ಭಾರತದಲ್ಲಿ ವೆರೈಟಿ ವೆರೈಟಿ ಸಿಹಿ ತಿಂಡಿಗಳಿಗೆ ಬರವೇ ಇಲ್ಲ. ರುಚಿಕರವಾದ ಹಲವು ಸ್ವೀಟ್ಸ್ ಎಲ್ಲೆಡೆ ಹೆಸರುವಾಸಿಯಾಗಿದೆ. ಇದರಲ್ಲಿ ಶೈತ್ಯೀಕರಿಸಿದ ಅಥವಾ ಫ್ರೋಝನ್ ಸ್ವೀಟ್ಸ್ ಸಹ ಸೇರಿವೆ. ಅದರಲ್ಲೊಂದು ಕುಲ್ಫಿ.
Image credits: others
ಹಾಲಿನಿಂದ ತಯಾರಿ
ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹೋದಾಗ ಎಷ್ಟೇ ರುಚಿಯಾದ ಊಟ ಮಾಡಿದ್ರೂ ಕೊನೆಯಲ್ಲಿ ಒಂದು ಕುಲ್ಫಿ ತಿನ್ನೋ ಖುಷಿನೇ ಬೇರೆ. ಕುಲ್ಫಿಯು ಎಲ್ಲರ ನೆಚ್ಚಿನ ಸಿಹಿಭಕ್ಷ್ಯವಾಗಿದ್ದು, ಹಾಲಿನಿಂದ ಇದನ್ನು ತಯಾರಿಸುತ್ತಾರೆ.
Image credits: others
ಕ್ಲಾಸಿಕ್ ಫ್ರೋಜನ್ ಇಂಡಿಯನ್ ಡೆಸರ್ಟ್
ಜನಪ್ರಿಯ ಆಹಾರ ಮಾರ್ಗದರ್ಶಿ ಪ್ಲಾಟ್‌ಫಾರ್ಮ್ ಹಂಚಿಕೊಂಡ ಪಟ್ಟಿಯ ಪ್ರಕಾರ ಕ್ಲಾಸಿಕ್ ಫ್ರೋಜನ್ ಇಂಡಿಯನ್ ಡೆಸರ್ಟ್‌ನಲ್ಲಿ 'ಕುಲ್ಫಿ' ಮತ್ತು 'ಕುಲ್ಫಿ ಫಲೂಡಾ' ಸ್ಥಾನ ಪಡೆದುಕೊಂಡಿದೆ.
Image credits: others
ಕುಲ್ಫಿಗೆ 14ನೇ ಸ್ಥಾನ
'ವಿಶ್ವದ 50 ಅತ್ಯುತ್ತಮ ಫ್ರೋಜನ್ ಡೆಸರ್ಟ್' ಪಟ್ಟಿಯಲ್ಲಿ ಭಾರತದ ಕುಲ್ಫಿ ಸಹ ಸೇರಿದೆ. ಆಹಾರಗಳ ಪಟ್ಟಿಯಲ್ಲಿ 'ಕುಲ್ಫಿ' 14ನೇ ಸ್ಥಾನದಲ್ಲಿದ್ದರೆ, 'ಕುಲ್ಫಿ ಫಲೂಡಾ' ಪಟ್ಟಿಯಲ್ಲಿ 30ನೇ ಸ್ಥಾನದಲ್ಲಿದೆ.
Image credits: others
ಟಾಪ್ ಡೆಸರ್ಟ್
ಇರಾನ್‌ನ ಬಸ್ತಾನಿ ಸೊನ್ನತಿ ಮೊದಲ ಸ್ಥಾನದಲ್ಲಿದೆ. ಪೆರುವಿನ ಕ್ವೆಸೊ ಹೆಲಾಡೊ ನಂತರದ ಸ್ಥಾನ ಪಡೆದಿದೆ. ಟರ್ಕಿಯ ಡೊಂಡುರ್ಮಾ, ಅಮೆರಿಕದ ಫ್ರೋಜನ್ ಕಸ್ಟರ್ಡ್, ಫಿಲಿಪಿನೋ ಐಸ್ ಕ್ರೀಮ್ ಸೋರ್ಬೆಟ್ಸ್ ನಂತರದ ಸ್ಥಾನದಲ್ಲಿದೆ.