Food
ಪ್ರತಿಯೊಂದೂ ಆಹಾರ ವಸ್ತುವೂ ಹಾಳಾಗುತ್ತದೆ. ಆದರೆ, ಜೇನುತುಪ್ಪಕ್ಕೆ ಮಾತ್ರ ಎಕ್ಸ್‌ಪೈರಿ ಡೇಟ್ ಇರೋಲ್ಲ.
ನಾವು ಖರೀದಿಸುವ ಪ್ರತಿಯೊಂದು ಆಹಾರ ಪದಾರ್ಥದ ಮೇಲೂ ಅದರ ಮುಕ್ತಾಯ ದಿನಾಂಕವನ್ನು ನಮೂದಿಸಲಾಗಿರುತ್ತದೆ. ಅಂದರೆ, ನಿರ್ದಿಷ್ಟ ಸಮಯದೊಳಗೆ ಮಾತ್ರ ಆ ವಸ್ತುವನ್ನು ಸೇವಿಸಬಹುದು.
ಎಂದಿಗೂ ಮುಕ್ತಾಯವಾಗದ ಮತ್ತು ನೀವು ಜೀವನ ಪರ್ಯಂತ ಸೇವಿಸಬಹುದಾದ ಒಂದು ಆಹಾರವೆಂದರೆ ಜೇನುತುಪ್ಪ.
ಜೇನುತುಪ್ಪ ಎಂದಿಗೂ ಹಾಳಾಗದ ಆಹಾರ. ಅದು ಹಳೆಯದಾದಂತೆ ಹೆಚ್ಚು ಪೌಷ್ಟಿಕಾಂಶಭರಿತ ಮತ್ತು ಪ್ರಯೋಜನಕಾರಿಯಾಗುತ್ತದೆ.
ಜೇನುತುಪ್ಪದಲ್ಲಿ ತೇವಾಂಶ ಕಡಿಮೆ ಇರುತ್ತದೆ, ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ರಕ್ಷಿಸಿ, ಹಾಳಾಗದಂತೆ ತಡೆಯುತ್ತದೆ.
ಜೇನುತುಪ್ಪದ pH ಮಟ್ಟ 3.2 ರಿಂದ 4.5ರ ನಡುವಿರುತ್ತದೆ, ಇದು ನೈಸರ್ಗಿಕವಾಗಿ ಆಮ್ಲೀಯವಾಗಿಸುತ್ತದೆ. ಈ ಆಮ್ಲೀಯತೆಯಿಂದಾಗಿ ಬ್ಯಾಕ್ಟೀರಿಯಾ ಮತ್ತು ಇತರೆ ಸೂಕ್ಷ್ಮಜೀವಿಗಳು ಬದುಕಲು ಸಾಧ್ಯವಿಲ್ಲ.
ಜೇನುತುಪ್ಪದಲ್ಲಿ ಗ್ಲೂಕೋಸ್ ಆಕ್ಸಿಡೇಸ್ ಕಿಣ್ವವಿದೆ. ಇದು ಗ್ಲೂಕೋಸ್ ಅನ್ನು ಗ್ಲುಕೋನಿಕ್ ಆಮ್ಲ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಆಗಿ ವಿಭಜಿಸುತ್ತದೆ. ಇದು ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ.
ಜೇನುತುಪ್ಪದಲ್ಲಿ ಸಕ್ಕರೆ ಹೆಚ್ಚು ಮತ್ತು ನೀರಿನಂಶ ಕಡಿಮೆ ಇರುತ್ತದೆ. ಇದರಿಂದ ಇದು ಯಾವುದೇ ವಾತಾವರಣದಲ್ಲಿ ದೀರ್ಘಕಾಲ ಬಾಳಿಕೆ ಬರುತ್ತದೆ.
ಸಾವಯವ ಸಕ್ಕರೆ ನೈಸರ್ಗಿಕ ಜೀವಿರೋಧಿ ಗುಣಗಳನ್ನು ಹೊಂದಿದ್ದು, ಇದನ್ನು ದೀರ್ಘಕಾಲದವರೆಗೆ ಸಂರಕ್ಷಿಸಲು ಉತ್ತಮ.