ಮಾನಸಿಕ ಒತ್ತಡ ಅಥವಾ ಸ್ಟ್ರೆಸ್ ಕಡಿಮೆ ಮಾಡಲು ಸಹಾಯ ಮಾಡುವ 7 ಪ್ರಮುಖ ಆಹಾರಗಳು ಇಲ್ಲಿವೆ.
ಸಾಲ್ಮನ್ ಮತ್ತು ಬೂತಾಯಿ (ಮತ್ತಿ) ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಹೇರಳವಾಗಿರುತ್ತದೆ. ಇವು ಮೆದುಳಿನ ಉರಿಯೂತವನ್ನು ಕಡಿಮೆ ಮಾಡಿ, ಮಾನಸಿಕ ಒತ್ತಡವನ್ನು ದೂರ ಮಾಡುತ್ತವೆ.
ಹಸಿರು ಸೊಪ್ಪುಗಳಲ್ಲಿ ಮೆಗ್ನೀಸಿಯಮ್ ಅಂಶ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿ ಕಾರ್ಟಿಸೋಲ್ (ಸ್ಟ್ರೆಸ್ ಹಾರ್ಮೋನ್) ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ವಾಲ್‌ನಟ್, ಬಾದಾಮಿ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು ಹಾಗೂ ಖನಿಜಾಂಶಗಳಿರುತ್ತವೆ. ಇವು ಮೆದುಳಿನ ಆರೋಗ್ಯವನ್ನು ಕಾಪಾಡುತ್ತವೆ.
ಗ್ರೀನ್ ಟೀಯಲ್ಲಿ 'ಎಲ್-ಥಿಯಾನೈನ್' (L-theanine) ಎಂಬ ಅಮೈನೋ ಆಸಿಡ್ ಇರುತ್ತದೆ. ಇದು ಮನಸ್ಸನ್ನು ನಿರಾಳವಾಗಿಸಿ, ಒತ್ತಡವನ್ನು ಕಡಿಮೆ ಮಾಡುತ್ತದೆ.
ಅವಕಾಡೊ ಹಣ್ಣಿನಲ್ಲಿ ಮೆಗ್ನೀಸಿಯಮ್ ಮತ್ತು ಬಿ-ವಿಟಮಿನ್‌ಗಳು ಹೆಚ್ಚಾಗಿವೆ. ಇವು ರಕ್ತದೊತ್ತಡವನ್ನು ಕಡಿಮೆ ಮಾಡಿ, ನರಮಂಡಲವನ್ನು ಶಾಂತಗೊಳಿಸುತ್ತವೆ.
ಡಾರ್ಕ್ ಚಾಕೊಲೇಟ್‌ನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಸ್ಟ್ರೆಸ್ ಹಾರ್ಮೋನ್‌ಗಳ ಮಟ್ಟವನ್ನು ತಗ್ಗಿಸುತ್ತವೆ. ಜೊತೆಗೆ ನಿಮ್ಮ ಮೂಡ್ ಅನ್ನು ಕೂಡ ಸುಧಾರಿಸುತ್ತವೆ.
ಮೊಸರು ಸೇವನೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಕರುಳಿನ ಆರೋಗ್ಯವನ್ನು ವೃದ್ಧಿಸಿ, ಮನಸ್ಸನ್ನು ಉಲ್ಲಾಸಗೊಳಿಸುತ್ತವೆ.
ಕೂದಲು ಬೆಳೆಸಲು ರೋಸ್ಮರಿ ಬಳಸುತ್ತಿದ್ದೀರಾ? ಹಾಗಾದ್ರೆ ಇದು ನಿಮಗೆ ತಿಳಿದಿರಲಿ!
ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಸಿಗುವ 6 ಅದ್ಭುತ ಆರೋಗ್ಯ ಪ್ರಯೋಜನ
ಪ್ರತಿದಿನ ಎಳ್ಳು ತಿನ್ನಿ, ಆರೋಗ್ಯದಲ್ಲಿ ಭಾರೀ ಮ್ಯಾಜಿಕ್ ನೋಡಿ!
Coconut Milk: ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯಬೇಕಾ? ತೆಂಗಿನ ಹಾಲಿನ ಈ ಟ್ರಿಕ್ ಬಳಸಿ!