Food

ಟೊಮೆಟೊ ಸಂಗ್ರಹಿಸುವುದು ಹೇಗೆ ?

ಟೊಮೆಟೋ ಬೆಲೆ ನೋಡಿದ್ರೆ ಹೆಚ್ಚಾಗ್ತಾನೆ ಇದೆ. ಟೊಮೆಟೋ ಇಲ್ದೆ ಏನಾದ್ರೂ ಅಡುಗೆ ಮಾಡೋಕೆ ಹೊರಟ್ರೆ ಅದು ಕೂಡಾ ಸರಿಯಾಗಲ್ಲ. ಸೋ, ಟೊಮೆಟೋ ದೀರ್ಘಕಾಲದವರೆಗೆ ಹಾಳಾಗದಂತೆ ತಾಜಾ ಆಗಿಡಲು ಇಲ್ಲಿದೆ ಕೆಲವು ಟಿಪ್ಸ್‌.

Image credits: Freepik

ಕೊಠಡಿಯ ತಾಪಮಾನ

ಟೊಮೇಟೋ ಕೋಣೆಯ ಉಷ್ಣಾಂಶದಲ್ಲಿ ಹಾಳಾಗುತ್ತದೆ. ಹೀಗಾಗಿ ಇದನ್ನು ಯಾವತ್ತೂ ನೇರ ಸೂರ್ಯನ ಬೆಳಕಿನಿಂದ ದೂರದಲ್ಲಿ ಸಂಗ್ರಹಿಸಬೇಕು. 

Image credits: Freepik

ರೆಫ್ರಿಜರೇಟರ್‌ನಲ್ಲಿ ತೆಗೆದಿಡಿ

ಟೊಮೆಟೊಗಳನ್ನು ಶೈತ್ಯೀಕರಣಗೊಳಿಸಲು, ಅವುಗಳನ್ನು ಕಾಗದದ ಚೀಲದಲ್ಲಿ ಇರಿಸಿ ಅಥವಾ ತೇವಾಂಶದಿಂದ ರಕ್ಷಿಸಲು ಕಾಗದದ ಟವೆಲ್‌ನಲ್ಲಿ ಕಟ್ಟಿ.

Image credits: Freepik

ಬೇಯಿಸಿ ತೆಗೆದಿಡಿ

ಟೊಮೆಟೋವನ್ನು ಚೆನ್ನಾಗಿ ಬೇಯಿಸಿ, ತಣ್ಣೀರಿನಲ್ಲಿ ತೊಳೆದುಕೊಳ್ಳಿ. ನಂತರ ಸಿಪ್ಪೆ ತೆಗೆದು ಟೊಮೆಟೋವನ್ನು ಕಟ್ ಮಾಡಿ ಬಾಕ್ಸ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ.

Image credits: Freepik

ಇತರ ಉತ್ಪನ್ನಗಳೊಂದಿಗೆ ಸಂಗ್ರಹಿಸದಿರಿ

ಟೊಮೆಟೊಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿಟ್ಟರೆ ದೀರ್ಘಕಾಲ ಉಳಿಯುತ್ತದೆ. ಉಳಿದ ತರಕಾರಿಗಳ ಜೊತೆ ಮಿಕ್ಸ್ ಮಾಡಿಟ್ಟರೆ ಬೇಗನೇ ಕೊಳೆತು ಹೋಗುತ್ತದೆ.

Image credits: Freepik

ಹಾಳಾಗುವುದನ್ನು ಪರಿಶೀಲಿಸಿ

ಟೊಮೆಟೋ ಹಾಳಾಗದೆ ಇರಬೇಕಾದರೆ ಆಗಾಗ ಪರಿಶೀಲಿಸುತ್ತಿರಬೇಕು. ಬಣ್ಣ ಬದಲಾಗಿದೆಯೇ, ಮೆತ್ತಗಾಗಿದೆಯಾ ಎಂಬುದನ್ನು ನಿಯಮಿತವಾಗಿ ಪರೀಕ್ಷಿಸಿ. ಹಾಳಾದ ಟೊಮೆಟೊಗಳನ್ನು ಒಟ್ಟಿಗೇ ಇಡಬೇಡಿ

Image credits: Freepik
Find Next One