ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಕೆಲವು ಆಹಾರಗಳ ಸೇವನೆಯ ಮೂಲಕ ನೀವು ಹೃದಯದ ಆರೋಗ್ಯವನ್ನು ಕಾಪಾಡಬಹುದು. ಆ ಕುರಿತಾದ ಮಾಹಿತಿ ಇಲ್ಲಿದೆ.
Image credits: Getty
ಆಲೂಗಡ್ಡೆ
ಆಲೂಗಡ್ಡೆಯಲ್ಲಿ ಪೊಟ್ಯಾಶಿಯಂ ಮತ್ತು ಫೈಬರ್ ಅಧಿಕವಾಗಿರುತ್ತದೆ. ಇದು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆಗೊಳಿಸುತ್ತದೆ.
Image credits: others
ಟೊಮೆಟೋ
ಆಲೂಗಡ್ಡೆಯಲ್ಲಿ ಇರುವಂತೆ ಟೊಮೆಟೋದಲ್ಲಿ ಪೊಟ್ಯಾಶಿಯಂ ಅಂಶವಿದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕಡಿಮೆ ಮಾಡುವ ಲೈಕೋಪಿನ್ ಅಂಶವಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು
Image credits: others
ಮೀನು
ಒಮೆಗಾ-3 ಅಂಶವುಳ್ಳ ಮೀನು ಹೃದಯ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ದೇಹದಲ್ಲಿನ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ.
Image credits: others
ಪುದೀನಾ
ಸೊಪ್ಪುಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೊತ್ತಂಬರಿ ಸೊಪ್ಪು ಪುದೀನಾ, ತುಳಸಿ ಮೊದಲಾದವುಗಳನ್ನು ಆಹಾರದಲ್ಲಿ ಬಳಸುವುದು ಒಳ್ಳೆಯದು. ಇದು ಹೃದಯದ ಆರೋಗ್ಯವನ್ನು ಉತ್ತಮವಾಗಿಡುತ್ತದೆ.
Image credits: others
ಬ್ಲ್ಯಾಕ್ ಬೀನ್ಸ್
ಬ್ಲ್ಯಾಕ್ ಬೀನ್ಸ್ ಸಂಪೂರ್ಣವಾಗಿ ಮಿನರಲ್ಸ್‌ಗಳಿಂದ ಕೂಡಿದೆ. ಹೀಗಾಗಿ ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಮ್ಯಾಗ್ನೇಶಿಯಂ, ಫೋಲೇಟ್, ಆಂಟಿ ಆಕ್ಸಿಡೆಂಟ್ಸ್ ರಕ್ತದೊತ್ತ ಕಡಿಮೆ ಮಾಡುತ್ತದೆ.