ಚಿಕ್ಕವರು, ದೊಡ್ಡವರು, ಬಡವರು, ಶ್ರೀಮಂತರು ಎಲ್ಲರೂ ಹಾಲು ಕುಡಿಯುತ್ತಾರೆ. ಆದರೆ ನೀವು ಕುಡಿಯುವ ಹಾಲು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳುವುದು ಮುಖ್ಯ.
Kannada
ಕಲಬೆರಕೆ ಹಾಲಿನಿಂದ ಹಾನಿ
ಪ್ರತಿಯೊಬ್ಬರ ಮನೆಯಲ್ಲೂ ಹಾಲು ಬಳಸುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇದನ್ನು ಕುಡಿಯುತ್ತಾರೆ. ಹಾಲು ಶುದ್ಧವಾಗಿದೆಯೇ ಅಥವಾ ಕಲಬೆರಕೆಯಾಗಿದೆಯೇ ಎಂದು ಹೇಗೆ ತಿಳಿದುಕೊಳ್ಳುವುದು ಎಂದು ನೋಡೋಣ...
Kannada
ಹಾಲಿನಲ್ಲಿ ಬೆರೆಸುವ ಪದಾರ್ಥಗಳು
ಹಾಲಿನಲ್ಲಿ ಸಾಮಾನ್ಯವಾಗಿ ನೀರು, ಡಿಟರ್ಜೆಂಟ್, ಸ್ಟಾರ್ಚ್, ಯೂರಿಯಾ, ಸಿಂಥೆಟಿಕ್ ಹಾಲು, ಫಾರ್ಮಾಲಿನ್, ಬಣ್ಣ, ಸಕ್ಕರೆ ಕೂಡ ಬೆರೆಸುತ್ತಾರೆ. ನೀವು ಮನೆಯಲ್ಲೇ ಹಾಲಿನಲ್ಲಿ ಕಲಬೆರಕೆಯನ್ನು ಪತ್ತೆ ಹಚ್ಚಬಹುದು.
Kannada
ಸ್ಟಾರ್ಚ್ ಕಲಬೆರಕೆ ಪರೀಕ್ಷೆ
2ML ಹಾಲನ್ನು ಕುದಿಸಿ ತಣ್ಣಗಾಗಿಸಿ. ಇದಕ್ಕೆ 2-3 ಹನಿ ಅಯೋಡಿನ್ ದ್ರಾವಣ ಹಾಕಿ. ಹಾಲು ಶುದ್ಧವಾಗಿದ್ದರೆ ಬಣ್ಣ ಬದಲಾಗುವುದಿಲ್ಲ ಅಥವಾ ತಿಳಿ ಹಳದಿ ಬಣ್ಣ ತಿರುಗುತ್ತದೆ. ನೀಲಿಬಣ್ಣಕ್ಕೆ ತಿರುಗಿದರೆ ಕಲಬೆರಕೆ ಇದೆ.
Kannada
ಡಿಟರ್ಜೆಂಟ್ ಕಲಬೆರಕೆ ಪರೀಕ್ಷೆ
ಪಾರದರ್ಶಕ ಗಾಜಿನಲ್ಲಿ 5ml ಹಾಲು ತೆಗೆದುಕೊಂಡು ಅದರಲ್ಲಿ ಸಮಾನ ಪ್ರಮಾಣದ ನೀರನ್ನು ಬೆರೆಸಿ ಕಲಕಿ. ಶುದ್ಧ ಹಾಲಿನಲ್ಲಿ ನೊರೆ ಬರುವುದಿಲ್ಲ . ಡಿಟರ್ಜೆಂಟ್ ಬೆರೆಸಿದ ಹಾಲಿನಲ್ಲಿ ನೊರೆ ನಿರಂತರವಾಗಿ ಇರುತ್ತದೆ.
Kannada
ಯೂರಿಯಾ ಕಲಬೆರಕೆ ಪರೀಕ್ಷೆ
5ml ಹಾಲು ತೆಗೆದುಕೊಳ್ಳಿ. ಸಮಾನ ಪ್ರಮಾಣದ ಸೋಯಾಬೀನ್ ಹಾಕಿ ಮಿಶ್ರಣ ಮಾಡಿ. ಕೆಂಪು ಲಿಟ್ಮಸ್ ಪೇಪರ್ ಹಾಕಿ. ಲಿಟ್ಮಸ್ ಕೆಂಪಾಗಿದ್ದರೆ ಹಾಲು ಶುದ್ಧ. ನೀಲಿ ಬಣ್ಣಕ್ಕೆ ತಿರುಗಿದರೆ ಯೂರಿಯಾ ಕಲಬೆರಕೆ ಇದೆ.
Kannada
ಫಾರ್ಮಾಲಿನ್ ಪರೀಕ್ಷೆ
ಪರೀಕ್ಷಾ ನಳಿಕೆಯಲ್ಲಿ 10ml ಹಾಲು ತೆಗೆದುಕೊಳ್ಳಿ. ಕಲಕದೆ ಅಂಚಿನಲ್ಲಿ 2-3 ಹನಿ ಗಾಢ ಸಲ್ಫ್ಯೂರಿಕ್ ಆಮ್ಲ ಹಾಕಿ. ಬಣ್ಣ ಬದಲಾಗದಿದ್ದರೆ ಅದು ಶುದ್ಧ. ನೇರಳೆ ಅಥವಾ ನೀಲಿ ವರ್ತುಲಗಳು ಉಂಟಾದರೆ ಫಾರ್ಮಾಲಿನ್ ಇದೆ.
Kannada
ಸಿಂಥೆಟಿಕ್ ಹಾಲು ಪರೀಕ್ಷೆ
ಪರೀಕ್ಷಾ ನಳಿಕೆಯಲ್ಲಿ 5ml ಹಾಲು, 5ml ನೀರು ಬೆರೆಸಿ ಚೆನ್ನಾಗಿ ಕಲಕಿ. ಸ್ಥಿರವಾದ ನೊರೆ ಬರದಿದ್ದರೆ ಹಾಲು ಶುದ್ಧ. ನಿರಂತರವಾಗಿ ನೊರೆ ಬಂದರೆ ಸಿಂಥೆಟಿಕ್ ಡಿಟರ್ಜೆಂಟ್ ಕಲಬೆರಕೆ ಇದೆ.
Kannada
ನೀರಿನ ಕಲಬೆರಕೆ ಪರೀಕ್ಷೆ
ಹಾಲಿನ ಹನಿಯನ್ನು ನಯವಾದ, ಇಳಿಜಾರಾದ ಮೇಲ್ಮೈ ಮೇಲೆ ಇಡಬೇಕು. ಹನಿ ಅಲ್ಲೇ ಉಳಿದಿದ್ದರೆ ಅಥವಾ ನಿಧಾನವಾಗಿ ಹರಿದು ಬಿಳಿ ಗುರುತು ಬಿಟ್ಟರೆ ಅದು ಶುದ್ಧ. ವೇಗವಾಗಿ ಹರಿದರೆ ನೀರಿನ ಕಲಬೆರಕೆ ಇದೆ.