Kannada

ಮನೆ ತುಂಬಾ ವಾಸನೆ

ಒಣ ಮೀನನ್ನು ಇಷ್ಟಪಡುವವರಿಗೂ ಅದರ ವಾಸನೆಯೇ ದೊಡ್ಡ ಸಮಸ್ಯೆಯಾಗಿರುತ್ತದೆ. ಅಡುಗೆ ಮಾಡುವಾಗಲೂ ಅದು ಮನೆ ತುಂಬಾ ವಾಸನೆ ಹರಡುತ್ತದೆ. 

Kannada

ನೈಸರ್ಗಿಕ ವಿಧಾನ

ಆದರೆ ಕೆಲವೇ ಕೆಲವು ನೈಸರ್ಗಿಕ ವಿಧಾನಗಳ ಮೂಲಕ ಒಣ ಮೀನಿನ ವಾಸನೆಯನ್ನು ಪೂರ್ತಿಯಾಗಿ ಹೋಗಲಾಡಿಸಿ, ರುಚಿಕರವಾಗಿ ಅಡುಗೆ ಸವಿಯಬಹುದು.

Image credits: Instagram
Kannada

ಬಿಸಿ ನೀರು ಮತ್ತು ನಿಂಬೆ ರಸ

ಅಡುಗೆ ಮಾಡುವ 20 ನಿಮಿಷಗಳ ಮೊದಲು ಒಣ ಮೀನನ್ನು ಬಿಸಿ ನೀರಿನಲ್ಲಿ ನೆನೆಸಿಡಿ. ಅದಕ್ಕೆ 5 ಚಮಚ ನಿಂಬೆ ರಸ ಮತ್ತು ಸ್ವಲ್ಪ ಉಪ್ಪು ಸೇರಿಸಿ. ನಂತರ ಚೆನ್ನಾಗಿ ತೊಳೆದರೆ ವಾಸನೆ ಮಾಯವಾಗುತ್ತದೆ.

Image credits: Getty
Kannada

ಅಕ್ಕಿ ತೊಳೆದ ನೀರು

ಒಣ ಮೀನನ್ನು ಅಕ್ಕಿ ತೊಳೆದ ನೀರಿನಲ್ಲಿ ತೊಳೆದರೆ ಅದರಲ್ಲಿರುವ ವಾಸನೆ ಮಾತ್ರವಲ್ಲದೆ, ಅಂಟಿಕೊಂಡಿರುವ ಮರಳು ಮತ್ತು ಕಸ ಕೂಡ ಸುಲಭವಾಗಿ ಸ್ವಚ್ಛವಾಗುತ್ತದೆ.

Image credits: stockPhoto
Kannada

ಅಡುಗೆ ಮಾಡುವಾಗ ಈ ರೀತಿ ಮಾಡಿ

ಒಣ ಮೀನು ಕರಿಯುವಾಗ ಒಂದು ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ.

Image credits: stockPhoto
Kannada

ವಾಸನೆ ಕಂಪ್ಲೀಟಾಗಿ ಹೋಗುತ್ತೆ

ಅಡುಗೆಯ ಸಮಯದಲ್ಲಿ ಸ್ವಲ್ಪ ಹುಣಸೆಹಣ್ಣಿನ ರಸ (ಹುಳಿ) ಅಥವಾ ಒಂದು ಕಪ್ ಹಾಲು ಸೇರಿಸುವುದರಿಂದಲೂ ವಾಸನೆ ಪೂರ್ತಿ ಹೋಗುತ್ತದೆ.

Image credits: Getty
Kannada

ಕಿಚನ್ ವಾಸನೆ ಹೋಗಲಾಡಿಸಲು

ಒಣ ಮೀನು ಅಡುಗೆ ಮಾಡುವಾಗ ಅಡುಗೆ ಮನೆಯಲ್ಲಿ ಬರುವ ವಾಸನೆ ಹೋಗಲಾಡಿಸಲು, ಒಂದು ಗ್ಲಾಸ್ ನೀರಿಗೆ ಸ್ವಲ್ಪ ವಿನೆಗರ್ ಹಾಕಿ ಚೆನ್ನಾಗಿ ಕುದಿಸಿ. ಇದರಿಂದ ಕಿಚನ್‌ನಲ್ಲಿರುವ ವಾಸನೆ ಕಡಿಮೆಯಾಗುತ್ತದೆ.

Image credits: social Media
Kannada

ಹಾಲಿನ ಬಳಕೆ

ಒಣ ಮೀನನ್ನು ಅಪ್ಪಟ ಎಮ್ಮೆಯ ಹಾಲಿನಲ್ಲಿ ಸ್ವಲ್ಪ ಸಮಯ ನೆನೆಸಿಟ್ಟರೆ ವಾಸನೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ನಂತರ ಅದನ್ನು 2-3 ಬಾರಿ ಶುದ್ಧ ನೀರಿನಲ್ಲಿ ತೊಳೆದು ಅಡುಗೆಗೆ ಬಳಸಿ.

Image credits: Getty
Kannada

ಗಾಳಿಯಾಡದ ಡಬ್ಬದಲ್ಲಿಡಿ

ಒಣ ಮೀನನ್ನು ತಂದ ತಕ್ಷಣ ಗಾಳಿಯಾಡದ ಡಬ್ಬದಲ್ಲಿ (Air-tight container) ಹಾಕಿಟ್ಟರೆ ಮನೆಯೆಲ್ಲಾ ವಾಸನೆ ಹರಡುವುದಿಲ್ಲ.

Image credits: AI

ಬಟ್ಟೆ ಮೇಲಿನ ಚಹಾ ಕಲೆ ಕೆಲವೇ ನಿಮಿಷದಲ್ಲಿ ತೆಗೆಯಲು ಇಷ್ಟು ಮಾಡಿ ಸಾಕು

Protein Foods: ಮೊಟ್ಟೆಗಿಂತ ಹೆಚ್ಚು ಪ್ರೋಟೀನ್ ಇರುವ 6 ಆಹಾರಗಳಿವು!

ಮಜ್ಜಿಗೆ ಮೆಣಸು ಮಾಡೋದು ಹೇಗೆ? ವರ್ಷವಾದರೂ ಹಾಳಾಗಲ್ಲ! ಉಪ್ಪಿನಕಾಯಿಗಿಂತಲೂ ರುಚಿ!

ಪಾಲಕ್ ಸೊಪ್ಪು ತಿಂದರೆ ಅದ್ಭುತ ಆರೋಗ್ಯ; ಆಸ್ಪತ್ರೆ ಮೆಟ್ಟಲು ಹತ್ತೋದೆ ಬೇಡ!