Kannada

ಸ್ಪೆಷಲ್ ರೆಸಿಪಿ

ಇಲ್ಲಿವರೆಗೆ ನೀವು ನುಗ್ಗೆ ಸೊಪ್ಪಿನ ಪಲ್ಯ, ಪರೋಟ ಹಾಗೂ ಪಕೋಡ ಮಾಡಿ ಕೂಡ ಸವಿದಿರಬಹುದು. ಆದರೆ ಇವತ್ತು ಸ್ಪೆಷಲ್ ರೆಸಿಪಿ ಒಂದನ್ನ ನಿಮಗಾಗಿ ತಂದಿದ್ದೇವೆ.

Kannada

ನುಗ್ಗೆ ಸೊಪ್ಪಿನ ಹಲ್ವಾ

ಆ ಸ್ಪೆಷಲ್ ರೆಸಿಪಿ ಏನಂದ್ರೆ ನುಗ್ಗೆ ಸೊಪ್ಪಿನ ಹಲ್ವಾ. ಹೌದು ಈ ಹಲ್ವಾ ಕೂಡ ಆರೋಗ್ಯಯುತವಾಗಿರುವುದರ ಜೊತೆಗೆ ತಿನ್ನಲು ತುಂಬಾನೇ ಟೇಸ್ಟಿ ಆಗಿರುತ್ತದೆ. ಹಾಗಾದರೆ ಮಾಡೋದು ಹೇಗೆ ನೋಡೋಣ.

Image credits: Getty
Kannada

ಸ್ಟೆಪ್ 1

ಮೊದಲಿಗೆ ನುಗ್ಗೆ ಸೊಪ್ಪನ್ನ ತೆಗೆದು ಅದನ್ನ ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿಡಿ. ಸಾಧ್ಯವಾದಷ್ಟು ಸೊಪ್ಪಿನ ಸಣ್ಣ ದಂಟುಗಳನ್ನ ಅವಾಯ್ಡ್ ಮಾಡಿ.

Image credits: Getty
Kannada

ಸ್ಟೆಪ್ 2

ಈಗ ಸೊಪ್ಪನ್ನ ನೀರಿನಲ್ಲಿ ಹಾಕಿ ಅದನ್ನ ಕುದಿಯಲು ಬಿಡಿ. ಹತ್ತು ನಿಮಿಷದ ಬಳಿಕ ನೀರನ್ನು ತೆಗೆದು ಕೇವಲ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗಿನ ಪೇಸ್ಟ್ ತಯಾರಿಸಿ.

Image credits: AI
Kannada

ಸ್ಟೆಪ್ 3

ಈಗ ಒಂದು ಕಡಾಯಿ ತೆಗೆದುಕೊಂಡು ಅದರಲ್ಲಿ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ನುಣ್ಣಗೆ ರುಬ್ಬಿಕೊಂಡಿರುವ ನುಗ್ಗೆ ಸೊಪ್ಪಿನ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

Image credits: Getty
Kannada

ಸ್ಟೆಪ್ 4

ನೆನಪಿಡಿ ಹಲ್ವಾ ತಯಾರಿಸುವಾಗ ಸ್ಟೌ ಸಣ್ಣ ಬೆಂಕಿಯಲ್ಲಿ ಇರಲಿ. ಸೊಪ್ಪಿನ ಹಸಿ ವಾಸನೆ ಹೋಗುವವರೆಗೂ ಮಿಕ್ಸ್ ಮಾಡುತ್ತೀರಿ.

Image credits: social media
Kannada

ಸ್ಟೆಪ್ 5

ಈಗ ಈ ಮಿಶ್ರಣಕ್ಕೆ ಸ್ವಲ್ಪ ಹಾಲು ಹಾಗೂ ಸ್ವಾಧಕ್ಕೆ ಅನುಸಾರವಾಗಿ ಸಕ್ಕರೆ ಸೇರಿಸಿ ಕುದಿಯಲು ಬಿಡಿ. ಹಾಲು ಮತ್ತು ಸಕ್ಕರೆ ಚೆನ್ನಾಗಿ ಕುದಿದು ಗಟ್ಟಿಯಾಗುತ್ತಾ ಬರುವವರೆಗೂ ಕೈ ಬಿಡದೆ ಮಿಕ್ಸ್ ಮಾಡಿ.

Image credits: AI
Kannada

ಸ್ಟೆಪ್ 6

ಕೊನೆಯದಾಗಿ ಈ ಮಿಶ್ರಣಕ್ಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮ್, ಒಣ ದ್ರಾಕ್ಷಿಗಳನ್ನ ಹಾಕಿ. ಇದರಿಂದ ಸ್ವಾಧ ಮತ್ತಷ್ಟು ಹೆಚ್ಚುತ್ತದೆ.

Image credits: Asianet News
Kannada

ಬಿಸಿ ಬಿಸಿಯಾಗಿ ಸರ್ವ್ ಮಾಡಿ

ಈಗ ತಯಾರಾದ ನುಗ್ಗೆ ಸೊಪ್ಪಿನ ಹಲ್ವವನ್ನು ಬಿಸಿ ಬಿಸಿಯಾಗಿ ಸರ್ವ್ ಮಾಡಿ. ಇದನ್ನು ತಣ್ಣಗಾದ ಬಳಿಕ ಕೂಡ ಸೇವಿಸಬಹುದು ತುಂಬಾನೆ ಟೇಸ್ಟಿ ಆಗಿರುತ್ತೆ. ಇವತ್ತೇ ಟ್ರೈ ಮಾಡಿ ನೋಡಿ.

Image credits: Getty

ಶುಗರ್ ಕಡಿಮೆ ಆಗಬೇಕಾ? ಪ್ರತಿದಿನ ಈ 5 ಪಾನೀಯಗಳನ್ನು ಕುಡಿಯಬೇಡಿ!

ಏನ್ ಮಾಡಿದ್ರೂ ದೇಹದಲ್ಲಿರೋ ಬೊಜ್ಜು ಕಡಿಮೆ ಆಗ್ತಿಲ್ವಾ? ಹೀಗ್ ಮಾಡಿ!

ಟೊಮೆಟೊ ತಿಂದ್ರೆ ಆರೋಗ್ಯಕ್ಕೆ ಇವೆಲ್ಲಾ ಅದ್ಭುತ ಲಾಭಗಳಿವೆ ನೋಡಿ!

ಪ್ರತಿದಿನ ಬಿಳಿ ಕಡಲೆ ತಿಂದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ?