ಒಗ್ಗರಣೆ ಹಾಕುವಾಗ ಎಣ್ಣೆ ಸಿಡಿದು ಅಡುಗೆ ಮನೆಯ ಗೋಡೆಗಳೆಲ್ಲಾ ಗಲೀಜಾಗುವುದು ದೊಡ್ಡ ತಲೆನೋವು. ಆದರೆ ಇನ್ನು ಮುಂದೆ ಈ ಚಿಂತೆ ಬೇಡ!
ಸಾಸಿವೆ ಅಥವಾ ಕರಿಬೇವು ಎಣ್ಣೆಗೆ ಹಾಕಿದ ತಕ್ಷಣ ಎಣ್ಣೆ ಹೊರಗೆ ಸಿಡಿಯುತ್ತದೆ. ಇದು ಕೇವಲ ಗೋಡೆ ಮಾತ್ರವಲ್ಲ, ನಿಮ್ಮ ಕೈಗಳ ಮೇಲೂ ಬಿದ್ದು ಸುಟ್ಟ ಗಾಯವಾಗಬಹುದು.
ಇದನ್ನು ತಡೆಯಲು ನೀವು ಅಡುಗೆ ಮನೆಯಲ್ಲಿರುವ ಕೇವಲ ಒಂದು ವಸ್ತುವನ್ನು ಬಳಸಿದರೆ ಸಾಕು. ಅದೇ 'ಉಪ್ಪು'!
ಬಾಣಲೆಗೆ ಒಗ್ಗರಣೆ ಎಣ್ಣೆ ಹಾಕಿದ ನಂತರ, ಎಣ್ಣೆ ಕಾದ ತಕ್ಷಣ ಅದಕ್ಕೆ ಒಂದು ಚಿಟಿಕೆಯಷ್ಟು ಪುಡಿ ಉಪ್ಪನ್ನು ಸೇರಿಸಿ.
ಎಣ್ಣೆಗೆ ಚಿಟಿಕೆ ಉಪ್ಪು ಸೇರಿದ ನಂತರ ನೀವು ಸಾಸಿವೆ ಅಥವಾ ಬೇರೆ ಯಾವುದೇ ಪದಾರ್ಥ ಹಾಕಿದರೂ ಎಣ್ಣೆ ಸ್ವಲ್ಪವೂ ಹೊರಗೆ ಸಿಡಿಯುವುದಿಲ್ಲ.
ಈ ಪುಟ್ಟ ಟ್ರಿಕ್ ಅನುಸರಿಸುವುದರಿಂದ ಅಡುಗೆ ಮನೆಯ ಟೈಲ್ಸ್ ಮತ್ತು ಗೋಡೆಗಳು ಜಿಡ್ಡಿನ ಕಲೆಗಳಿಂದ ಮುಕ್ತವಾಗಿರುತ್ತವೆ. ನಿಮ್ಮ ಕೆಲಸವೂ ಸುಲಭವಾಗುತ್ತದೆ.
ತಿಂಡಿಯಿಂದ ಸ್ವೀಟ್‌ವರೆಗೆ, ಅತ್ಯಂತ ರುಚಿ ಹಾಗೂ ಪೋಷಕಾಂಶದ ಅವಕಾಡೋ ರೆಸಿಪಿ
ಚಿಕನ್ ರೆಸಿಪಿ ಮಾಡುವಾಗ ಮೊಸರು ಮಿಕ್ಸ್ ಮಾಡೋದು ಯಾಕೆ ಗೊತ್ತಾ?
ಮತ್ತಿ ಮೀನಿಗಿಂತ ಹಿಲ್ಸಾ ರುಚಿಕರವೇ? ಅಸಲಿ ಹಿಲ್ಸಾ ಗುರುತಿಸುವುದು ಹೇಗೆ?
ಸ್ತನ ಕ್ಯಾನ್ಸರ್ ತಡೆಯಲು ಮಹಿಳೆಯರು ಈ ಆಹಾರ ತಪ್ಪದೇ ಸೇವಿಸಿ