ಮೊದಲು ನೀರನ್ನು ಕುದಿಸಿ, ಮೊಟ್ಟೆಗಳನ್ನು ಸೇರಿಸಿ, ಟೈಮರ್ ಇಡೋದು ಬಹಳ ಮುಖ್ಯ. ದ್ರವ ಹಳದಿ ಲೋಳೆಗೆ 6 ನಿಮಿಷಗಳು ಸಾಕಾಗುತ್ತದೆ. ಇದರಲ್ಲಿ ಮೊಟ್ಟೆಯ ಬಿಳಿಭಾಗ ಬೆಂದಿರುತ್ತದೆ. ಹಳದಿ ಭಾಗವು ದ್ರವರೂಪದಲ್ಲಿ ಇರುತ್ತದೆ.
food Jan 03 2026
Author: Gowthami K Image Credits:google
Kannada
ಮೃದುವಾಗಿ ಬೇಯಿಸಿದ 8 ನಿಮಿಷಗಳು
ಮೃದುವಾಗಿ ಬೇಕೆಂದರೆ ಮೊಟ್ಟೆಯನ್ನು 8 ನಿಮಿಷ ಕುದಿಸಿದರೆ ಹಳದಿ ಭಾಗವು ಅರ್ಧ ಭಾಗ ಬೆಂದಿರುತ್ತದೆ. ಬಿಳಿಭಾಗವು ಮುಕ್ಕಾಲು ಭಾಗ ಬೆಂದಿರುತ್ತದೆ. ಇದು ಕೂಡ ತಿನ್ನಲು ಉತ್ತಮ.
Image credits: google
Kannada
ಗಟ್ಟಿಯಾಗಿ ಬೇಯಿಸಿದ 10 ನಿಮಿಷಗಳು
10 ನಿಮಿಷಗಳ ಕಾಲ ಮೊಟ್ಟೆಯನ್ನು ನೀರಿನಲ್ಲಿ ಬೇಯಿಸಿದರೆ ಬಿಳಿಭಾಗ ಮತ್ತು ಹಳದಿ ಭಾಗ ಎರಡೂ ಕೂಡ ಚೆನ್ನಾಗಿ ಬೆಂದಿರುತ್ತದೆ. ಇದು ಕೂಡ ತುಂಬಾ ಉತ್ತಮ
Image credits: Getty
Kannada
15 ನಿಮಿಷಗಳ ಕಾಲ ಬೇಯಿಸಿದ್ದು
ಇನ್ನು 15 ನಿಮಿಷಗಳ ಕಾಲ ಮೊಟ್ಟೆ ಬೆಂದರೆ ತಿನ್ನಲು ಅಷ್ಟು ಯೋಗ್ಯವಲ್ಲ. ಮೊಟ್ಟೆಯಲ್ಲಿ ಎಲ್ಲಾ ಸತ್ವಗಳು ಕಳೆದುಕೊಂಡಿರುತ್ತದೆ. ಜೊತೆಗೆ ಹಳದಿ ಭಾಗವು ಪುಡಿಯಾಗಿ ಡ್ರೈ ಆಗುತ್ತದೆ.
Image credits: Pixabay
Kannada
ಮೊಟ್ಟೆ ಬೇಯಿಸುವ ಟಿಪ್ಸ್
ಮೊಟ್ಟೆ ಬೇಯಿಸುವ ಮೊದಲು ನೀರನ್ನು ಕಾಯಿಸಿ ಆಮೇಲೆ ಮೊಟ್ಟೆಯನ್ನು ಹಾಕಬೇಕು. ಬೇಯುವಾಗ ಮೊಟ್ಟೆ ಒಡೆಯದಂತೆ ಉಪ್ಪು ಅಥವಾ ವಿನೇಗರ್, ನೀರುಳ್ಳಿ ಸಿಪ್ಪೆ ಇಲ್ಲವೇ ನಿಂಬೆ ಹಣ್ಣಿನ ಸಿಪ್ಪೆಯನ್ನು ಜೊತೆಯಲ್ಲೇ ಹಾಕಬೇಕು.
Image credits: Getty
Kannada
ಮೊಟ್ಟೆ ಸಿಪ್ಪೆ ತೆಗೆಯುವ ಟಿಪ್ಸ್
ಮೊಟ್ಟೆ ಚೆನ್ನಾಗಿ ಬೆಂದ ತಕ್ಷಣ ಸುಲಭವಾಗಿ ಮೊಟ್ಟೆಯ ಸಿಪ್ಪೆ ತೆಗೆಯಲು ಆಗುವಂತೆ ತಣ್ಣೀರು ಅಥವಾ ಐಸ್ ಕ್ಯೂಬ್ ಹಾಕಿರುವ ನೀರನ್ನು, ಫ್ರಿಡ್ಜ್ ನಲ್ಲಿಟ್ಟ ನೀರನ್ನು ಬಳಸಿ.