Food
ಭಾರತದಲ್ಲಿ ಜನರು ಇಷ್ಟಪಟ್ಟು ತಿನ್ನುವಂತಹ ತಿನಿಸುಗಳ ಲಿಸ್ಟ್ ಇಲ್ಲಿದೆ. ಇವುಗಳಲ್ಲಿ ನಿಮ್ಮ ಫೆವರಿಟ್ ಯಾವುದು ಅನ್ನೋದನ್ನ ಹೇಳಿ.
ಡೀಪ್ ಫ್ರೈ ಮಾಡಿದ ಆಲೂ ಬೊಂಡಾವನ್ನು ಬನ್ ಗಳ ನಡುವೆ ಇಟ್ಟು, ಅದಕ್ಕೆ ಗಾರ್ಲಿಕ್ ಮತ್ತು ಹಸಿರು ಚಟ್ನಿ ಬೆರೆಸಿ ತಿನ್ನೋದು ತುಂಬಾನೆ ರುಚಿಕರವಾಗಿರುತ್ತೆ. ಇದು ಭಾರತದ ನೆಚ್ಚಿನ ತಿನಿಸು.
ಬೇಳೆಯಿಂದ ಮಾಡುವಂತಹ ಈ ತಿನಿಸು ತಿನ್ನಲು ತುಂಬಾ ರುಚ. ಕಪ್ಪು ಬೇಳೆ, ಮಸಾಲೆ, ಮಲೈ ಸೇರಿಸಿ ಮಾಡುವ ಈ ಆಹಾರವನ್ನು ಅನ್ನ, ಚಪಾತಿ ಜೊತೆ ಸೇವಿಸಬಹುದು.
ಇದು ಉತ್ತರ ಭಾರತದಲ್ಲಿ ಹೆಚ್ಚಾಗಿ ಬ್ರೇಕ್ ಫಾಸ್ಟ್ ಗೆ ತಿನ್ನುವಂತಹ ತಿನಿಸು. ಈ ಸ್ಟಫ್ಡ್ ಪರೋಟಾವನ್ನು ಗೋಬಿ, ಪನೀರ್, ಆಲೂಗಡ್ಡೆ ಸೇರಿಸಿ ಮಾಡಲಾಗುತ್ತೆ.
ಗುಜರಾತಿನ ಈ ಸ್ಪೆಷಲ್ ತಿನಿಸು, ತಿನ್ನಲು ಸ್ವಲ್ಪ ಹುಳಿ ಇದ್ದು, ಆ ಒಗ್ಗರಣೆಯ ಘಮದೊಂದಿಗೆ ಡೋಕ್ಲಾ ಸೇವಿಸೋದು ತುಂಬಾ ಮಜವಾಗಿರುತ್ತೆ.
ಕ್ರಿಸ್ಪಿಯಾದ ದೊಡ್ಡದಾದ ದೋಸೆ ನಡುವೆ ಆಲೂಗಡ್ಡೆ ಪಲ್ಯ, ಹಾಕಿ, ಜೊತೆಗೆ ಸಂಬಾರ್, ತೆಂಗಿನಕಾಯಿ ಚಟ್ನಿ ಜೊತೆ ತಿನ್ನುವ ಮಸಾಲೆ ದೋಸೆ ಹೆಚ್ಚಿನ ಜನರ ಆಲ್ ಟೈಮ್ ಫೆವರಿಟ್
ಆಲೂಗಡ್ಡೆ, ಟೋಮ್ಯಾಟೊ, ಪುರಿ, ಕಡ್ಲೆ ಬೀಜ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಇದನ್ನ ಮಾಡಲಾಗುತ್ತೆ. ಇದಕ್ಕೆ ಕೊತ್ತಂಬರಿ ಸೊಪ್ಪು, ಮೊಸರು, ಚಾಟ್ ಮಸಾಲ, ಸಾಸ್ ಎಲ್ಲಾ ಸೇರಿಸಿ ಮಾಡಲಾಗುತ್ತೆ.