Food
ರಸಭರಿತವಾದ ಮಾವು ಸಿಹಿಯಾಗಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಹಾಗಂತ ಇದನ್ನು ಬೇಕಾಬಿಟ್ಟಿ ತಿನ್ನುವುದು ಸರಿಯಲ್ಲ. ಇದು ಆರೋಗ್ಯ ಹದಗೆಡಲು ಕಾರಣವಾಗಬಹುದು. ಮುಖ್ಯವಾಗಿ ಮಾವು ತಿನ್ನುವಾಗ ಈ ಕೆಲ ತಪ್ಪು ಮಾಡಬೇಡಿ.
ಮಾವು ನೋಡಲು ಫ್ರೆಶ್ ಆಗಿದೆ ಅನ್ನೋ ಕಾರಣಕ್ಕೆ ತೊಳಯದೆ ತಿನ್ನಬೇಡಿ. ಇದು ಅನಾರೋಗ್ಯಕ್ಕೆ ಕಾರಣವಾಗಬಹುದು. ಮಾವು ತಂದು ಹಾಗೆಯೇ ಕತ್ತರಿಸಿ ತಿನ್ನುವ ಬದಲು ಯಾವಾಗಲೂ ತೊಳೆದು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ.
ಅತಿಯಾದರೆ ಅಮೃತವೂ ವಿಷ ಅಂತ ನಮ್ಮ ಹಿರಿಯರು ಹೇಳಿದ್ದಾರೆ. ಇದನ್ನು ನೆನಪಿಟ್ಟುಕೊಳ್ಳಿ. ಅತಿಯಾಗಿ ತಿಂದರೆ ಮಾವಿನಲ್ಲಿರುವ ಹೈ ಫೈಬರ್ ಮತ್ತು ಶುಗರ್ ಕಂಟೆಂಟ್ ಹೊಟ್ಟೆ ಹದಗೆಡಲು ಕಾರಣವಾಗಬಹುದು.
ಬ್ಲಡ್ ಶುಗರ್ ಪ್ರಮಾಣ ಹೆಚ್ಚಾಗದಿರಬೇಕಾದರೆ ಬೆಳಗ್ಗೆ ಮತ್ತು ಸಂಜೆ ಇದನ್ನು ಬಾದಾಮಿ ಸೇರಿಸಿ ತಿನ್ನಿ. ಇಲ್ಲದಿದ್ದರೆ ಬ್ಲಡ್ ಶುಗರ್ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ.
ಮಾವನ್ನು ಯಾವತ್ತೂ ತಪ್ಪಾದ ರೀತಿಯಲ್ಲಿ ಕಟ್ ಮಾಡಬೇಡಿ. ಮಾವನ್ನು ಕ್ರಿಸ್‌ಕ್ರಾಸ್ ಪ್ಯಾಟರ್ನ್‌ನಲ್ಲಿ ಕಟ್ ಮಾಡೋದ್ರಿಂದ ಸರಿಯಾದ ರೀತಿಯಲ್ಲಿ ಹಣ್ಣು ತಿನ್ನೋಕೆ ಸಾಧ್ಯವಾಗುತ್ತದೆ.
ಮಾವು ನಿಮಗೆ ತುಂಬಾನೇ ಇಷ್ಟವಿರಬಹುದು. ಹಾಗೆದ್ದು ಬೆಳಗ್ಗೆದ್ದು ಬರೀ ಹೊಟ್ಟೆಗೆ ಮಾವನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ದಿನವಿಡೀ ಹಸಿವಾದ ಅನುಭವ ಆಗುತ್ತಿರುತ್ತದೆ.
ಮಾವನ್ನು ತಿನ್ನೋದು ಓಕೆ. ಆದರೆ ಮ್ಯಾಂಗೋ ಜ್ಯೂಸ್, ಮ್ಯಾಂಗೋ ಮಿಲ್ಕ್ ಶೇಕ್‌ಗಳನ್ನು ಹೆಚ್ಚು ತಿನ್ನಬೇಡಿ. ಇದರಲ್ಲಿರುವ ಶುಗರ್ ಲೆವೆಲ್ ಹೆಚ್ಚಿರುವ ಕಾರಣ ಇದು ದೇಹದಲ್ಲಿ ಇನ್ಸುಲಿನ್ ಹೆಚ್ಚಳಕ್ಕೆ ಕಾರಣವಾಗಬಹುದು.
ಮಾವು ತಿಂದ ಬಳಿಕ ಯಾವತ್ತೂ ಮಾವಿನ ಗೊರಟನ್ನು ಎಸೆಯಬೇಡಿ. ಇದನ್ನು ಚಟ್ನಿ, ಡ್ರಿಂಕ್ಸ್ ಮಾಡಲು ಬಳಸಿಕೊಳ್ಳಬಹುದು.