Kannada

ಹಲ್ಲುಗಳ ಆರೋಗ್ಯ

ನಮ್ಮ ದಿನನಿತ್ಯದ ಕೆಲವು ಸರಳ ಅಭ್ಯಾಸಗಳು ಹಲ್ಲು ಮತ್ತು ವಸಡುಗಳ ಬಲವನ್ನು ಹೆಚ್ಚಿಸುತ್ತವೆ. ಈ ಅಭ್ಯಾಸಗಳನ್ನು ಇಂದೇ ರೂಢಿಸಿಕೊಳ್ಳಿ.

Kannada

ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ

ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಹಲ್ಲಿನ ಆರೋಗ್ಯಕ್ಕೆ ಬಹಳ ಮುಖ್ಯ. ಬೆಳಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ ತಪ್ಪದೇ ಬ್ರಷ್ ಮಾಡಿ.

Image credits: Freepik
Kannada

ಬಾಯಿಯನ್ನು ಸ್ವಚ್ಛಗೊಳಿಸಿ

ಊಟ ಮಾಡಿದ ನಂತರ ಹಲ್ಲುಗಳ ಸಂದಿಯಲ್ಲಿ ಸಿಲುಕಿರುವ ಆಹಾರದ ಕಣಗಳನ್ನು ತೆಗೆಯಲು ಮರೆಯದಿರಿ. ಇಲ್ಲದಿದ್ದರೆ ಇದು ಕ್ರಿಮಿಗಳ ಬೆಳವಣಿಗೆಗೆ ಕಾರಣವಾಗುತ್ತದೆ.

Image credits: Freepik
Kannada

ಮೌತ್ ವಾಶ್ ಬಳಸಿ

ಆಂಟಿಬ್ಯಾಕ್ಟೀರಿಯಲ್ ಮೌತ್ ವಾಶ್ ಬಳಸುವುದರಿಂದ ಬಾಯಿಯನ್ನು ಸಂಪೂರ್ಣವಾಗಿ ಸ್ವಚ್ಛವಾಗಿಡಬಹುದು. ಇದು ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ.

Image credits: Getty
Kannada

ಸಿಹಿ ಪಾನೀಯಗಳಿಂದ ದೂರವಿರಿ

ಅತಿಯಾದ ಸಿಹಿ ಇರುವ ಪಾನೀಯಗಳನ್ನು ಕುಡಿಯುವುದನ್ನು ಕಡಿಮೆ ಮಾಡಿ. ಇದು ಹಲ್ಲುಗಳು ಬೇಗನೆ ಹಾಳಾಗಲು ಪ್ರಮುಖ ಕಾರಣವಾಗುತ್ತದೆ.

Image credits: Getty
Kannada

ಸಾಕಷ್ಟು ನೀರು ಕುಡಿಯಿರಿ

ದಿನವಿಡೀ ಸಾಕಷ್ಟು ನೀರು ಕುಡಿಯುವ ಅಭ್ಯಾಸ ಇಟ್ಟುಕೊಳ್ಳಿ. ಇದು ಹಲ್ಲುಗಳಿಗೆ ಅಂಟಿಕೊಂಡಿರುವ ಕೊಳೆಯನ್ನು ನಿವಾರಿಸಿ, ಹಲ್ಲುಗಳನ್ನು ರಕ್ಷಿಸುತ್ತದೆ.

Image credits: Getty
Kannada

ತಂಬಾಕು ಉತ್ಪನ್ನಗಳನ್ನು ತ್ಯಜಿಸಿ

ತಂಬಾಕು ಉತ್ಪನ್ನಗಳ ಸೇವನೆ ಹಲ್ಲುಗಳ ಆರೋಗ್ಯವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಇದು ವಸಡು ರೋಗ ಮತ್ತು ಬಾಯಿ ಕ್ಯಾನ್ಸರ್‌ಗೂ ಕಾರಣವಾಗಬಹುದು.

Image credits: Getty
Kannada

ಬ್ರಷ್ ಬದಲಾಯಿಸಿ

ಪ್ರತಿ 3 ತಿಂಗಳಿಗೊಮ್ಮೆ ಹಳೆಯ ಬ್ರಷ್ ಬದಲಾಯಿಸಿ ಹೊಸದನ್ನು ಬಳಸುವುದು ಕಡ್ಡಾಯ. ಇದು ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಅತ್ಯಗತ್ಯ.

Image credits: Getty
Kannada

ಆರೋಗ್ಯಕರ ಆಹಾರಕ್ರಮ

ಹಾಲಿನ ಉತ್ಪನ್ನಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ. ಇದು ಹಲ್ಲುಗಳನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ.

Image credits: Getty

ಮಾನಸಿಕ ಒತ್ತಡ ಕಡಿಮೆ ಮಾಡಲು ಈ 7 ಆಹಾರಗಳನ್ನು ಸೇವಿಸಿ

ಕೂದಲು ಬೆಳೆಸಲು ರೋಸ್ಮರಿ ಬಳಸುತ್ತಿದ್ದೀರಾ? ಹಾಗಾದ್ರೆ ಇದು ನಿಮಗೆ ತಿಳಿದಿರಲಿ!

ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಸಿಗುವ 6 ಅದ್ಭುತ ಆರೋಗ್ಯ ಪ್ರಯೋಜನ

ಪ್ರತಿದಿನ ಎಳ್ಳು ತಿನ್ನಿ, ಆರೋಗ್ಯದಲ್ಲಿ ಭಾರೀ ಮ್ಯಾಜಿಕ್ ನೋಡಿ!