Food
ದಿನಕ್ಕೊಂದು ಮೊಟ್ಟೆ ತಿಂದ್ರೆ ದೇಹಕ್ಕೆ ಬೇಕಾದ ಪ್ರೊಟೀನ್ಸ್ ಹೇಗೆ ಸಿಗುತ್ತೆ. ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತೆ?
ಸಕಲ ಸತ್ವಗಳೂ ಇರೋ ಮೊಟ್ಟೆ ಆರೋಗ್ಯಕ್ಕೆ ಅತ್ಯಗತ್ಯ. ದಿನಕ್ಕೊಂದು ತಿಂದರೂ ಸಾಕು. ಆರೋಗ್ಯ ಸುಧಾರಿಸುವುದರಲ್ಲಿ ಅನುಮಾನವೇ ಇಲ್ಲ.
ಮೊಟ್ಟೆಯಲ್ಲಿರುವ ಬಿಳಿ ಭಾಗ, ಹಳದಿ ಲೋಳೆ ಸ್ನಾಯುಗಳ ಬೆಳವಣಿಗೆಗೆ ಒಳ್ಳೆಯದು.
ಮೊಟ್ಟೆಗಳಲ್ಲಿ ಕಂಡುಬರುವ ಕೋಲೀನ್ ಮೆದುಳಿನ ಆರೋಗ್ಯ ಮತ್ತು ಸ್ಮರಣೆ ಹೆಚ್ಚಿಸುತ್ತದೆ.
ಮೊಟ್ಟೆ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಮೊಟ್ಟೆಗಳು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ.
ಮೊಟ್ಟೆಗಳನ್ನು ತಿನ್ನುವುದರಿಂದ ಉತ್ತಮ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಹೃದಯವು ಆರೋಗ್ಯವಾಗಿರುತ್ತದೆ.
ವಿಟಮಿನ್ ಎ, ಸತುವು ಹೊಂದಿರುವ ಮೊಟ್ಟೆ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.
ಮೊಟ್ಟೆಗಳನ್ನು ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ. ದೇಹದ ತೂಕ ನಿಯಂತ್ರಣದಲ್ಲಿರುತ್ತದೆ.
ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿದ ನಂತರವೇ ನಿಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿ.