Food
ಮಕ್ಕಳಿಗೆ ಫ್ರೆಂಚ್ ಫ್ರೈ ಅಂದ್ರೆ ತುಂಬಾನೆ ಇಷ್ಟ. ಹಾಗಂತ ಅಂಗಡಿಯಲ್ಲಿ ಸಿಗುವ ಫ್ರೆಂಚ್ ಫ್ರೈ ನೀಡೋದು ಮಕ್ಕಳ ಆರೋಗ್ಯಕ್ಕೆ ಮಾರಕವಾಗಬಹುದು. ಹಾಗಾಗಿ ನೀವು ಮನೆಯಲ್ಲಿಯೇ ಇದನ್ನ ತಯಾರಿಸಬಹುದು.
ನಿಮಗೂ ಹೀಗೆ ಆಗುತ್ತಾ? ಮನೆಯಲ್ಲಿ ಫ್ರೆಂಚ್ ಫ್ರೈ ಮಾಡಿದ ಸ್ವಲ್ಪ ಹೊತ್ತಲೇ ಅದು ಸಾಪ್ಟ್ ಆಗಿ ಹೋಗುತ್ತಾ? ತಿನ್ನೋವಾಗ ಕ್ರಂಚಿನೆಸ್ ಇರೋದಿಲ್ವಾ?
ನೀವೂ ಕೂಡ ಮ್ಯಾಕ್ ಡೊನಾಲ್ಡ್‌ನಲ್ಲಿ ಸಿಗುವಂತಹ ಕ್ರಿಸ್ಪಿ ಮತ್ತು ಕ್ರಂಚಿಯಾದಂತಹ ಫ್ರೆಂಚ್ ಫ್ರೈ ಮಾಡಲು ಬಯಸಿದ್ರೆ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ.
ಕ್ರಿಸ್ಪಿ ಫ್ರೆಂಚ್ ಫ್ರೈ ತಯಾರಿಸಲು ಆಲೂಗಡ್ಡೆ ಸಿಪ್ಪೆ ತೆಗೆದು ತೊಳೆದು, ಉದ್ದವಾಗಿ ಕತ್ತರಿಸಿ, ಅದನ್ನು ಐಸ್ ನೀರಿನಲ್ಲಿ 15 ನಿಮಿಷಗಳ ಕಾಲ ಹಾಕಿಡಿ. ಬಳಿಕ ಅದನ್ನು ಚೆನ್ನಾಗಿ ಬಟ್ಟೆಯಲ್ಲಿ ಚೆನ್ನಾಗಿ ಉಜ್ಜಿ.
ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದ ಸ್ಟಾರ್ಚ್ ಇರುತ್ತೆ. ಇದರಿಂದ ಫ್ರೆಂಚ್ ಫ್ರೈ ಬೇಗನೆ ಸಾಫ್ಟ್ ಆಗುತ್ತೆ. ಹಾಗಾಗಿ ಐಸ್ ನೀರಿನಲ್ಲಿ ಆಲೂಗಡ್ಡೆ ಹಾಕಿಟ್ಟರೆ ಅದರ ಸ್ಟಾರ್ಚ್ ಬಿಡುತ್ತದೆ.
ಕ್ರಿಸ್ಪಿ ಫ್ರೆಂಚ್ ಫ್ರೈ ತಯಾರಿಸಲು ಸಮ ಪ್ರಮಾಣದಲ್ಲಿ ಕಾರ್ನ್ ಫ್ಲೋರ್ ಮತ್ತು ಮೈದಾ ಬಳಸಿ. ಆಲೂಗಡ್ಡೆಯನ್ನು ಇದರಲ್ಲಿ ಚೆನ್ನಾಗಿ ಕವರ್ ಮಾಡಿ, ಒಂದು ಬಾರಿ ಡೀಪ್ ಫ್ರೈ ಮಾಡಿ ತೆಗೆಯಿರಿ.
ಫ್ರೆಂಚ್ ಫ್ರೈ ಯನ್ನು ಕ್ರಿಸ್ಪಿಯಾಗಿಸಲು ಇದನ್ನು ನೀವು ಎರಡು ಬಾರಿ ಫ್ರೈ ಮಾಡೋದು ಮುಖ್ಯ. ಒಂದು ಸಲ ಅರ್ಧ ಫ್ರೈ ಮಾಡಿ ಬಳಿಕ, ತುಂಬಾ ಬಿಸಿಯಾದ ಎಣ್ಣೆಯಲ್ಲಿ ಇನ್ನೊಂದು ಬಾರಿ ಫ್ರೈ ಮಾಡಿ.
ತುಂಬಾ ಸಮಯದವರೆಗೆ ಫ್ರೆಂಚ್ ಫ್ರೈ ಕ್ರಿಸ್ಪಿಯಾಗಿರಬೇಕೆಂದು ಬಯಸಿದ್ರೆ ಅದರ ಮೇಲೆ ಉಪ್ಪನ್ನು ಹಾಕಬೇಡಿ. ಉಪ್ಪು ಹಾಕಿದ್ರೆ ಫ್ರೆಂಚ್ ಫ್ರೈ ಬೇಗನೆ ಸಾಫ್ಟ್ ಆಗುತ್ತೆ.