Food

ಕೊತ್ತಂಬರಿ ಸೊಪ್ಪು

ಮಳೆಗಾಲದಲ್ಲಿ ಕೊತ್ತಂಬರಿ ಸೊಪ್ಪು ಬೇಗನೆ ಹಾಳಾಗುತ್ತದೆ. ಅದಕ್ಕಾಗಿ ಸೊಪ್ಪನ್ನು ಮಾತ್ರ ತೆಗೆದು, ಟಿಶ್ಯೂ ಪೇಪರ್ ನಲ್ಲಿ ಸುತ್ತಿ, ಏರ್ ಟೈಟ್ನರ್ ಕಂಟೇನರ್ ನಲ್ಲಿ ಹಾಕಿಡಿ. 
 

Image credits: freepik

ಹೂಕೋಸು, ಎಲೆಕೋಸು

ಹೂಕೋಸು, ಎಲೆಕೋಸು, ಬ್ರೊಕೊಲಿಯಂತಹ ತರಕಾರಿಗಳನ್ನು ಕೀಟಾಣುಗಳಿಂದ ರಕ್ಷಿಸಲು ಮೊದಲಿಗೆ ಇವುಗಳನ್ನು ಚೆನ್ನಾಗಿ ನೀರಿನಲ್ಲಿ ಕುಡಿಸಿ, ನಂತರ ಒಣಗಿಸಿ ಸ್ಟೋರ್ ಮಾಡಬೇಕು. 
 

Image credits: freepik

ಹಸಿ ಮೆಣಸಿನಕಾಯಿ

ಹಸಿ ಮೆಣಸಿನಕಾಯಿ ದರ ಇದೀಗ ಮುಗಿಲು ಮುಟ್ಟಿದೆ. ಅಂತಾದ್ರಲ್ಲಿ ಇದನ್ನು ದೀರ್ಘಕಾಲ ಉಳಿಸಲು ಮೆಣಸಿನಕಾಯಿ ದಂಟನ್ನು ತೆಗೆದು, ಟಿಶ್ಯೂ ಪೇಪರ್ ನಲ್ಲಿ ಕಟ್ಟಿ, ಏರ್ ಟೈಟ್ನರ್ ಭಾಗ್ ನಲ್ಲಿ ಹಾಕಿಡಿ. 
 

Image credits: freepik

ಮೂಲಂಗಿ, ಕ್ಯಾರೆಟ್

ಮೂಲಂಗಿ, ಕ್ಯಾರೆಟ್, ಬೀಟ್ರೂಟ್ ನಂತಹ ಬೇರಿರುವ ತರಕಾರಿಗಳನ್ನು ಮೊದಲಿಗೆ ಚೆನ್ನಾಗಿ ತೊಳೆದು, ಬ್ರಶ್ ನಿಂದ ಅದರ ಮಣ್ಣನ್ನು ಶುಚಿಗೊಳಿಸಿ, ಒಣಗಿಸಿ, ಸ್ಟೋರ್ ಮಾಡಿಡಿ. 
 

Image credits: freepik

ಪಾಲಕ್ ಸೊಪ್ಪು

ಪಾಲಕ್ ದೀರ್ಘಕಾಲ ಉಳಿಯಲು ಅದರ ಎಲೆಗಳನ್ನು ಮಾತ್ರ ತೆಗೆದು, ಒಂದು ಪೇಪರ್ ನಲ್ಲಿ ಕಟ್ಟಿ ಇಡಿ. ಬಳಕೆ ಮಾಡುವಾಗ ಮಾತ್ರ ಅದನ್ನು ತೊಳೆದರೆ ಸಾಕಾಗುತ್ತೆ. 
 

Image credits: freepik

ಬಾಳೆಹಣ್ಣು

ಬಾಳೆಹಣ್ಣನ್ನು ದೀರ್ಘಕಾಲದವರೆಗೆ ತಾಜವಾಗಿರಿಸಲು ಅದರ ದಂಟನ್ನುಅಲ್ಯೂಮೀನಿಯಂ ಫಾಯಿಲ್ ಅಥವಾ ಪ್ಲಾಸ್ಟಿಕ್ ಕವರ್ ನಿಂದ ಕಟ್ಟಿಡಿ. ಇದರಿಂದ ಬಾಳೆಹಣ್ಣು ಫ್ರೆಶ್ ಆಗಿರುತ್ತೆ. 
 

Image credits: freepik

ತರಕಾರಿಗಳನ್ನು ತೊಳೆದು ಸ್ಟೋರ್ ಮಾಡಿ

ತರಕಾರಿಗಳನ್ನು ಕೀಟಾಣುಗಳಿಂದ ರಕ್ಷಿಸಲು, ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ, ಅದಕ್ಕೆ ಬೇಕಿಂಗ್ ಸೋಡಾ ಹಾಕಿ ಅದರಲ್ಲಿ ತರಕಾರಿಗಳನ್ನು ಹಾಕಿ ಹತ್ತು ನಿಮಿಷ ಇಡಿ. ನಂತ್ರ ಒಣಗಿಸಿ, ಸ್ಟೋರ್ ಮಾಡಿಡಿ. 
 

Image credits: freepik

ಟೋಮ್ಯಾಟೋ

ಟೋಮ್ಯಾಟೋ ಬೆಲೆ ಈಗ ಗಗನಕ್ಕೇರಿದೆ. ಇದನ್ನು ದೀರ್ಘಕಾಲ ಉಳಿಸಲು ಮೊದಲಿಗೆ ಟೋಮ್ಯಾಟೊವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು, ಒಗಣಿಸಿ, ನೆಟ್ ಕವರ್ ನಲ್ಲಿ ರೂಮ್ ನಲ್ಲಿಡಿ. 
 

Image credits: freepik

ಬೆಳಗ್ಗೆದ್ದು ಮಾಡೋ ಇಂಥಾ ಕೆಲ್ಸಾನೇ ತೂಕ ಹೆಚ್ಚಾಗೋಕೆ ಕಾರಣ

ಭಾರತದ ಸುಪ್ರಸಿದ್ಧ ಈ ತಿನಿಸುಗಳಲ್ಲಿ ನಿಮಗ್ಯಾವುದು ಇಷ್ಟ?

ಟೊಮೇಟೋ ಈ ರೀತಿ ಫ್ರಿಡ್ಜ್‌ನಲ್ಲಿಟ್ರೆ ಎಷ್ಟು ತಿಂಗಳಾದ್ರೂ ಹಾಳಾಗಲ್ಲ

ಮತ್ತೆ ಮತ್ತೆ ತಿನ್ನುವಂತೆ ಮಾಡುವ ದಕ್ಷಿಣ ಭಾರತದ ಯಮ್ಮಿ ಸ್ಟ್ರೀಟ್ ಫುಡ್ಸ್