ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಹಾಕಿ ಕುದಿಸಿದ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಯಾಕಂತೀರಾ? ಇಲ್ಲಿದೆ ಕಾರಣ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಹಾಕಿ ಕುದಿಸಿದ ನೀರನ್ನು ಕುಡಿಯುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ತುಳಸಿ ನೀರು ಅತ್ಯುತ್ತಮವಾಗಿದೆ. ಮಧುಮೇಹಿಗಳಿಗೆ ಇದು ಹೆಚ್ಚು ಪ್ರಯೋಜನಕಾರಿ.
ತುಳಸಿ ನೀರು ಅಜೀರ್ಣ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳಿಗೂ ಇದು ರಾಮಬಾಣ.
ಶೀತ, ಜ್ವರದಿಂದ ಹಿಡಿದು ಅಸ್ತಮಾದಂತಹ ಕೆಲವು ಉಸಿರಾಟದ ಕಾಯಿಲೆಗಳನ್ನು ತಡೆಯಲು ತುಳಸಿ ನೀರು ಸಹಾಯ ಮಾಡುತ್ತದೆ.
ತುಳಸಿ ನೀರು ಖಿನ್ನತೆ ಮತ್ತು ಆತಂಕದಂತಹ ವಿವಿಧ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದು ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.
ದಿನಕ್ಕೊಂದು ಮೊಟ್ಟೆ ತಿಂದ್ರೆ ಸಾಕು, ದೇಹದಲ್ಲಿ ಈ 7 ಬದಲಾವಣೆಗಳಾಗೋದು ಗ್ಯಾರಂಟಿ!
ಸಿಕ್ಕಾಪಟ್ಟೆ ಬಿಸಿಲು, ಬಾಡಿ ಹೀಟ್ ಕಡಿಮೆ ಮಾಡೋ ಪಾನೀಯಗಳಿವು; ದುಡ್ಡು ಖರ್ಚಾಗಲ್ಲ
ಊಟದ ನಂತರ ಸೋಂಪು ಜಗಿಯುವುದರಿಂದ ಸಿಗುವ ಆರೋಗ್ಯ ಲಾಭಗಳಿವು!
ಬೇಸಿಗೆ ತಾಪಕ್ಕೆ ಮೊಸರು vs ಮಜ್ಜಿಗೆ: ಆರೋಗ್ಯಕ್ಕೆ ಯಾವುದು ಬೆಸ್ಟ್?