ಇದರಲ್ಲಿ ಅಧಿಕ ಪ್ರಮಾಣದ ನಾರಿನಂಶ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಬಹಳಷ್ಟು ಸಹಾಯ ಮಾಡುತ್ತದೆ.
Image credits: Getty
Kannada
ಸ್ಟ್ರಾಬೆರಿ (Strawberries)
ವಿಟಮಿನ್ ಸಿ ಮತ್ತು ನೀರಿನಂಶ ಹೆಚ್ಚಾಗಿರುವ ಈ ಹಣ್ಣು, ದೇಹದಲ್ಲಿ ಇನ್ಸುಲಿನ್ ಸೆನ್ಸಿಟಿವಿಟಿಯನ್ನು (Insulin sensitivity) ಸುಧಾರಿಸುತ್ತದೆ. ಜೊತೆಗೆ ಅನಗತ್ಯ ಹಸಿವನ್ನು ನಿಯಂತ್ರಿಸುತ್ತದೆ.
Image credits: Getty
Kannada
ಅವಕಾಡೊ (Avocado)
ಈ ಹಣ್ಣಿನಲ್ಲಿ ಸಕ್ಕರೆ ಅಂಶ ಅತ್ಯಂತ ಕಡಿಮೆ. ಇದರಲ್ಲಿರುವ ಆರೋಗ್ಯಕರ ಕೊಬ್ಬು (Healthy fats) ಮತ್ತು ಪೊಟ್ಯಾಶಿಯಂ, ರಕ್ತದಲ್ಲಿ ಸಕ್ಕರೆ ಮಟ್ಟ ಥಟ್ಟನೆ ಏರುವುದನ್ನು ತಡೆಯುತ್ತದೆ.
Image credits: Getty
Kannada
ಪೇರಳೆ / ಮರಸೇಬು (Pear)
ನಾರಿನಂಶದ ಕಣಜವಾಗಿರುವ ಪೇರಳೆ ಹಣ್ಣು, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ಸಕ್ಕರೆಯು ರಕ್ತಕ್ಕೆ ನಿಧಾನವಾಗಿ ಸೇರಿಕೊಳ್ಳುತ್ತದೆ.
Image credits: Getty
Kannada
ಸಿಟ್ರಸ್ ಹಣ್ಣುಗಳು (Citrus Fruits)
ಇದರಲ್ಲಿರುವ ವಿಟಮಿನ್ ಸಿ ಮತ್ತು ನಾರಿನಂಶವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ಮಧುಮೇಹಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.
Image credits: Getty
Kannada
ಸೇಬು (Apple)
ಸೇಬಿನಲ್ಲಿರುವ 'ಪೆಕ್ಟಿನ್' (Pectin) ಎಂಬ ಕರಗುವ ನಾರಿನಂಶ, ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ. ಜೊತೆಗೆ ಇನ್ಸುಲಿನ್ ಅಗತ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Image credits: Getty
Kannada
ಕಿವಿ ಹಣ್ಣು (Kiwi)
ವಿಟಮಿನ್‌ಗಳು ಮತ್ತು ಖನಿಜಾಂಶಗಳಿಂದ ಸಮೃದ್ಧವಾಗಿರುವ ಕಿವಿ ಹಣ್ಣು, ಇನ್ಸುಲಿನ್ ಹಾರ್ಮೋನ್‌ನ ಕಾರ್ಯವನ್ನು ಸರಿಪಡಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
Image credits: Getty
Kannada
ಚೆರ್ರಿ ಹಣ್ಣುಗಳು (Cherries)
ಚೆರ್ರಿ ಹಣ್ಣುಗಳಲ್ಲಿರುವ 'ಆಂಥೋಸಯಾನಿನ್' (Anthocyanins) ಎಂಬ ಆ್ಯಂಟಿಆಕ್ಸಿಡೆಂಟ್, ಇನ್ಸುಲಿನ್ ಉತ್ಪಾದನೆಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ಸಹಾಯ ಮಾಡುವ ಶಕ್ತಿ ಹೊಂದಿದೆ.
Image credits: Getty
Kannada
ಕಲ್ಲಂಗಡಿ, ಕರಬೂಜ ಹಣ್ಣುಗಳು (Melons)
ಇವುಗಳಲ್ಲಿ ನೀರಿನಂಶ ಅಧಿಕವಾಗಿರುತ್ತದೆ. ಇವುಗಳನ್ನು ಮಿತವಾಗಿ ಸೇವಿಸಿದಾಗ, ದೇಹದಲ್ಲಿನ ನಿರ್ಜಲೀಕರಣವನ್ನು ತಡೆದು ಚೈತನ್ಯ ನೀಡುತ್ತದೆ.