ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದರೆ ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸಿ ನೋಡಿ. ಇದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
health-life Sep 30 2026
Author: Shriram Bhat Image Credits:Getty
Kannada
ಚೆರ್ರಿ ಜ್ಯೂಸ್
ರಾತ್ರಿ ಮಲಗುವ ಮುನ್ನ ಚೆರ್ರಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ನಿದ್ರೆಯ ಅವಧಿ ಮತ್ತು ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
Image credits: Getty
Kannada
ಬಾದಾಮಿ ಮತ್ತು ಪಿಸ್ತಾ
ಬಾದಾಮಿ ಮತ್ತು ಪಿಸ್ತಾದಲ್ಲಿ ಮೆಗ್ನೀಸಿಯಮ್ ಹಾಗೂ ಮೆಲಟೋನಿನ್ ಸಮೃದ್ಧವಾಗಿದೆ. ಇವು ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
Image credits: Getty
Kannada
ಕಿವಿ ಹಣ್ಣು
ಕಿವಿ ಹಣ್ಣಿನಲ್ಲಿ ಸೆರೊಟೋನಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಹೆಚ್ಚಿನ ಪ್ರಮಾಣದಲ್ಲಿವೆ. ಮಲಗುವ ಒಂದು ಗಂಟೆ ಮೊದಲು ಸಿಪ್ಪೆ ಸುಲಿದ ಎರಡು ಕಿವಿ ಹಣ್ಣುಗಳನ್ನು ತಿಂದರೆ ನಿದ್ದೆ ಚೆನ್ನಾಗಿ ಬರುತ್ತದೆ.
Image credits: Getty
Kannada
ಕೊಬ್ಬಿನಾಂಶವಿರುವ ಮೀನು
ಸಾಲ್ಮನ್ ಅಥವಾ ಟ್ಯೂನ ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ವಿಟಮಿನ್ ಡಿ ಹೆಚ್ಚಾಗಿರುತ್ತದೆ. ಇದು ಸೆರೊಟೋನಿನ್ ಅನ್ನು ನಿಯಂತ್ರಿಸಿ, ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
Image credits: Getty
Kannada
ಓಟ್ಸ್
ಓಟ್ಸ್‌ನಲ್ಲಿ ನೈಸರ್ಗಿಕ ಮೆಲಟೋನಿನ್, ಕಾರ್ಬೋಹೈಡ್ರೇಟ್ ಮತ್ತು ಮೆಗ್ನೀಸಿಯಮ್ ಇರುತ್ತದೆ. ಹೀಗಾಗಿ ರಾತ್ರಿ ಹೊತ್ತು ಓಟ್ಸ್ ತಿಂದರೆ ಸುಖವಾದ ನಿದ್ದೆ ನಿಮ್ಮದಾಗುತ್ತದೆ.
Image credits: Getty
Kannada
ಕ್ಯಾಮೊಮೈಲ್ ಟೀ
ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಶೀತ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ, ಹೊಟ್ಟೆ ನೋವು ಮತ್ತು ಸ್ನಾಯುಗಳ ನೋವಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ. ಇದು ದೇಹವನ್ನು ನಿರಾಳವಾಗಿಸಿ ನಿದ್ದೆ ಬರಿಸುತ್ತದೆ.