Kannada

ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ?

ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ? ಈ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. ಇದರ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ.

Kannada

ಭಯದಿಂದಲೇ ನಿಲ್ಲಿಸುತ್ತಾರೆ

ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ ಅನ್ನೋ ಭಯದಿಂದಲೇ ಅನೇಕರು ಮೊಟ್ಟೆ ತಿನ್ನುವುದನ್ನು ನಿಲ್ಲಿಸುತ್ತಾರೆ. ಆದರೆ, ಮೊಟ್ಟೆ ತಿಂದರೆ ನಿಜವಾಗಿಯೂ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆಯೇ?.

Image credits: Getty
Kannada

ಇದರಲ್ಲಿದೆ ಪೋಷಕಾಂಶಗಳು

ಮೊಟ್ಟೆ ಪ್ರೋಟೀನ್, ಆರೋಗ್ಯಕರ ಕೊಬ್ಬು, ವಿಟಮಿನ್‌ಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ.

Image credits: Our own
Kannada

ಏನೆಲ್ಲಾ ಇದೆ?

ಮೊಟ್ಟೆಯ ಬಿಳಿ ಭಾಗಕ್ಕೆ ಹೋಲಿಸಿದರೆ, ವಿಟಮಿನ್ ಎ, ವಿಟಮಿನ್ ಇ ಮತ್ತು ಒಮೆಗಾ-3 ಫ್ಯಾಟಿ ಆಸಿಡ್‌ಗಳ ದೊಡ್ಡ ಪಾಲು ಹಳದಿ ಲೋಳೆಯಿಂದಲೇ ಸಿಗುತ್ತದೆ.

Image credits: Getty
Kannada

ಹಾನಿಕಾರಕವಲ್ಲ

ಆರೋಗ್ಯವಂತ ಜನರಿಗೆ ಮೊಟ್ಟೆಯ ಹಳದಿ ಲೋಳೆ ಹಾನಿಕಾರಕವಲ್ಲ ಎಂದು ವೈದ್ಯರು ಹೇಳುತ್ತಾರೆ. ಬದಲಾಗಿ, ಇದನ್ನು ಆರೋಗ್ಯಕರ ಆಹಾರದ ಭಾಗವನ್ನಾಗಿ ಮಾಡಿಕೊಳ್ಳಬಹುದು. 

Image credits: social media
Kannada

ಮಿತ ಪ್ರಮಾಣದಲ್ಲಿ ಸೇವಿಸಿ

ಮಿತ ಪ್ರಮಾಣದಲ್ಲಿ ಮೊಟ್ಟೆಯ ಹಳದಿ ಲೋಳೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟದ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಹೊಸ ಅಧ್ಯಯನಗಳು ತೋರಿಸಿವೆ.

Image credits: social media
Kannada

ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತೆ

ಒಂದು ವೇಳೆ ಮೊಟ್ಟೆ ಕೊಲೆಸ್ಟ್ರಾಲ್ ಹೆಚ್ಚಿಸಿದರೂ, ಅದು ಒಳ್ಳೆಯ ಕೊಲೆಸ್ಟ್ರಾಲ್ (HDL) ಆಗಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. 

Image credits: freepik
Kannada

ಹೃದಯಕ್ಕೆ ಆರೋಗ್ಯಕರ ಆಹಾರ

ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಹೆಚ್ಚಿನ ಜನರಿಗೆ ಹಾನಿ ಮಾಡುವುದಿಲ್ಲ. ಮಿತವಾಗಿ ಸೇವಿಸಿದರೆ, ಮೊಟ್ಟೆಯು ಪೌಷ್ಟಿಕಾಂಶಗಳಿಂದ ಕೂಡಿದ ಮತ್ತು ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ.

Image credits: pexels

ಒಣ ಮೀನಿನ ಅಡುಗೆ ಮಾಡೋ ಮುನ್ನ ಇಷ್ಟು ಮಾಡಿ.. ವಾಸನೆ ಮಾಯ, ರುಚಿನೂ ಹೆಚ್ಚುತ್ತೆ

ಬಟ್ಟೆ ಮೇಲಿನ ಚಹಾ ಕಲೆ ಕೆಲವೇ ನಿಮಿಷದಲ್ಲಿ ತೆಗೆಯಲು ಇಷ್ಟು ಮಾಡಿ ಸಾಕು

Protein Foods: ಮೊಟ್ಟೆಗಿಂತ ಹೆಚ್ಚು ಪ್ರೋಟೀನ್ ಇರುವ 6 ಆಹಾರಗಳಿವು!

ಮಜ್ಜಿಗೆ ಮೆಣಸು ಮಾಡೋದು ಹೇಗೆ? ವರ್ಷವಾದರೂ ಹಾಳಾಗಲ್ಲ! ಉಪ್ಪಿನಕಾಯಿಗಿಂತಲೂ ರುಚಿ!