ಒಂದು ಮಾವಿನಕಾಯಿ ಹಾಗೂ ಮೊಸರಿನಿಂದ ಬಲು ರುಚಿಯಾದ ಬೂತ್ಗೊಜ್ಜು ಮಾಡಬಹುದು
Image credits: Our own
Kannada
ಹೇಗೆ ಸಂರಕ್ಷಿಸಿಡೋದು?
ಮೊದಲೇ ಮಾವಿನಕಾಯಿಯನ್ನು ಚೆನ್ನಾಗಿ ಬೇಯಿಸಿಕೊಂಡು ಉಪ್ಪು ನೀರು ಹಾಕಿ ಡಬ್ಬದಲ್ಲಿ ಸರಿಯಾಗಿ ಇಡಿ. ಇದಕ್ಕೆ ಬೇರೆ ನೀರು ತಾಗಬಾರದು. ಅದು ವರ್ಷ ಕಳೆದರೂ ಕೂಡ ಹಾಳಾಗೋದಿಲ್ಲ.
Image credits: Getty
Kannada
ಮೊದಲು ಬೇಯಿಸಿ
ಈಗಾಗಲೇ ಉಪ್ಪು ನೀರಿನಲ್ಲಿ ಹಾಕಿದ ಮಾವಿನಕಾಯಿಯಿದ್ದರೆ ಅದನ್ನು ಗಿವುಚಿ ಅಥವಾ ಹಸಿ ಮಾವಿನಕಾಯಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಅದರ ಸಿಪ್ಪೆ, ಗೊರಟೆ ತೆಗೆದು ಎಸೆಯಿರಿ. ಆ ತಿರುಳನ್ನು ಇಟ್ಕೊಳ್ಳಿ
Image credits: Social media
Kannada
ಮೊಸರು ಹಾಕಿ
ಮಾವಿನ ಕಾಯಿ ತಿರುಳಿಗೆ ಸಾಕಾಗುವಷ್ಟು ಮೊಸರು ಹಾಕಿ, ಜಾಸ್ತಿ ಮೊಸರು ಬೇಡ. ಮಾವಿನ ಕಾಯಿ, ಮೊಸರು ಎರಡೂ ಸೇರಿಸಿ ಹುಳಿ ಆಗಬಾರದು
Image credits: instagram
Kannada
ಒಗ್ಗರಣೆ ಕೊಡಿ
ಆಮೇಲೆ ಸಾಸಿವೆ, ಇಂಗು, ಉದ್ದಿನಬೇಳೆ ಹಾಕಿ ಒಂದು ಒಗ್ಗರಣೆ ಕೊಡಿ. ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಗಾಂಧಾರಿ/ ಸೂಜಿ ಮೆಣಸು, ಹಸಿಮೆಣಸು ಹಾಕಿ. ಬೆಳ್ಳುಳ್ಳಿ ಸ್ವಲ್ಪ ಜಾಸ್ತಿಯಿದ್ದರೆ ಚೆನ್ನ. ಖಾರ ಬೇಕಾದಷ್ಟು ಹಾಕಿಕೊಳ್ಳಿ
Image credits: Our own
Kannada
ಮಿಕ್ಸ್ ಮಾಡಿ
ಉಪ್ಪು, ಹುಳಿ, ಖಾರವನ್ನು ಚೆನ್ನಾಗಿ ಹಾಕಿ ಮಿಕ್ಸ್ ಮಾಡಿ, ಅದಕ್ಕೆ ಬಿಸಿ ಬಿಸಿ ಅನ್ನದ ಜೊತೆ ತಿಂದರೆ ಅಬ್ಬಾ ಅದ್ಭುತ.