ಸ್ಯಾಂಡ್‌ವಿಚ್‌ನಿಂದ ದೋಸೆವರೆಗೆ..ಗ್ರೀನ್ ಚಟ್ನಿ ರುಚಿಯಾಗಲು ಅದೊಂದು ಹಾಕ್ಲೇಬೇಕು
food Mar 08 2026
Author: Padmashree Bhat Image Credits:instagram
Kannada
ಗ್ರೀನ್ ಚಟ್ನಿ
ಮೆಣಸಿನಕಾಯಿಯಿಂದ ಆಲೂಗಡ್ಡೆ, ಸ್ಯಾಂಡ್‌ವಿಚ್, ಬರ್ಗರ್, ದೋಸೆಗೆ ಹಾಕುವ ಗ್ರೀನ್ ಚಟ್ನಿಯನ್ನು ಹೇಗೆ ಮಾಡುತ್ತಾರೆ ಎಂದು ಅನೇಕರಿಗೆ ಗೊತ್ತೇ ಇಲ್ಲ. ಗ್ರೀನ್ ಚಟ್ನಿ ಇಲ್ಲ ಅಂದ್ರೆ ಟೇಸ್ಟ್ ಬರಲ್ಲ.
Image credits: instagram
Kannada
ಏನೇನು ಬೇಕು?
ಎರಡು ಕಟ್ಟು ಪುದಿನಾ ಸೊಪ್ಪು, ಎರಡು ಕಟ್ಟು ಕೊತ್ತುಂಬರಿ ಸೊಪ್ಪು, ಹತ್ತು ಹಸಿಮೆಣಸು, ಒಂದು ಚಮಚ ಜೀರಿಗೆ, ಒಂದು ಸಣ್ಣ ಪೀಸ್ ಚಕ್ಕೆ, ಕಸ್ತೂರಿ ಮೇತಿ, ಕಲ್ಲು ಹೂವಿನ ಪುಡಿ, ಮರಾಠಿ ಮೊಗ್ಗು, ಲವಂಗ, ಸ್ಟಾರ್ ಹೂವು
Image credits: instagram
Kannada
ಮೊದಲು ಏನು ರುಬ್ಬಿಕೊಳ್ಳಬೇಕು?
ಕಲ್ಲು ಹೂವಿನ ಪುಡಿ, ಮರಾಠಿ ಮೊಗ್ಗು, ಲವಂಗ, ಸ್ಟಾರ್ ಹೂವು, ಕಸ್ತೂರಿ ಮೇತಿ ಎಲ್ಲವನ್ನು ಮೊದಲು ರುಬ್ಬಿಕೊಳ್ಳಬೇಕು
Image credits: instagram
Kannada
ಆಮೇಲೆ ಏನ್ ಮಾಡಬೇಕು?
ಆಮೇಲೆ ಏನೇನು ಉಳಿದಿದೆಯೋ ಅದನ್ನೆಲ್ಲವನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಇದಕ್ಕೆ ಲಿಂಬೆಹಣ್ಣಿನ ರಸ ಹಿಂಡಬೇಕು.