Kannada

ನೆನೆಸಿದ ಬಾದಾಮಿ ತಿಂದ್ರೆ ಈ ರೋಗಗಳಿಂದ ದೂರ ಇರಬಹುದು

ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಹಲವು ರೋಗಗಳನ್ನು ದೂರವಿಡಬಹುದು. 

Kannada

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೊತೆಗೆ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು.

Image credits: Getty
Kannada

ದೇಹದ ತೂಕ ಇಳಿಸಲು ಸಹಕಾರಿ

ನೀರಲ್ಲಿ ನೆನೆಸಿ ಸಿಪ್ಪೆ ತೆಗೆದ ಬಾದಾಮಿ ಮೃದುವಾಗಿದ್ದು, ಜಗಿಯಲು ಸುಲಭ. ಇದು ದೇಹದ ತೂಕ ಇಳಿಸಲು ಕೂಡ ಸಹಾಯ ಮಾಡುತ್ತದೆ.

Image credits: Getty
Kannada

ಹಸಿವನ್ನು ನಿಯಂತ್ರಿಸುತ್ತದೆ

ಬಾದಾಮಿಯಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಅಂಶವಿದೆ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ಹಸಿವು ನಿಯಂತ್ರಣಕ್ಕೆ ಬಂದು, ಅನಗತ್ಯ ಸ್ನ್ಯಾಕ್ಸ್ ತಿನ್ನುವುದು ಕಡಿಮೆಯಾಗುತ್ತದೆ.

Image credits: Getty
Kannada

ಹೃದಯದ ಆರೋಗ್ಯ ಸುಧಾರಿಸುತ್ತೆ

ಬಾದಾಮಿಯಲ್ಲಿ ಮೊನೊಅನ್‌ಸ್ಯಾಚುರೇಟೆಡ್ ಕೊಬ್ಬು, ಪೊಟ್ಯಾಶಿಯಂ, ಮೆಗ್ನೀಶಿಯಂ ಸಮೃದ್ಧವಾಗಿದೆ. ಇದು ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Image credits: Getty
Kannada

ಮೆದುಳಿನ ಆರೋಗ್ಯಕ್ಕೆ ಉತ್ತಮ

ಬಾದಾಮಿಯಲ್ಲಿರುವ ರಿಬೋಫ್ಲಾವಿನ್ ಮತ್ತು ಎಲ್-ಕಾರ್ಟಿನೈನ್‌ನಂತಹ ಪೋಷಕಾಂಶಗಳು ಮೆದುಳಿನ ಕಾರ್ಯಕ್ಕೆ ಸಹಾಯ ಮಾಡುತ್ತವೆ. ಜೊತೆಗೆ, ಮಾನಸಿಕ ಸಾಮರ್ಥ್ಯ ಕುಸಿಯುವುದನ್ನು ತಡೆಯುತ್ತವೆ.

Image credits: Getty
Kannada

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತೆ

ವಿಟಮಿನ್ ಇ ಅಂಶವಿರುವ ಬಾದಾಮಿ, ಚರ್ಮದ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಇದು ವಯಸ್ಸಾಗುವ ಲಕ್ಷಣಗಳನ್ನು ತಡವಾಗುವಂತೆ ಮಾಡುತ್ತದೆ.

Image credits: Getty

Peanuts: ದಿನಾ ಒಂದು ಹಿಡಿ ಕಡಲೆಕಾಯಿ ತಿಂದ್ರೆ ಎಷ್ಟೆಲ್ಲಾ ಪ್ರಯೋಜನಯಿದೆ ಗೊತ್ತಾ?

ಲಿವರ್ ಕಾಯಿಲೆ ತಡೆಯಲು ದಿನಕ್ಕೆ 2- 3 ಕಪ್ ಬ್ಲ್ಯಾಕ್ ಕಾಫಿ ಸಾಕು

ಮಹಿಳೆಯರಲ್ಲಿ ಕಾಣಿಸಿಕೊಳ್ಳೋ ಸೀರೆ ಕ್ಯಾನ್ಸರ್ ಎಂದರೇನು? ಲಕ್ಷಣಗಳೇನು?

ದಿನಕ್ಕೊಂದು ಏಲಕ್ಕಿ ತಿಂದ್ರೆ ಈ ಕಾಯಿಲೆ ನಿಮ್ಮ ಹತ್ತಿರವೂ ಸುಳಿಯಲ್ಲ!