Food
ಬೆಳಗ್ಗಿನ ಉಪಾಹಾರದಿಂದ ರಾತ್ರಿಯ ಊಟದ ವರೆಗೆ ನೀತಾ ಅಂಬಾನಿ ಏನನ್ನೆಲ್ಲಾ ತಿನ್ನುತ್ತಾರೆ
ಬೆಳಗ್ಗಿನ ಉಪಾಹಾರಕ್ಕೆ ನೀತಾ ಅಂಬಾನಿ ಡ್ರೈ ಫ್ರೂಟ್ಸ್ ತಿನ್ನಲು ಇಷ್ಟಪಡುತ್ತಾರೆ. ಇದು ಪ್ರೊಟೀನ್ಸ್, ಕ್ಯಾಲ್ಸಿಯಂ ಮತ್ತು ಇತರ ಹಲವು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.
ನೀತಾ ಉಪಾಹಾರಕ್ಕೆ ಮೊಟ್ಟೆಯ ಆಮ್ಲೆಟ್ ಮತ್ತು ಬೀಟ್ರೂಟ್ ಜ್ಯೂಸ್‌ನ್ನು ಸಹ ಸೇವಿಸುತ್ತಾರೆ. ಇದು ರಕ್ತದೊತ್ತಡವನ್ನು ಸುಧಾರಿಸುತ್ತದೆ.
ನೀತಾ ಅಂಬಾನಿ ಮಧ್ಯಾಹ್ನದ ಊಟವನ್ನು ಯಾವತ್ತೂ ಸ್ಕಿಪ್ ಮಾಡುವುದಿಲ್ಲ. ಮಧ್ಯಾಹ್ನದ ಊಟದಲ್ಲಿ ಅವರು ಸಾಕಷ್ಟು ಹಸಿರು ತರಕಾರಿಗಳನ್ನು ತಿನ್ನುತ್ತಾರೆ.
ವಿಟಮಿನ್ ಕೆ, ಮೆಗ್ನೀಸಿಯಮ್, ವಿಟಮಿನ್ ಬಿ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ನಿಯಂತ್ರಣದಲ್ಲಿಡಲು ನೀತಾ ತರಕಾರಿ ಸೂಪ್ ಕುಡಿಯಲು ಇಷ್ಟಪಡುತ್ತಾರೆ.
ನೀತಾ ಅಂಬಾನಿ ಸಸ್ಯಾಹಾರಿಯಾಗಿದ್ದು, ಊಟದಲ್ಲಿ ಹೆಚ್ಚು ಹಣ್ಣು, ತರಕಾರಿಗಳನ್ನು ಸೇರಿಸಿಕೊಳ್ಳುತ್ತಾರೆ. ಮೊಳಕೆ ಕಾಳುಗಳಿಗೂ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
ನೀತಾ ಲಘು ಭೋಜನವನ್ನು ಇಷ್ಟಪಡುತ್ತಾರೆ. ಯಾಕೆಂದರೆ ಇದು ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ತೂಕವನ್ನು ನಿಯಂತ್ರಿಸುವುದರ ಜೊತೆಗೆ ನಿದ್ರೆಯನ್ನು ಸುಧಾರಿಸುತ್ತದೆ.
ನೀತಾ ಅಂಬಾನಿ ಒಂದು ದಿನವೂ ಹಣ್ಣುಗಳನ್ನು ಸೇವಿಸದೆ ಬಿಡುವುದಿಲ್ಲ. ಊಟದ ನಡುವಿನ ಆಹಾರದಲ್ಲಿ ಹಣ್ಣುಗಳನ್ನು ಸೇರಿಸಿಕೊಳ್ಳುತ್ತಾರೆ.
ದಿನವಿಡೀ ಡಿಟಾಕ್ಸ್ ನೀರನ್ನು ಕುಡಿಯುತ್ತಿರುತ್ತಾರೆ. ಇವು ಜೀರ್ಣಕಾರಿ ಬೂಸ್ಟರ್, ಎನರ್ಜಿ ಬೂಸ್ಟರ್, ಇಮ್ಯುನಿಟಿ ಬೂಸ್ಟರ್ ಆಗಿವೆ. ಚರ್ಮದ ಆರೋಗ್ಯ ಸುಧಾರಿಸುತ್ತದೆ.
ಬಿಡುವಿಲ್ಲದೆ ದಿನಚರಿಯ ದಿನಗಳಲ್ಲೂ ನೀತಾ ಅಂಬಾನಿ ಎಕ್ಸರ್‌ಸೈಸ್ ಮಾಡುವುದು ಬಿಟ್ಟು ಬಿಡುವುದಿಲ್ಲ. ಯೋಗ, ಈಜು ಮತ್ತು ಜಿಮ್‌ನ್ನು ನಿಯಮಿತವಾಗಿ ಮಾಡುತ್ತಿರುತ್ತಾರೆ