಲು ಮತ್ತು ಸುವಾಸನೆ ನೀಡಲು ಸಹಾಯ ಮಾಡುತ್ತವೆ. ಇದನ್ನು ತಲೆಗೆ ಹಚ್ಚುವುದರಿಂದ ನೆತ್ತಿಯಲ್ಲಿ ರಕ್ತಸಂಚಾರ ಹೆಚ್ಚಾಗುತ್ತದೆ.
Image credits: social media
Kannada
ದಿಢೀರ್ ನಿಲ್ಲಿಸಿದರೆ ಅಪಾಯ
ಕೂದಲಿನ ಆರೋಗ್ಯಕ್ಕಾಗಿ ನೀವು ರೋಸ್ಮರಿ ಬಳಸುತ್ತಿದ್ದರೆ, ಅದರ ಬಳಕೆಯನ್ನು ದಿಢೀರನೆ ಕಡಿಮೆ ಮಾಡಿದರೆ ಅಥವಾ ನಿಲ್ಲಿಸಿದರೆ ಮತ್ತೆ ಕೂದಲು ಉದುರುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ.
Image credits: social media
Kannada
ಬಕ್ಕತಲೆ ಸಮಸ್ಯೆ
ರೋಸ್ಮರಿ ಬಳಕೆಯನ್ನು ನಿಲ್ಲಿಸುವುದರಿಂದ ಹೊಸದಾಗಿ ಬೆಳೆದ ಕೂದಲು ಮತ್ತೆ ಉದುರಿ ಹೋಗಬಹುದು. ಇದರಿಂದ ಬಕ್ಕತಲೆಯಂತಹ ಸಮಸ್ಯೆಗಳು ಮರುಕಳಿಸುವ ಅಪಾಯವಿರುತ್ತದೆ.
Image credits: Getty
Kannada
ವಾಕರಿಕೆ ಮತ್ತು ವಾಂತಿ
ರೋಸ್ಮರಿಯನ್ನು ಅತಿಯಾಗಿ ಬಳಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದು ವಾಕರಿಕೆ, ವಾಂತಿ ಮತ್ತು ಹೊಟ್ಟೆಯ ಅಸ್ವಸ್ಥತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.