Food
ಬೆಲ್ಲ ಮತ್ತು ಸಕ್ಕರೆ ಎರಡೂ ಕಬ್ಬಿನಿಂದಲೇ ತಯಾರಿಸಿದ್ರೂ ಸಕ್ಕರೆಗಿಂತ ಬೆಲ್ಲದಲ್ಲಿ ದೇಹಕ್ಕೆ ಬೇಕಾದ ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ, ಮತ್ತು ಅನೇಕ ರೀತಿಯ ಖನಿಜಗಳು ಸಿಗುತ್ತವೆ
ಸಕ್ಕರೆಗೆ ಬದಲಾಗಿ.. ಬೆಲ್ಲ ಸೇವಿಸುವುದರಿಂದ ನಮಗೆ ದೊರೆಯುವ ಆರೋಗ್ಯ ಪ್ರಯೋಜನಗಳೇನೆಂದು ಈಗ ತಿಳಿದುಕೊಳ್ಳೋಣ.
ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಬೆಲ್ಲವು ಉತ್ತಮ ಪ್ರಯೋಜನವನ್ನು ನೀಡುತ್ತದೆ. ಬೆಲ್ಲವನ್ನು ಸೇವಿಸಿದರೆ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ. ರಕ್ತ ಶುದ್ಧೀಕರಣವೂ ಆಗುತ್ತದೆ. ಪ್ರತಿದಿನ ಒಂದು ಸಣ್ಣ ತುಂಡನ್ನು ಸೇವಿಸಿ
ಆಯಾಸವನ್ನು ನಿವಾರಿಸಲು ಬೆಲ್ಲ ಸಹಾಯ ಮಾಡುತ್ತದೆ. ನಿಮಗೆ ಆಯಾಸವಾದಾಗ ಒಂದು ತುಂಡು ಬೆಲ್ಲವನ್ನು ಸೇವಿಸಿ. ಶಕ್ತಿ ಸಿಗುತ್ತದೆ.
ಬೆಲ್ಲದಲ್ಲಿ ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಬೆಲ್ಲವನ್ನು ಪ್ರತಿದಿನ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಕಬ್ಬಿಣದ ಕೊರತೆಯಿರುವವರಿಗೂ ಬೆಲ್ಲವು ತುಂಬಾ ಪ್ರಯೋಜನಕಾರಿ. ಕಬ್ಬಿಣದ ಕೊರತೆಯಿರುವವರು ಸಕ್ಕರೆ ಬದಲಿಗೆ ಬೆಲ್ಲವನ್ನು ಸೇವಿಸುವುದು ಒಳ್ಳೆಯದು.
ಬೆಲ್ಲವು ದೇಹದಲ್ಲಿರುವ, ಯಕೃತ್ತಿನಲ್ಲಿರುವ ವಿಷವನ್ನು ಹೊರಹಾಕಲು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಯಕೃತ್ತನ್ನು ಶುದ್ಧೀಕರಿಸಲು ಸಹಾಯ ಮಾಡುವ ಸತು, ಉತ್ಕರ್ಷಣ ನಿರೋಧಕಗಳು, ಸೆಲೆನಿಯಮ್ ನಂತಹ ಖನಿಜಗಳು ಬೆಲ್ಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ.
ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವನ್ನು ಕಡಿಮೆ ಮಾಡಲು ಬೆಲ್ಲವು ತುಂಬಾ ಸಹಾಯ ಮಾಡುತ್ತದೆ.