ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ 7 ಹಣ್ಣುಗಳನ್ನು ತಪ್ಪದೇ ತಿನ್ನಿ
ಈ ಬೇಸಿಗೆಯಲ್ಲಿ ನೀವು ತಪ್ಪದೇ ತಿನ್ನಬೇಕಾದ 7 ಹಣ್ಣುಗಳಿವು. ಇವು ನಿಮ್ಮ ದೇಹವನ್ನು ತಂಪಾಗಿಡಲು ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತವೆ.
food Mar 31 2026
Author: Govindaraj S Image Credits:social media
Kannada
ಕಲ್ಲಂಗಡಿ ಹಣ್ಣು
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನಲೇಬೇಕು. ಯಾಕಂದ್ರೆ, ಇದರಲ್ಲಿ ಶೇ. 90ಕ್ಕಿಂತ ಹೆಚ್ಚು ನೀರಿನಾಂಶವಿದೆ. ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ.
Image credits: iStock
Kannada
ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧ
ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿದೆ. ಇದು ಮಕ್ಕಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
Image credits: Getty
Kannada
ಕರ್ಬೂಜ ಹಣ್ಣು
ಬೇಸಿಗೆಯಲ್ಲಿ ತಿನ್ನಬಹುದಾದ ಮತ್ತೊಂದು ಹಣ್ಣು ಕರ್ಬೂಜ. ಇದನ್ನು ಜ್ಯೂಸ್ ಅಥವಾ ಸ್ಮೂಥಿ ರೂಪದಲ್ಲಿ ಸೇವಿಸಬಹುದು. ಇದು ಹಲವು ಜೀರ್ಣಕಾರಿ ಸಮಸ್ಯೆಗಳನ್ನು ದೂರ ಮಾಡುತ್ತದೆ.
Image credits: Freepik
Kannada
ಚರ್ಮದ ಆರೋಗ್ಯ ಕಾಪಾಡುತ್ತೆ
ಕರ್ಬೂಜದಲ್ಲಿ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಹೇರಳವಾಗಿದೆ. ಈ ವಿಟಮಿನ್‌ಗಳು ಚರ್ಮದ ಆರೋಗ್ಯಕ್ಕೆ ಬಹಳ ಮುಖ್ಯ.
Image credits: Freepik
Kannada
ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ನೀರಿನಾಂಶ ಅಧಿಕವಾಗಿದೆ. ಇದು ನಿರ್ಜಲೀಕರಣವನ್ನು ತಡೆಯುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Image credits: Getty
Kannada
ಸುಸ್ತು ಕಡಿಮೆ ಮಾಡಲು ಸಹಕಾರಿ
ಕಿತ್ತಳೆಯಲ್ಲಿ ಎಲೆಕ್ಟ್ರೋಲೈಟ್‌ಗಳೂ ಇವೆ. ಇದು ದೇಹದ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಬಿಸಿಲಿನಿಂದಾಗುವ ಸುಸ್ತನ್ನು ತಡೆಯಲು ಸಹಾಯ ಮಾಡುತ್ತದೆ.
Image credits: Getty
Kannada
ಪಪ್ಪಾಯಿ ಹಣ್ಣು
ಪಪ್ಪಾಯಿ ದೇಹಕ್ಕೆ ತುಂಬಾ ಆರೋಗ್ಯಕರ ಹಣ್ಣು. ಬೇಸಿಗೆಯಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ದೇಹಕ್ಕೆ ಹೊಳಪು ನೀಡುತ್ತದೆ. ಜೊತೆಗೆ ಬಿಸಿಲಿನಿಂದಾಗುವ ಒತ್ತಡವನ್ನು ತಡೆಯಲು ಸಹಕಾರಿಯಾಗಿದೆ.
Image credits: Pinterest
Kannada
ಬಿಸಿಲಿನಿಂದ ಆರಾಮ ನೀಡುತ್ತೆ
ಈ ಹಣ್ಣಿನಲ್ಲಿರುವ ವಿಟಮಿನ್‌ಗಳು, ಖನಿಜಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಬಿಸಿಲಿನಿಂದಾಗುವ ಒತ್ತಡವನ್ನು ಎದುರಿಸಲು ದೇಹಕ್ಕೆ ಸಹಾಯ ಮಾಡುತ್ತವೆ.
Image credits: Pinterest
Kannada
ಅನಾನಸ್
ಅನಾನಸ್‌ನಲ್ಲಿ ಸಾಕಷ್ಟು ನೀರಿನಾಂಶವಿದೆ. ಜೊತೆಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳಿವೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
Image credits: Getty
Kannada
ಮಾವಿನ ಹಣ್ಣು
ಹಣ್ಣುಗಳ ರಾಜ ಮಾವಿನಹಣ್ಣನ್ನು ಬೇಸಿಗೆಯಲ್ಲಿ ಮಿತವಾಗಿ ತಿಂದರೆ ತುಂಬಾ ಪ್ರಯೋಜನಕಾರಿ. ಮಾವಿನಹಣ್ಣಿನಲ್ಲಿ ವಿಟಮಿನ್‌ಗಳು ಮತ್ತು ನೈಸರ್ಗಿಕ ಸಕ್ಕರೆ ಅಂಶವಿದ್ದು, ಇದು ಮಕ್ಕಳಿಗೆ ಶಕ್ತಿ ನೀಡುತ್ತದೆ.