Food
ಮೊಸರು ದೇಹವನ್ನು ಹೈಡ್ರೇಟ್ ಮಾಡುವ ಕೆಲಸ ಮಾಡುತ್ತದೆ. ಇದರಲ್ಲಿರುವ ಪ್ರೋಬಯಾಟಿಕ್‌ಗಳು ನಮ್ಮನ್ನು ರೋಗಗಳಿಂದ ದೂರವಿರಿಸುತ್ತದೆ. ಮೊಸರಿನಲ್ಲಿ ವಿಟಮನ್ ಇ, ಸತು ಮತ್ತು ರಂಜಕವೂ ಹೇರಖವಾಗಿದೆ.
ನೀವು ಸುಲಭವಾಗಿ ಮನೆಯಲ್ಲೇ ಮೊಸರನ್ನು ತಯಾರಿಸಬಹುದು. ರುಚಿಕರವಾದ ಮೊಸರನ್ನು ತಯಾರಿಸಲು ಕೇವಲ ಹದಿನೈದೇ ನಿಮಿಷ ಸಾಕು. ಅದ್ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಮೊದಲು ಹಾಲನ್ನು ಬಿಸಿ ಮಾಡಿ. ಹಾಲು ಕುದಿ ಬಂದಾಗ, ಗ್ಯಾಸ್ ಆಫ್ ಮಾಡಿ ಹಾಲು ತಣ್ಣಗಾಗಲು ಬಿಡಿ.
ಒಂದು ಮಣ್ಣಿನ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಮೊಸರನ್ನು ಹಾಕಿ
ಹಾಲು ಉಗುರು ಬೆಚ್ಚಗಿರುವಾಗಲೇ ಅದನ್ನು ಮಣ್ಣಿನ ಪಾತ್ರೆಗೆ ಸುರಿಯಿರಿ. ನಂತರ ಅಲ್ಯೂಮಿನಿಯಂ ಫಾಯಿಲ್‌ನಿಂದ ಸುತ್ತಿ
ಈಗ ದೊಡ್ಡ ಕುಕ್ಕರ್‌ನಲ್ಲಿ ನೀರು ತುಂಬಿಸಿ. ನೀರು ಕುದಿಯಲು ಆರಂಭಿಸಿದಾಗ ಅದರಲ್ಲಿ ಮೊಸರು ಇರುವ ಮಣ್ಣಿನ ಪಾತ್ರೆಯನ್ನು ಇರಿಸಿ. ಅದರೊಳಗೆ ನೀರು ಬರದಂತೆ ಎಚ್ಚರ ವಹಿಸಿ.
ಕುಕ್ಕರ್ ಮುಚ್ಚಳವನ್ನು ವಿಶಲ್ ಇಲ್ಲದೆ ಹಾಕಿ. 10 ನಿಮಿಷಗಳ ಕಾಲ ಹಬೆಯಲ್ಲಿ ಬಿಡಿ.
10 ನಿಮಿಷಗಳ ನಂತರ, ಮಣ್ಣಿನ ಮಡಕೆಯನ್ನು ಬಟ್ಟೆಯ ಸಹಾಯದಿಂದ ಹೊರತೆಗೆಯಿರಿ.ಅಲ್ಯೂಮಿನಿಯಂ ಫಾಯಿಲ್‌ನ್ನು ತೆಗೆದು ಹಾಕಿ. ಈಗ ದಪ್ಪಗಿರುವ ಮೊಸರು ನಿಮಗೆ ಸಿಗುತ್ತದೆ.
ನೀವು ಈ ಗಟ್ಟಿಯಾದ ಮೊಸರನ್ನು ಲಸ್ಸಿ, ರಾಯ್ತಾ ಅಥವಾ ಇತರ ಯಾವುದೇ ಆಹಾರಕ್ಕೆ ಬಳಸಬಹುದು.