ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡಲು ಕೆಲವು ಸುಲಭವಾದ ಜೀವನಶೈಲಿ ಸಲಹೆಗಳು ಇಲ್ಲಿವೆ.
ಅಧಿಕ ತೂಕವು ರಕ್ತದೊತ್ತಡ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ತೂಕ ಮತ್ತು ಕಾಲಾನಂತರದಲ್ಲಿ ತೂಕ ಹೆಚ್ಚಾಗುವುದು ರಕ್ತದೊತ್ತಡಕ್ಕೆ ನೇರವಾಗಿ ಸಂಬಂಧಿಸಿದೆ.
ಆರೋಗ್ಯಕರ ಆಹಾರ ಸೇವಿಸುವುದು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಸರಿಯಾದ ಆಹಾರಕ್ರಮವು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಾಯಕ.
ನಿಯಮಿತ ವ್ಯಾಯಾಮವು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ವಾರದಲ್ಲಿ ಐದು ದಿನಗಳು ಚುರುಕಾದ ನಡಿಗೆ, ಸೈಕ್ಲಿಂಗ್ ಅಥವಾ ಈಜನ್ನು ರೂಢಿಸಿಕೊಳ್ಳಿ.
ಧೂಮಪಾನವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಸಾಮಾನ್ಯ ಅಂಶವಾಗಿದೆ. ಧೂಮಪಾನವು ಹೃದಯದ ಆರೋಗ್ಯಕ್ಕೆ ಹಾನಿಕಾರಕ.
ದೀರ್ಘಕಾಲದ ಒತ್ತಡವು ನಿರಂತರ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ.
ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಟ್ರಾನ್ಸ್ ಫ್ಯಾಟ್‌ಗಳು ಅಪಧಮನಿಗಳನ್ನು ತಡೆಯುತ್ತವೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ.
ನಿದ್ರಾಹೀನತೆ ಅಥವಾ ಕಳಪೆ ನಿದ್ರೆಯು ಕಾಲಾನಂತರದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಪ್ರತಿದಿನ 7-8 ಗಂಟೆಗಳ ಕಾಲ ನಿದ್ರೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
ಸೈನಾ ನೆಹ್ವಾಲ್‌ರಂತೆ ಫಿಟ್ ಆಗಿರಲು ಇಲ್ಲಿವೆ ಡಯೆಟ್ ಮತ್ತು ಫಿಟ್ನೆಸ್ ಸೀಕ್ರೆಟ್!
Sweating After Bath: ಸ್ನಾನದ ನಂತರ ಬೆವರುವುದು ಏಕೆ? ಏನಿದು ಪ್ರಕ್ರಿಯೆ?
ಯೋಗದ ನಂತರ ನೀರು ಕುಡಿಯುವ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಂಜೆ ಸಮಯದಲ್ಲಿ ವ್ಯಾಯಾಮ ಮಾಡಿದರೆ ಏನಾಗುತ್ತದೆ?