Food
ಬೆಳಗ್ಗೆದ್ದು ಕಾಲೇಜ್, ಆಫೀಸ್ ಎಂದು ಹೊರಡುವ ಕಾರಣ ಹೆಚ್ಚಿನವರು ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ದಿನಪೂರ್ತಿ ನೀವು ಹೆಚ್ಚು ತಿನ್ನುತ್ತೀರಿ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಯಾವುದೇ ಆಹಾರ ಅದೆಷ್ಟೇ ಇಷ್ಟವಾದರೂ ಅತಿಯಾಗಿ ತಿನ್ನೋ ಅಭ್ಯಾಸ ಒಳ್ಳೆಯದಲ್ಲ. ಯಾವಾಗಲೂ ಕೂಲ್‌ಡ್ರಿಂಕ್ಸ್, ಸ್ನ್ಯಾಕ್ಸ್ ತಿನ್ನುತ್ತಲೇ ಇರುವ ಅಭ್ಯಾಸ ಬಿಟ್ಟು ಬಿಡಿ. ಇದು ಕ್ಯಾಲೋರಿ ಹೆಚ್ಚಾಗಲು ಕಾರಣವಾಗುತ್ತದೆ.
ಎಕ್ಸರ್‌ಸೈಸ್ ಮಾಡಲು ತೂಕ ಹೆಚ್ಚಳವಾಗಬೇಕು ಎಂದೇನಿಲ್ಲ. ಆರೋಗ್ಯವಾಗಿರಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಅತೀ ಅಗತ್ಯ. ಇದು ದೇಹದಲ್ಲಿರುವ ಅನಗತ್ಯ ಕೊಬ್ಬು, ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ.
ಸೋಡಾ, ಫ್ರುಟ್ ಜ್ಯೂಸ್, ಎನರ್ಜಿ ಡ್ರಿಂಕ್ಸ್ ಮೊದಲಾದವುಗಳ ಸೇವನೆ ಕಡಿಮೆ ಮಾಡಿ. ಈ ಪಾನೀಯಗಳು ನಿಮಗೆ ತಿಳಿಯದೇನೆ ಕ್ಯಾಲೋರಿಗಳನ್ನು ಹೆಚ್ಚು ಮಾಡುತ್ತದೆ. ತೂಖ ಹೆಚ್ಚಳವಾಗುತ್ತದೆ.
ಪ್ರೊಸೆಸಡ್ ಫುಡ್‌ನಲ್ಲಿ ಅನ್ ಹೆಲ್ತೀ ಫ್ಯಾಟ್, ಶುಗರ್, ಕ್ಯಾಲೊರಿ ಅಧಿಕವಾಗಿರುತ್ತದೆ. ಇದು ಸುಲಭವಾಗಿ ವೈಟ್ ಗೈನ್‌ಗೆ ಕಾರಣವಾಗುತ್ತದೆ. ಈ ರೀತಿಯ ಆಹಾರದಿಂದ ದಪ್ಪವಾದಾಗ ತೂಕ ಇಳಿಸಿಕೊಳ್ಳುವುದು ಸಹ ಕಷ್ಟ.
ಜಂಕ್‌ಫುಡ್, ಸೋಡಾ ಪಾನೀಯಗಳನ್ನು ಬಿಟ್ಟು ತಾಜಾ ಹಣ್ಣು, ತರಕಾರಿಗಳನ್ನು ಹೆಚ್ಚೆಚ್ಚು ತಿನ್ನಿ. ಇದು ದೇಹವನ್ನು ಆರೋಗ್ಯವಾಗಿಡುತ್ತದೆ.
ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದು ಆಗಾಗ ಹಸಿವಾಗುವ ಅನುಭವಕ್ಕೆ ಕಾರಣವಾಗುತ್ತದೆ. ಇದರಿಂದ ಹೆಚ್ಚು ಹೆಚ್ಚು ತಿನ್ನುವಂತಾಗುತ್ತದೆ. ಹೀಗಾಗಿ ಯಾವಾಗಲೂ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಿ.