ಮೈಸೂರು ಅರಮನೆಯ ಅಡುಗೆಮನೆಗಳಲ್ಲಿ ಹುಟ್ಟಿಕೊಂಡ ಮೈಸೂರು ಪಾಕ್ ಕರ್ನಾಟಕ ಸೇರಿ ದಕ್ಷಿಣ ಭಾರತದ ಜನರ ಫೆವರಿಟ್ ಸ್ವೀಟ್. ಈಗ ಇದು ರಾಜ್ಯಕ್ಕೆ ಮತ್ತಷ್ಟು ಹೆಮ್ಮೆ ತಂದಿದೆ.
food Jul 24 2023
Author: Suvarna News Image Credits:Twitter : Desi Thug
Kannada
ವಿಶ್ವದ ಅತ್ಯುತ್ತಮ ಸ್ಟ್ರೀಟ್ ಫುಡ್ ಸ್ವೀಟ್
ಟೇಸ್ಟ್ ಅಟ್ಲಾಸ್ ನಡೆಸಿದ ವಿಶ್ವದ ಅತ್ಯುತ್ತಮ ಸ್ಟ್ರೀಟ್ ಫುಡ್ ಸಿಹಿತಿಂಡಿಗಳಲ್ಲಿ ರಾಜ್ಯದ ರಾಯಲ್ ಸ್ವೀಟ್ ಮೈಸೂರ್ ಪಾಕ್ 14ನೇ ಸ್ಥಾನ ಗಳಿಸಿರೋದು ರಾಜ್ಯದ ಜನರಿಗೆ ನಿಜಕ್ಕೂ ಸಿಹಿ ಸುದ್ದಿ.
Image credits: others
Kannada
14ನೇ ಸ್ಥಾನ ಪಡೆದ ಮೈಸೂರ್ ಪಾಕ್
14 ನೇ ಸ್ಥಾನದಲ್ಲಿ ಮೈಸೂರು ಪಾಕ್ ಇದ್ದು, 50 ತಿನಿಸುಗಳಲ್ಲಿ, ಮತ್ತೆ ಎರಡು ಭಾರತೀಯ ಸಿಹಿತಿಂಡಿಗಳಾದ ಫಲೂಡಾ ಮತ್ತು ಕುಲ್ಫಿ ಸ್ಥಾನಪಡೆದಿದೆ..
Image credits: Social media
Kannada
ಟೇಸ್ಟ್ ಅಟ್ಲಾಸ್
ಟೇಸ್ಟ್ ಅಟ್ಲಾಸ್ ಪ್ರಸಿದ್ಧ ಆಹಾರ ಆಧಾರಿತ ನಿಯತಕಾಲಿಕವಾಗಿದ್ದು, ಇದು ಪ್ರಪಂಚದಾದ್ಯಂತದ ಬೀದಿ ಆಹಾರದ ಬಗ್ಗೆ ಸಮಗ್ರ ವಿಮರ್ಶೆಗಳು ಮತ್ತು ಮಾಹಿತಿಯನ್ನು ಒದಗಿಸುತ್ತದೆ.
Image credits: Social media
Kannada
ಡಿಸಿಎಂ ಡಿ.ಕೆ.ಶಿ ಏನಂದ್ರು?
ಡಿಸಿಎಂ ಡಿ.ಕೆ.ಶಿವಕುಮಾರ್, ಮೈಸೂರು ಪಾಕ್ ಗೆ ಸಿಕ್ಕಿರುವ ಮನ್ನಣೆಗೆ ಸಂತಸ ವ್ಯಕ್ತಪಡಿಸಿದ್ದು,. ವಿಶ್ವದ ಅಗ್ರ 50 ಬೀದಿ ಸಿಹಿತಿಂಡಿಗಳಲ್ಲಿ ಮೈಸೂರು ಪಾಕ್ 14 ನೇ ಸ್ಥಾನದಲ್ಲಿರೋದು ಖುಷಿ ತಂದಿದೆ ಎಂದಿದ್ದಾರೆ.
Image credits: others
Kannada
ಮೈಸೂರು ಅರಮನೆ
ಮೈಸೂರು ಪಾಕ್ ನ ಕೀರ್ತಿ ಬಾಣಸಿಗರ ಕಠಿಣ ಪರಿಶ್ರಮ ಮತ್ತು ಕೌಶಲ್ಯಕ್ಕೆ ಸಲ್ಲುತ್ತದೆ. ಇದು ಮೈಸೂರು ಅರಮನೆಯಲ್ಲಿ ಜನಿಸಿತು ಮತ್ತು ಇಂದು ಪ್ರತಿ ಮನೆಯನ್ನೂ ತಲುಪಿದೆ.
Image credits: others
Kannada
ತಮಿಳುನಾಡಿಂದ ತಂದದ್ದ?
ಹೆಸರೇ ಕರ್ನಾಟಕದ ಮೈಸೂರಿನ ಮೂಲವನ್ನು ಸೂಚಿಸುತ್ತದೆಯಾದರೂ, ಮೈಸೂರು ಪಾಕ್ ಮೊದಲು ತಮಿಳುನಾಡಿನಲ್ಲಿ ತಯಾರಾಗಿದ್ದು, ನಂತರ ಮೈಸೂರಿಗೆ ಬಂತು ಎನ್ನಲಾಗುತ್ತೆ.
Image credits: others
Kannada
ಭಾರತದ ಶ್ರೀಮಂತ ಪಾಕ ಪರಂಪರೆ
ಜಾಗತಿಕ ವೇದಿಕೆಯಲ್ಲಿ ಮೈಸೂರು ಪಾಕ್ ಸ್ಥಾನ ಪಡೆದಿರೋದು ಭಾರತದ ಶ್ರೀಮಂತ ಪಾಕ ಪರಂಪರೆ ಮತ್ತು ವಿಶ್ವದಾದ್ಯಂತ ಭಾರತೀಯ ಆಹಾರಗಳ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.