ನಮ್ಮ ರಕ್ತನಾಳಗಳ ಆರೋಗ್ಯವು ನಾವು ಪ್ರತಿದಿನ ಆಯ್ಕೆ ಮಾಡಿಕೊಳ್ಳುವ ಅಭ್ಯಾಸಗಳನ್ನು ಅವಲಂಬಿಸಿದೆ. ರಕ್ತ ಸಂಚಾರವನ್ನು ಹೆಚ್ಚಿಸಲು ಈ ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ.
ಸಾಲ್ಮನ್, ಟ್ಯೂನ, ಸಾರ್ಡಿನ್‌ನಂತಹ ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಹೇರಳವಾಗಿದೆ. ಇದು ರಕ್ತನಾಳಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬೆರ್ರಿ ಹಣ್ಣುಗಳಲ್ಲಿ ಆಂಥೋಸಯಾನಿನ್ ಎಂಬ ಅಂಶವಿದೆ. ಇದು ದೇಹದಲ್ಲಿ ರಕ್ತ ಸಂಚಾರವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬೀಟ್‌ರೂಟ್, ಪಾಲಕ್ ಸೊಪ್ಪಿನಂತಹ ತರಕಾರಿಗಳಲ್ಲಿ ಸಾಕಷ್ಟು ಪೋಷಕಾಂಶ ಮತ್ತು ಡಯೆಟರಿ ನೈಟ್ರೇಟ್ ಇದೆ. ಇದು ರಕ್ತ ಸಂಚಾರವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿಯಲ್ಲಿ ಅಲ್ಲಿಸಿನ್ ಎಂಬ ಸಂಯುಕ್ತವಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ರಕ್ತ ಸಂಚಾರವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸಿಟ್ರಸ್ ಹಣ್ಣುಗಳು ಮತ್ತು ದಾಳಿಂಬೆಯಲ್ಲಿ ಫ್ಲೇವನಾಯ್ಡ್‌ಗಳು ಅಧಿಕವಾಗಿವೆ. ಇವು ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತವೆ.
ಆಲಿವ್ ಎಣ್ಣೆ ಮತ್ತು ವಾಲ್‌ನಟ್‌ಗಳಲ್ಲಿ ಅನೇಕ ಆರೋಗ್ಯಕರ ಗುಣಗಳಿವೆ. ಇವು ರಕ್ತ ಸಂಚಾರವನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ಬಿಪಿ ಕಂಟ್ರೋಲ್ ಮಾಡಲು ಅಜ್ಜಿಯ ಕಾಲದ ಸಲಹೆ
ಗ್ಯಾಸ್ ಟ್ರಬಲ್ ಆಗುತ್ತಾ? ಈ 7 ಆಹಾರಗಳಿಂದ ದೂರವಿರಿ, ಇಲ್ಲದಿದ್ದರೆ ಕಷ್ಟ
ಮಳೆಗಾಲದಲ್ಲಿ ದೇಹ ಸೂಚಿಸುವ ಈ ಲಕ್ಷಣ ಕಡೆಗಣಿಸಬೇಡಿ, ಇದು ಹೊಟ್ಟೆ ಸೋಂಕಿನ ಅಲರ್ಟ್
Hair Care: ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಬಲಪಡಿಸುವ 6 ಸೂಪರ್‌ಫುಡ್‌ಗಳು!