Food
ಬಾಳೆ ಹಣ್ಣು ಗಳಿತು ಹಣ್ಣಾಗಿ, ಹಾಳಾಗದಂತೆ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್.
ಹಣ್ಣಾಯಿತೆಂದರೆ ಇಡಲು ಬಾರದ ಬಾಳೆ ಹಣ್ಣನ್ನು ಸೂಕ್ತ ರೀತಿಯಲ್ಲಿಟ್ಟರೆ ತಾಜಾವಾಗಿರುತ್ತದೆ.
ಬಾಳೆಹಣ್ಣುಗಳು 2-3 ದಿನಗಳಲ್ಲಿ ಹಾಳಾಗುತ್ತದೆ. ಸರಿಯಾಗಿಡದಿದ್ದರೆ ಕಪ್ಪಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅದನ್ನು ಹೇಗೆ ಕಾಪಾಡಿಕೊಳ್ಳೋದು?
ಬಾಳೆಹಣ್ಣನ್ನು ದೀರ್ಘ ಕಾಲದವರೆಗೆ ತಾಜಾವಾಗಿಡಲು, ಅದರ ಮೇಲಿರುವ ಕಾಂಡವನ್ನು ಪ್ಲಾಸ್ಟಿಕ್‌ನಿಂದ ಕವರ್ ಮಾಡಿ. ಕಾಗದದಿಂದ ಮುಚ್ಚಿ.
ಬಾಳೆಹಣ್ಣನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಬಾಳೆಹಣ್ಣಿನ ಮೇಲೆ ಸ್ವಲ್ಪ ವಿನೆಗರ್ ಸಿಂಪಡಿಸಿ. ಅದು ಕಪ್ಪಾಗೋಲ್ಲ.
ಬಾಳೆಹಣ್ಣು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಬೇಗ ಕಪ್ಪಾಗುತ್ತವೆ. ಆದಕ್ಕೆ ಬಟ್ಟೆಯಲ್ಲಿ ಸುತ್ತಿಡಬಹುದು.
ಬಾಳೆಹಣ್ಣನ್ನು ಯಾವುದೇ ಹಣ್ಣಿನ ಬುಟ್ಟಿ ಕೆಳಗಿಟ್ಟರೆ, ಒತ್ತಡದಿಂದಾಗಿ ಬೇಗ ಹಾಳಾಗಬಹುದು.ಸಿಪ್ಪೆಯೂ ಕಪ್ಪಾಗಬಹುದು. ಅಂಥ ಪರಿಸ್ಥಿತಿಯಲ್ಲಿ, ಬಾಳೆಹಣ್ಣನ್ನು ಯಾವಾಗಲೂ ಗಾಳಿ ಇರುವ ಸ್ಥಳದಲ್ಲಿ ನೇತು ಹಾಕಿ.
ಬಾಳೆಹಣ್ಣನ್ನು ಎಂದಿಗೂ ಫ್ರಿಜ್‌ನಲ್ಲಿ ಇಡಬಾರದು, ಏಕೆಂದರೆ ಅದರ ಕಾಂಡದಿಂದ ಎಥಿಲೀನ್ ಅನಿಲ ಹೊರಬರುತ್ತದೆ, ಇದರಿಂದ ಬಾಳೆಹಣ್ಣಿನ ಸಿಪ್ಪೆ ಕಪ್ಪಾಗುತ್ತದೆ.
ಬಾಳೆಹಣ್ಣಿನ ತಾಜಾತನವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ಮಾರ್ಕೆಟ್‌ನಿಂದ ತಂದ ನಂತರ ಅದನ್ನು ನೀರು ಮತ್ತು ಸೋಡಾದ ಮಿಶ್ರಣದಲ್ಲಿ 5-10 ನಿಮಿಷಗಳ ಕಾಲ ನೆನೆಸಿಡಿ.
ಬಾಳೆಹಣ್ಣನ್ನು ಯಾವಾಗಲೂ ಇತರೆ ಹಣ್ಣುಗಳಿಂದ ದೂರವಿಡಬೇಕು, ಅನೇಕ ಹಣ್ಣುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಬಾಳೆಹಣ್ಣು ಬೇಗ ಕೊಳೆಯುತ್ತವೆ. ಇದೂ ಬೇರೆ ಹಣ್ಣನ್ನೂ ಹಾಳು ಮಾಡುತ್ತದೆ.