Kannada

ಹುಣಸೆಹಣ್ಣು

ಹುಣಸೆಹಣ್ಣು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

Kannada

ಹುಣಸೆಹಣ್ಣಿನಲ್ಲಿರುವ ಜೀವಸತ್ವಗಳು

ಹುಣಸೆಹಣ್ಣಿನಲ್ಲಿ ವಿಟಮಿನ್ ಸಿ, ಬಿ ಜೀವಸತ್ವಗಳು, ಪೊಟ್ಯಾಶಿಯಂ, ಮೆಗ್ನೀಶಿಯಂ ಮುಂತಾದ ಪೋಷಕಾಂಶಗಳು ಮತ್ತು ಪಾಲಿಫಿನಾಲ್ಸ್ , ಫ್ಲೇವನಾಯ್ಡ್‌ಗಳಂತಹ ಸಂಯುಕ್ತಗಳಿವೆ. 

Kannada

ಹುಣಸೆಹಣ್ಣಿನ ಆರೋಗ್ಯ ಪ್ರಯೋಜನಗಳು

ಹುಣಸೆಹಣ್ಣು ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

Kannada

ಜೀರ್ಣಕ್ರಿಯೆಯ ಸಮಸ್ಯೆ ನಿವಾರಣೆ

ಹುಣಸೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟಾರ್ಟಾರಿಕ್ ಆಮ್ಲ, ಪೊಟ್ಯಾಶಿಯಂ ಮತ್ತು ನಾರಿನಂಶಗಳಿವೆ. ಇದು ಮಲಬದ್ಧತೆ, ಹೊಟ್ಟೆ ಉಬ್ಬರ, ಅಜೀರ್ಣ ಇತ್ಯಾದಿಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

Kannada

ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ

ಹುಣಸೆಹಣ್ಣಿನಲ್ಲಿರುವ ಪಾಲಿಫಿನಾಲ್‌ಗಳು ಮತ್ತು ಫ್ಲೇವನಾಯ್ಡ್‌ಗಳು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತವೆ. ಈ ಉತ್ಕರ್ಷಣ ನಿರೋಧಕಗಳು ವಯಸ್ಸಾಗುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.

Kannada

ಕಡಿಮೆಯಾಗಲಿದೆ ಕೆಟ್ಟ ಕೊಲೆಸ್ಟ್ರಾಲ್

ಹುಣಸೆಹಣ್ಣು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಪೊಟ್ಯಾಶಿಯಂ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Kannada

ರಕ್ತದಲ್ಲಿನ ಸಕ್ಕರೆ ನಿಯಂತ್ರಣ

ಊಟದ ನಂತರ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಹುಣಸೆಹಣ್ಣು ಸಹಾಯ ಮಾಡುತ್ತದೆ.

Kannada

ರೋಗನಿರೋಧಕ ಶಕ್ತಿ ಹೆಚ್ಚಳ

ಹುಣಸೆಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಬಿಳಿ ರಕ್ತ ಕಣಗಳ ಕಾರ್ಯವನ್ನು ಹೆಚ್ಚಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

Kannada

ಚರ್ಮದ ರಕ್ಷಣೆ

ಹುಣಸೆಹಣ್ಣಿನ ಉರಿಯೂತ ನಿವಾರಕ ಗುಣಗಳು ಚರ್ಮದ ಆರೈಕೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಆಲ್ಫಾ ಹೈಡ್ರಾಕ್ಸಿ ಆಮ್ಲದ ಅಂಶವು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

Kannada

ಕಣ್ಣುಗಳ ರಕ್ಷಣೆ

ಒಣ ಕಣ್ಣುಗಳು ಮತ್ತು ತುರಿಕೆಯನ್ನು ನಿವಾರಿಸಲು ಹುಣಸೆಹಣ್ಣು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ ಇದೆ.

ಕಾಫಿ ಕುಡಿದರೆ ಎದೆ ಉರಿಯುತ್ತಾ? ಖಾಲಿ ಹೊಟ್ಟೆಯಲ್ಲಿ ಕುಡಿಯೋ ಅಭ್ಯಾಸ ಇರೋರು ಇಲ್ನೋಡಿ!

ದಿನನಿತ್ಯ ಹೈ ಹೀಲ್ಸ್‌ ಧರಿಸಿ ಡಿಂಗು ಡಾಂಗು ಸ್ಟೈಲ್ ಮಾಡ್ತೀರಾ? ಈ ಅಪಾಯ ತಪ್ಪಿದ್ದಲ್ಲ!

ಈ ಕಾರಣಗಳಿಂದ ಪದೇಪದೆ ಹೊಟ್ಟೆ ಹಸಿವಾಗುತ್ತಿರುತ್ತೆ!

ಬೇಸಿಗೆಯಲ್ಲಿ ಬೆವರಿನಿಂದ ಮೈಯೆಲ್ಲ ತುರಿಕೆ, ಕಿರಿಕಿರಿ? ಇಷ್ಟು ಮಾಡಿ ಸಾಕು