ಮೈಸೂರಿನ ಹೆಸರು ಕೇಳಿದಾಗ ದಸರಾ ನೆನಪಾಗೋ ಹಾಗೆಯೇ ಬಾಯಲ್ಲಿ ನೀರೂರಿಸೋ ಮೈಸೂರ್ ಪಾಕ್ ಕಣ್ಮುಂದೆ ಬರುತ್ತದೆ. ಬೆಂಗಳೂರಲ್ಲಿ ಟೇಸ್ಟೀ ಮೈಸೂರ್‌ಪಾಕ್ ಸಿಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.
Image credits: others
ಎಸ್‌ಆರ್‌ಎಂ ಸ್ವೀಟ್ಸ್
ಬೆಂಗಳೂರಿನ ಎಸ್‌ಆರ್‌ಎಂ ಸ್ವೀಟ್ಸ್‌ನಲ್ಲಿ ಸ್ವಾದಿಷ್ಟಕರವಾದ ಮೈಸೂರ್‌ಪಾಕ್ ಲಭ್ಯವಿರುತ್ತದೆ. ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಈ ಶಾಪ್ ಬೆಳಗ್ಗೆ 8.30ಯಿಂದ ರಾತ್ರಿ 10 ಗಂಟೆಯ ವರೆಗೆ ಓಪನ್ ಇರಲಿದೆ.
Image credits: others
ಆನಂದ್ ಸ್ವೀಟ್ಸ್
ಬನ್ನೇರುಘಟ್ಟ ರಸ್ತೆಯ ಹುಳಿಮಾವಿನಲ್ಲಿರುವ ಆನಂದ್ ಸ್ವೀಟ್ಸ್‌ನಲ್ಲಿ ಬಾಯಲ್ಲಿ ನೀರೂರಿಸೋ ಮೈಸೂರ್ ಪಾಕ್ ಸಿಗುತ್ತೆ. ಬೆಳಗ್ಗೆ 10ರಿಂದ ರಾತ್ರಿ 10ರ ವರೆಗೆ ಓಪನ್ ಇರುತ್ತದೆ.
Image credits: others
ಮಾಲ್ಗುಡಿ ಮೈಲಾರಿ ಮನೆ
ಕೋರಮಂಗಲದ ಕೆಹೆಚ್‌ಬಿ ಕಾಲೋನಿಯಲ್ಲಿರುವ ಮಾಲ್ಗುಡಿ ಮೈಲಾರಿ ಮನೆಯಲ್ಲಿ ರುಚಿಕರವಾದ ಮೈಸೂರ್ ಪಾಕ್ ಲಭ್ಯವಿದೆ. ಬೆಳಗ್ಗೆ ಎಂಟರಿಂದ ರಾತ್ರಿ ಹತ್ತು ಗಂಟೆಯ ವರೆಗೆ ಶಾಪ್ ತೆರೆದಿರುತ್ತದೆ/
Image credits: others
ಆಶಾ ಸ್ವೀಟ್ಸ್
ಬಸವನಗುಡಿಯಲ್ಲಿ ಆಶಾ ಸ್ವೀಟ್ಸ್ ಬಾಯಲ್ಲಿಟ್ಟರೆ ಕರಗುವ ಮೈಸೂರ್ ಪಾಕ್‌ಗೆ ಫೇಮಸ್ ಆಗಿದೆ. ಇಬ್ಬರಿಗೆ ಮೈಸೂರ್ ಪಾಕ್ ತಿನ್ನಲು 250 ರೂ. ಇದ್ದರೆ ಸಾಕಾಗುತ್ತದೆ.