Food
ಇತ್ತೀಚಿಗೆ ಮಾರುಕಟ್ಟೆಯಲ್ಲಿ ನಕಲಿಗಳ ಹಾವಳಿ ಹೆಚ್ಚಾಗಿದೆ. ಉಪಯೋಗಿಸೋ ವಸ್ತುಗಳಿಂದ ತೊಡಗಿ ತಿನ್ನೋ ಆಹಾರವೂ ನಕಲಿ ರೂಪದಲ್ಲಿರುತ್ತದೆ. ಇತ್ತೀಚಿಗೆ ಅಕ್ಕಿಯೂ ನಕಲಿ ಸಿಗುತ್ತಿದೆ.
ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ಮಿಕ್ಸ್ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಕೆಲ ವರುಷಗಳ ಹಿಂದೆ ಬೆಳಕಿಗೆ ಬಂದಿತ್ತು. ಹೀಗಾಗಿ ನಕಲಿ ಮತ್ತು ಅಸಲಿ ಅಕ್ಕಿ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು.
ನೀವು ಉತ್ತಮ ಹಳೆ ಅಕ್ಕಿಯನ್ನು ಖರೀದಿಸಲು ಬಯಸಿದರೆ, ತಿಳಿ ಹಳದಿ ಬಣ್ಣದ ಅಕ್ಕಿಯನ್ನು ಖರೀದಿಸಿ. ಈ ಅಕ್ಕಿ ಹಳೆಯದಾಗಿದ್ದು, ಬೇಯಿಸಿದಾಗಲೂ ರುಚಿಯಾಗಿರುತ್ತದೆ.
ಒಂದು ಹಿಡಿ ಅಕ್ಕಿಯನ್ನು ನೀರಿನಲ್ಲಿ ನೆನೆಸಿ, ಎರಡು ಮೂರು ದಿನಗಳ ಕಾಲ ಬಿಸಿಲಿನಲ್ಲಿಡಿ. ಈ ಸಮಯದಲ್ಲಿ ಅಕ್ಕಿ ಕೊಳೆಯದಿದ್ದರೆ ನಕಲಿ ಅಕ್ಕಿ ಎಂದು ಅರ್ಥ ಮಾಡಿಕೊಳ್ಳಿ.
ನೀರು ತುಂಬಿದ ಬಟ್ಟಲಿನಲ್ಲಿ ಒಂದು ಚಮಚ ಅಕ್ಕಿ ಹಾಕಿ. ಕೆಳಕ್ಕೆ ಮುಳುಗಿದರೆ ಅದು ನಿಜವಾದ ಅಕ್ಕಿ ಮತ್ತು ನೀರಿನ ಮೇಲ್ಮೈಯಲ್ಲಿ ತೇಲಿದರೆ ಅದು ನಕಲಿ ಅಕ್ಕಿ ಎಂದು ತಿಳಿಯಬಹುದು.
ಪಾಲಿಶ್ ಮಾಡಿದ ಅಕ್ಕಿ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ನಯವಾದ ಮತ್ತು ಪಾರದರ್ಶಕ ಅಕ್ಕಿಯನ್ನು ಎಂದಿಗೂ ಖರೀದಿಸಬೇಡಿ. ಪಾಲಿಶ್ ಮಾಡದ ಅಕ್ಕಿಯನ್ನು ಖರೀದಿಸಿ.