Food
ಮಳೆಗಾಲದಲ್ಲಿ ಇಂಥಾ ಆಹಾರ ತಿನ್ನಲೇಬೇಡಿ
ಮಳೆಗಾಲದಲ್ಲಿ ಸ್ಟ್ರೀಟ್ ಫುಡ್ ತಿನ್ನೋದನ್ನು ಆದಷ್ಟು ಕಡಿಮೆ ಮಾಡೋದು ಒಳ್ಳೆಯದು. ಯಾಕೆಂದರೆ ಇದನ್ನು ತಯಾರಿಸುವ ರೀತಿ ಸ್ವಚ್ಛತೆಯಿಂದ ಕೂಡಿರುವುದಿಲ್ಲ. ಹೀಗಾಗಿ ಕಾಯಿಲೆ ಬೀಳುವ ಸಾಧ್ಯತೆ ಹೆಚ್ಚು.
ಸೊಪ್ಪು ತರಕಾರಿಗಳು ಆರೋಗ್ಯಕ್ಕೆ ತುಂಬಾ ಉತ್ತಮವಾಗಿವೆ. ಆದರೆ ಮಳೆಗಾಲದಲ್ಲಿ ಅಲ್ಲ. ರೈನೀ ಸೀಸನ್‌ನಲ್ಲಿ ಈ ಸೊಪ್ಪುಗಳಲ್ಲಿ ಬ್ಯಾಕ್ಟಿರೀಯಾಗಳಾಗುವ ಸಾಧ್ಯತೆಗಳಿವೆ. ಇದು ಅಜೀರ್ಣದ ಸಮಸ್ಯೆ ಉಂಟು ಮಾಡಬಹುದು.
ಕಾರ್ಬೋನೇಟೆಡ್ ಡ್ರಿಂಕ್ಸ್ ಅಥವಾ ಸಕ್ಕರೆ ಸೇರಿಸಿದ ಪಾನೀಯ ಡಿಹೈಡ್ರೇಶನ್ ಸಮಸ್ಯೆಗೆ ಕಾರಣವಾಗುತ್ತದೆ. ಮಾತ್ರವಲ್ಲ ರೋಗ ನಿರೋಧಕ ಶಕ್ತಿಯನ್ನು ಸಹ ಕುಂಠತಗೊಳಿಸುತ್ತೆ.
ಮಳೆಗಾಲದಲ್ಲಿ ಡೀಪ್ ಫ್ರೈಡ್ ಆಹಾರಗಳನ್ನು ತಿನ್ನೋಕೆ ಇಷ್ಟವಾಗುತ್ತೆ ಅನ್ನೋದೇನೋ ನಿಜ. ಆದ್ರೆ ಈ ರೀತಿ ಕರಿದ ಪಕೋಡಾ, ಸಮೋಸಾಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಅಜೀರ್ಣಕ್ಕೆ ಕಾರಣವಾಗುತ್ತೆ.
ಹಾಲಿನ ಉತ್ಪನ್ನಗಳಾದ ಹಾಲು, ಮೊಸರು, ಮಜ್ಜಿಗೆ. ಚೀಸ್ ಮುಂತಾದವುಗಳು ಮಳೆಗಾಲದಲ್ಲಿ ಶೀತ ವಾತಾವರಣದಿಂದ ಬೇಗ ಹಾಳಾಗುತ್ತವೆ. ಬ್ಯಾಕ್ಟಿರೀಯಾ ಸಹ ಬೇಗ ಬೆಳೆಯುತ್ತದೆ.
ಮಳೆಗಾಲ ಅನ್ನೋದು ಮೀನು ಮತ್ತು ಇತರ ಜಲಚರಗಳಿಗೆ ಸಂತಾನೋತ್ಪತ್ತಿಯ ಸಮಯವಾಗಿ. ಹೀಗಾಗಿ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಮಾಲಿನ್ಯವೂ ಹೆಚ್ಚಾಗಿರುವ ಕಾರಣ ಸೀ ಫುಡ್ ಸೇವನೆ ಒಳ್ಳೆಯದಲ್ಲ.
ಮಳೆಗಾಲದಲ್ಲಿ ಆಹಾರ ತುಂಬಾ ಬೇಗನೇ ಹಾಳಾಗುತ್ತದೆ. ಹೀಗಾಗಿ ಮಾನ್ಸೂನ್‌ನಲ್ಲಿ ಉಳಿದ ಆಹಾರವನ್ನು ತಿನ್ನೋ ಅಭ್ಯಾಸ ಆದಷ್ಟು ಕಡಿಮೆ ಮಾಡಿ. ಯಾಕೆಂದರೆ ಇಂಥಾ ಆಹಾರದಲ್ಲಿ ಬ್ಯಾಕ್ಟಿರೀಯಾ ಬೆಳೆಯೋ ಸಾಧ್ಯತೆ ಹೆಚ್ಚು.