Food

ರುಚಿಗೆ ಮಾತ್ರ ಉಪ್ಪಲ್ಲ, ಆರೋಗ್ಯಕ್ಕೂ ಬೇಕಿದು

ಯಾವ ಉಪ್ಪು ತಿಂದ್ರೆ ಆರೋಗ್ಯಕ್ಕೆ ಒಳ್ಳೇಯದು? ಅಷ್ಟಕ್ಕೂ ಉಪ್ಪಿನಲ್ಲಿ ಎಷ್ಟು ವಿಧಗಳಿವೆ? 

Image credits: others

8 ವಿಧದ ಉಪ್ಪುಗಳು: ಉಪಯೋಗಗಳು ಮತ್ತು ಪ್ರಯೋಜನಗಳು

ಕಲ್ಲುಪ್ಪು, ಬಿಳಿ ಯುಪ್ಪು, ಆಯೋಡಿನ್ ಉಪ್ಪು, ಸೈಂಧವ ಲವಣ ಬಿಟ್ಟು ಇನ್ನೇನಿವೆ ಉಪ್ಪಿನಲ್ಲಿ ವಿಧಗಳು?

ಟೇಬಲ್ ಉಪ್ಪು

ಟೇಬಲ್ ಉಪ್ಪು ಅಯೋಡಿನ್‌ಯುಕ್ತ ಉಪ್ಪಾಗಿದ್ದು, ಇದು ನಮ್ಮ ದೇಹದಲ್ಲಿ ಥೈರಾಯ್ಡ್ ಗ್ರಂಥಿ ಕಾರ್ಯ ನಿರ್ವಹಿಸಲು ಅಗತ್ಯ. ಸಾಮಾನ್ಯವಾಗಿ ಇದನ್ನು ಅಡುಗೆ ಮಾಡಿದ ನಂತರ ಅಥವಾ ಸಲಾಡ್‌ಗಳಲ್ಲಿ ಬಳಸಲಾಗುತ್ತದೆ.

ಸಮುದ್ರ ಉಪ್ಪು

ಸಮುದ್ರದ ಉಪ್ಪಿನಲ್ಲಿ ಮೆಗ್ನೀಷಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂ ಸಮೃದ್ಧವಾಗಿದೆ. ಟೇಬಲ್ ಉಪ್ಪಿಗಿಂತ ಇದರ ರುಚಿ ಸ್ವಲ್ಪ ಹೆಚ್ಚು. ಇದನ್ನು ಅಡುಗೆ ಮಾಡಲು ಬಳಸುತ್ತಾರೆ.

ಹಿಮಾಲಯನ್ ಪಿಂಕ್ ಉಪ್ಪು

ಹಿಮಾಲಯದ ಬೆಟ್ಟಗಳಲ್ಲಿರುತ್ತೆ ಇದು. ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಮ್‌ನಂಥ ಖನಿಜಗಳಿಂದ ಸಮೃದ್ಧವಾಗಿದೆ. ಇದು ದೇಹದ PH ಮಟ್ಟವನ್ನು ಸಮತೋಲನಗೊಳಿಸಿ, ಜೀರ್ಣಕ್ರಿಯೆಗೆ ಸಹಕರಿಸುತ್ತದೆ. 

ಕೋಷರ್ ಉಪ್ಪು

ಕೋಷರ್ ಉಪ್ಪು ದೊಡ್ಡ ದೊಡ್ಡ ಹರಳುಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಮಸಾಲೆ ಮತ್ತು ಮಾಂಸದ ಗ್ರೇವಿ ತಯಾರಿಸಲು ಬಳಸಲಾಗುತ್ತದೆ.

ಸೆಲ್ಟಿಕ್ ಸಮುದ್ರ ಉಪ್ಪು

ಸೆಲ್ಟಿಕ್ ಸಮುದ್ರದ ಉಪ್ಪಿನಲ್ಲಿ ಮೆಗ್ನೀಷಿಯಮ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ, ಇದು ಸ್ನಾಯುಗಳಿಗೆ ತುಂಬಾ ಪ್ರಯೋಜನಕಾರಿ. ಈ ಉಪ್ಪನ್ನು ಸ್ನಾನದ ನೀರಲ್ಲೂ ಬಳಸಬಹುದು.

ಕಪ್ಪು ಉಪ್ಪು

ಕಪ್ಪು ಉಪ್ಪು ಸಾಮಾನ್ಯ ಉಪ್ಪಿನಿಂದ ಭಿನ್ನ. ಇದು ತಿಳಿ ಗುಲಾಬಿ ಬಣ್ಣದಲ್ಲಿರೋ ಈ ಉಪ್ಪು ಜೀರ್ಣಾಂಗ ವ್ಯವಸ್ಥೆ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತದೆ. ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಕೆಂಪು ಹವಾಯಿಯನ್ ಉಪ್ಪು

ಅಲಿಯಾ ಉಪ್ಪು ಎನ್ನುವ ಇದಕ್ಕೆ ಜ್ವಾಲಾಮುಖಿ ಮಣ್ಣಿರುತ್ತದೆ. ಇದು ಕಬ್ಬಿಣದ ಆಕ್ಸೈಡ್‌ನಂತಹ ಖನಿಜಗಳನ್ನು ಹೆಚ್ಚಿಸುತ್ತದೆ. ಹವಾಯಿಯನ್ ಆಹಾರದಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಸೈಂಧವ ಲವಣ

ಸೈಂಧವ ಲವಣದಲ್ಲಿ ಅಯೋಡಿನ್ ಕಡಿಮೆ ಪ್ರಮಾಣದಲ್ಲಿರುತ್ತದೆ. ಈ ಉಪ್ಪನ್ನು ಸಾಮಾನ್ಯವಾಗಿ ಉಪವಾಸದ ಸಮಯದಲ್ಲಿ ಬಳಸಲಾಗುತ್ತದೆ. 

Find Next One