Food
ದಕ್ಷಿಣ ಭಾರತೀಯರಿಗೆ ಅನ್ನವೆಂದರೆ ಅಚ್ಚುಮೆಚ್ಚು. ಆದರೆ, ಮೂರು ಹೊತ್ತೂ ತಿನ್ನೋದು ಓಕೇನಾ?
ಬಿಳಿ ಅನ್ನದಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಹೆಚ್ಚಿರುತ್ತದೆ.
ಗ್ಲೈಸೆಮಿಕ್ ಸೂಚ್ಯಂಕ ಹೆಚ್ಚಿರುವ ಅನ್ನವನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚುತ್ತದೆ.
ಅನ್ನದಲ್ಲಿ ಕಾರ್ಬೋಹೈಡ್ರೇಟ್‌ಗಳು ಸಹ ಹೆಚ್ಚಾಗಿರುತ್ತವೆ. ಅಂದರೆ ಇದನ್ನು ಮೂರು ಹೊತ್ತು ತಿಂದರೆ ದೇಹದಲ್ಲಿ ಕೊಬ್ಬು ಹೆಚ್ಚು ಶೇಖರಣೆಯಾಗುತ್ತದೆ.
ನೀವು ಅನ್ನವನ್ನು ಹೆಚ್ಚು ತಿಂದರೆ ನೀವು ಖಂಡಿತವಾಗಿಯೂ ತೂಕ ಹೆಚ್ಚಿಸಿಕೊಳ್ಳುತ್ತೀರಿ. ತೂಕ ಹೆಚ್ಚಾಗಬಾರದು ಎಂದರೆ ಅನ್ನವನ್ನು ಮೂರು ಹೊತ್ತು ತಿನ್ನಬಾರದು.
ಮಧುಮೇಹ, ಬೊಜ್ಜು ಇತ್ಯಾದಿ ಸಮಸ್ಯೆಗಳಿರುವವರು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಅನ್ನ ತಿನ್ನುವುದು ಒಳ್ಳೆಯದಲ್ಲ.
ಆದರೆ ನೀವು ಅನ್ನವನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗಿಲ್ಲ. ಆದರೆ ಒಂದು ಹೊತ್ತಿಗಿಂತ ಹೆಚ್ಚು ತಿನ್ನಬಾರದು.
ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರನ್ನು ಸಂಪರ್ಕಿಸಿದ ನಂತರವೇ ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಿ.