Kannada

ಅಕ್ಕಿ, ಬೇಳೆಯಲ್ಲಿ ಕೀಟಗಳಾ? ಇಲ್ಲಿದೆ ಪರಿಹಾರ

Kannada

ಕೀಟಗಳಿಗೆ ಕಡಿವಾಣ

ಅಕ್ಕಿ, ಬೇಳೆಯಲ್ಲಿ ಸುಲಭವಾಗಿ ಕೀಟಗಳು ಬರುತ್ತವೆ. ಅವುಗಳನ್ನು ಸುಲಭವಾಗಿ ಹೇಗೆ ತೊಲಗಿಸುವುದು ಎಂದು ನೋಡೋಣ...

 

Kannada

ಲವಂಗ ಹಾಕಿ

ಲವಂಗದ ಘಾಟು ಕೀಟಗಳನ್ನು ದೂರವಿಡುತ್ತದೆ. ಲವಂಗದ ಘಾಟು ಅವುಗಳಿಗೆ ಸಹಿಸಲಾಗದು. ಅಕ್ಕಿ, ಬೇಳೆ ಡಬ್ಬಿಯಲ್ಲಿ ಒಂದೆರಡು ಲವಂಗ ಹಾಕಿಡಿ. ಕೀಟಗಳು ಬರೋಲ್ಲ, ಇರೋ ಕೀಟಗಳು ಜಾಗ ಖಾಲಿ ಮಾಡುತ್ತವೆ.

Kannada

ಬಿರಿಯಾನಿ ಎಲೆ

ಬಿರಿಯಾನಿ ಎಲೆಯ ವಾಸನೆ ಕೀಟಗಳಿಗೆ ಇಷ್ಟವಿಲ್ಲ. ಆದ್ದರಿಂದ ಅಕ್ಕಿ, ಬೇಳೆಯಲ್ಲಿ ಕೆಲವು ಬಿರಿಯಾನಿ ಎಲೆಗಳನ್ನು ಹಾಕಿ. ಇದರಿಂದ ಹುಳುಗಳನ್ನ ತೊಲಗಿಸಬಹುದು.

Kannada

ಒಣಮೆಣಸಿನಕಾಯಿ ಹಾಕಿ

ಒಣಮೆಣಸಿನಕಾಯಿ ಹಾಕಿದರೆ ಧಾನ್ಯ ಹೆಚ್ಚು ಕಾಲ ಉಳಿಯುತ್ತದೆ. ಮೆಣಸಿನಕಾಯಿ ಘಾಟು ಕೀಟಗಳಿಗೆ ಆಗಿರಬೋಲ್ಲ. ಅಕ್ಕಿ, ಬೇಳೆ ಚೀಲದಲ್ಲಿ ಅಥವಾ ಡಬ್ಬಿಗಳಲ್ಲಿ ಒಂದೆರಡು ಒಣ ಮೆಣಸಿನಕಾಯಿ ಹಾಕಿ.

Kannada

ಬೆಳ್ಳುಳ್ಳಿ ಎಸಳು ಹಾಕಿ

ಬೆಳ್ಳುಳ್ಳಿ ವಾಸನೆ ಕೀಟಗಳನ್ನು ದೂರವಿಡುತ್ತದೆ. ಧಾನ್ಯದ ಡಬ್ಬಗಳಲ್ಲಿ ಕೆಲವು ಎಸಳುಗಳನ್ನು ಹಾಕಿ.

Kannada

ಅರಿಶಿನ ಹಾಕಿ

ಅರಿಶಿನ ನೈಸರ್ಗಿಕ ಕ್ರಿಮಿನಾಶಕ. ಧಾನ್ಯವನ್ನು ಹೆಚ್ಚು ಕಾಲ ಸಂಗ್ರಹಿಸಲು ಸಹಾಯ ಮಾಡುತ್ತದೆ. ಅರಿಶಿನದ ತುಂಡುಗಳನ್ನು ಹಾಕಿ.

ಡಯಟ್ ಬಿಡಿ... ಹೀಗೂ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು

ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಇಷ್ಟವಾಗುವ 7 ರವೆ ತಿಂಡಿಗಳು

ಬೇಗನೆ ತೂಕ ಇಳಿಯುತ್ತಂತೆ ಈ ಹಣ್ಣು ತಿಂದರೆ

'ಸ್ಪೆಷಲ್ ಮಸಾಲಾ ಟೀ': ಈ ಸೂಪರ್ ಚಹಾ ಮನೆಯಲ್ಲಿ ಮಾಡಿ ನೋಡಿ