Food
ಶ್ರಾವಣ ಮಾಸದಲ್ಲಿ ಮಾಂಸಾಹಾರ ಮುಟ್ಟೋ ಹಾಗಿಲ್ಲ. ಹೀಗಿರುವಾಗ ನೀವು ಡೈಲಿ ಮೊಟ್ಟೆ ತಿನ್ನೋರಾಗಿದ್ರೆ ಬದಲಿಯಾಗಿ ಪ್ರೊಟೀನ್‌ಗೆ ಇನ್ನೇನ್ ತಿನ್ಬೋದು.
ಶ್ರಾವಣ ಮಾಸದಲ್ಲಿ ಹಲವರು ಮಾಂಸಾಹಾರ ಸೇವನೆಯನ್ನು ಬಿಟ್ಟು ಬಿಡುತ್ತಾರೆ. ಆದರೆ ಪ್ರೊಟೀನ್‌ನ ಅಧಿಕವಾಗಿರುವ ಮೊಟ್ಟೆ ಸೇವನೆ ಬಿಡುವುದು ಕೆಲವರಿಗೆ ತೊಂದರೆಯಾಗುತ್ತದೆ. ಹಾಗಿದ್ರೆ ಮೊಟ್ಟೆ ಬದಲಿಗೆ ಇನ್ನೇನ್ ತಿನ್ಬೋದು.
ಕಡಲೆ ಕಾಳುಗಳು ಮೊಟ್ಟೆಯಂತೆಯೇ ಅಧಿಕ ಪ್ರೊಟೀನ್ ಹೊಂದಿದೆ. ಇದರಲ್ಲಿ ವಿಟಮಿನ್, ಮಿನರಲ್ಸ್, ಫೈಬರ್ ಅಧಿಕವಾಗಿದೆ. ಜೀರ್ಣಕ್ರಿಯೆ ಸುಲಭ. ತೂಕ ಇಳಿಕೆಗೂ ಸಹಕಾರಿಯಾಗಿರುವ ಕಾರಣ ಮೊಟ್ಟೆಗೆ ಉತ್ತಮ ಪರ್ಯಾಯವಾಗಿದೆ
ಇದು ಮೊಟ್ಟೆಯಂತೆಯೇ ಅಧಿಕ ಪ್ರೊಟೀನ್ ಹೊಂದಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಪಲ್ ಸ್ಲೈಸಸ್‌ನ್ನು ಪೀನಟ್ ಬಟರ್‌ನಲ್ಲಿ ಅದ್ದಿ ಸವಿಯಲು ಚೆನ್ನಾಗಿರುತ್ತದೆ.
ಚೀನೀಕಾಯಿ ಬೀಜದಲ್ಲಿ ಪ್ರೊಟೀನ್ ಹೇರಳವಾಗಿದೆ. ಹೃದಯದ ಆರೋಗ್ಯವನ್ನು ಚೆನ್ನಾಗಿಡುವ ಮೆಗ್ನೀಷಿಯಂ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜಿಂಕ್‌ನ ಪ್ರಮಾಣ ಹೆಚ್ಚಿದೆ.
ಚೀಸ್‌ನಲ್ಲಿ ಪ್ರೊಟೀನ್‌ನ ಪ್ರಮಾಣ ಮೊಟ್ಟೆಗಿಂತಲೂ ಹೆಚ್ಚಿದೆ. ಚೀಸ್ ತಿಂದರೆ ಕೊಬ್ಬು ಹೆಚ್ಚಾಗುತ್ತದೆ ಅನ್ನೋ ದೂರಿನ ಮಧ್ಯೆಯೂ ಶ್ರಾವಣ ಮಾಸದಲ್ಲಿ ಮೊಟ್ಟೆಗೆ ಪರ್ಯಾಯಾಗಿ ಇದನ್ನು ತಿನ್ನಬಹುದು.
ಪನೀರ್‌ನ್ನು ಆಹಾರದಲ್ಲಿ ಹಲವು ರೀತಿಯಲ್ಲಿ ಸೇರಿಸಿಕೊಳ್ಳಬಹುದು. ಪನೀರ್ ಕರಿ, ಸ್ಯಾಂಡ್‌ವಿಚ್ ಮಾಡಿ ಸವಿಯಬಹುದು. ಸ್ಪಲ್ಪ ಎಣ್ಣೆ ಹಾಕಿ ಫ್ರೈ ಮಾಡಿ ಸ್ನ್ಯಾಕ್ಸ್‌ನಂತೆಯೂ ಸವಿಯಬಹುದು.
ಮೊಸರು ಮತ್ತು ಮಜ್ಜಿಗೆ ಎರಡೂ ಸಹ ಮೊಟ್ಟೆಗೆ ಅತ್ಯುತ್ತಮ ಪರ್ಯಾಯವಾಗಿದೆ. ಆಹಾರಕ್ಕೂ ಇದನ್ನು ಸೇರಿಸಿಕೊಂಡು ಉತ್ತಮ ರುಚಿಯನ್ನು ಪಡೆಯಬಹುದು.