Food

ನೀನಾ ಗುಪ್ತಾ ಅವರ ನೆಚ್ಚಿನ ರೊಟಿ ಪಿಜ್ಜಾ ರೆಸಿಪಿ

ರೊಟ್ಟಿ ಪಿಜ್ಜಾ ತಯಾರಿಸಲು ಬೇಕಾಗುವ ಸಾಮಗ್ರಿಗಳು

2 ಬೇಯಿಸಿದ ರೊಟ್ಟಿ, ½ ಕಪ್ ಪಿಜ್ಜಾ ಸಾಸ್, ಚೀಸ್ ಅಥವಾ ಪನೀರ್, ½ ಕ್ಯಾಪ್ಸಿಕಂ, ½ ಈರುಳ್ಳಿ , 4-5 ಆಲಿವ್ಗಳು, ½ ಟೀಸ್ಪೂನ್ ಮಿಕ್ಸ್ಡ್ ಹರ್ಬ್ಸ್, ½ ಟೀಸ್ಪೂನ್ ಬೆಣ್ಣೆ, ½ ಟೀಸ್ಪೂನ್ ಚಾಟ್ ಮಸಾಲ (ಬೇಕಿದ್ದರೆ)

ರೊಟ್ಟಿ ಪಿಜ್ಜಾ ತಯಾರಿಸುವ ವಿಧಾನ

ರೊಟ್ಟಿ ಪಿಜ್ಜಾ ತಯಾರಿಸಲು ಮೊದಲಿಗೆ ರೊಟ್ಟಿ ತೆಗೆದುಕೊಳ್ಳಿ. ಒಂದು ತವಾವನ್ನು ಬಿಸಿ ಮಾಡಿ ಮತ್ತು ಅದರ ಮೇಲೆ ಸ್ವಲ್ಪ ಬೆಣ್ಣೆ ಅಥವಾ ಆಲಿವ್ ಎಣ್ಣೆ ಹಾಕಿ ಬೇಯಿಸಿದ ರೊಟ್ಟಿಯನ್ನು ಇಡಿ.

ರೊಟ್ಟಿ ಮೇಲೆ ಟಾಪಿಂಗ್ ಹಾಕಿ

ಬೇಯಿಸಿದ ರೊಟ್ಟಿ ಮೇಲೆ ಪಿಜ್ಜಾ ಸಾಸ್ ಅಥವಾ ಟೊಮೆಟೊ ಕೆಚಪ್ ಹಚ್ಚಿ ಮತ್ತು ಮೇಲೆ ಕತ್ತರಿಸಿದ ತರಕಾರಿಗಳನ್ನು ಹರಡಿ.

ಚೀಸ್ ಅಥವಾ ಪನೀರ್ ಹಾಕಿ

ಈಗ ತುರಿದ ಮೊಝ್ಝಾರೆಲ್ಲಾ ಚೀಸ್ ಹಾಕಿ ಮತ್ತು ಮಿಕ್ಸ್ಡ್ ಹರ್ಬ್ಸ್ ಮತ್ತು ಚಾಟ್ ಮಸಾಲಾ ಸಿಂಪಡಿಸಿ. ನೀವು ಚೀಸ್ ತಿನ್ನಲು ಇಷ್ಟಪಡದಿದ್ದರೆ, ನೀನಾ ಗುಪ್ತಾ ಅವರಂತೆ ಪನೀರ್ ತುಂಡುಗಳು ಮತ್ತು ಬೆಣ್ಣೆ ಹಾಕಿ.

ರೊಟ್ಟಿ ಪಿಜ್ಜಾ ಬೇಯಿಸಿ

ತವಾವನ್ನು ಸಣ್ಣ ಉರಿಯಲ್ಲಿ ಇಟ್ಟು ರೊಟ್ಟಿ ಪಿಜ್ಜಾವನ್ನು ಮುಚ್ಚಿ 5 ನಿಮಿಷ ಬೇಯಿಸಿ, ಚೀಸ್ ಕರಗುವವರೆಗೆ.

ರೊಟ್ಟಿ ಪಿಜ್ಜಾವನ್ನು ಬಡಿಸಿ

ಚೀಸ್ ಚೆನ್ನಾಗಿ ಕರಗಿ ರೊಟ್ಟಿ ಗರಿಗರಿಯಾದ ನಂತರ, ಗ್ಯಾಸ್ ಆಫ್ ಮಾಡಿ ಮತ್ತು ಅದನ್ನು ಹೋಳುಗಳಾಗಿ ಕತ್ತರಿಸಿ ಬಡಿಸಿ.

ರೊಟ್ಟಿ ಪಿಜ್ಜಾದ ಪ್ರಯೋಜನಗಳು

ರೊಟ್ಟಿ ಪಿಜ್ಜಾ ಆರೋಗ್ಯಕರ, ರುಚಿಕರ ಮತ್ತು ಬೇಗನೆ ತಯಾರಿಸಬಹುದಾದ ರೆಸಿಪಿ, ಇದು ಮಕ್ಕಳಿಗೆ ಹೇಳಿಮಾಡಿಸಿದ ತಿಂಡಿ.

ಅತಿಥಿಗಳು ಬಂದಾಗ 15 ನಿಮಿಷದಲ್ಲಿ ಫಟ್ ಅಂತಾ ಮಾಡಿ ಎಗ್ ಕಬಾಬ್

ಅಂಟದಂತೆ ಉದುರು ಉದುರಾದ ಟೇಸ್ಟಿ ಸಬ್ಬಕ್ಕಿ ಖಿಚಡಿ ಮಾಡಲು ಒಂದೇ ಒಂದು ಟಿಪ್ಸ್!

ರುಚಿ ರುಚಿಯಾದ ಪನ್ನೀರ್ ಸ್ಟಪ್ ಮಾಡಿರುವ ಸಬ್ಬಕ್ಕಿ ಟಿಕ್ಕಿ: ಸುಲಭ ರೆಸಿಪಿ

ಮನೆಯಲ್ಲೇ ಮಾಡಿ ದುಬಾರಿಯಾದ ಜಲಪಿನೊಸ್‌ ಮೆಣಸಿನ ಉಪ್ಪಿನಕಾಯಿ: ರೆಸಿಪಿ ಇಲ್ಲಿದೆ