ಅನೇಕ ಆರೋಗ್ಯ ಗುಣಗಳನ್ನು ಹೊಂದಿರುವ ಹಣ್ಣು ಪೇರಳೆ. ಪ್ರತಿದಿನ ಒಂದು ಪೇರಳೆ ತಿನ್ನುವುದರಿಂದ ವಿವಿಧ ರೋಗಗಳನ್ನು ದೂರವಿಡಬಹುದು.
ಪೇರಳೆಯಲ್ಲಿ ನಾರಿನಂಶ ಹೇರಳವಾಗಿದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಪೇರಳೆ ತಿನ್ನುವುದು ಒಳ್ಳೆಯದು.
ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಪೇರಳೆ ಹಲವು ರೀತಿಯ ಕ್ಯಾನ್ಸರ್ ಅಪಾಯಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ತೂಕ ಇಳಿಸಿಕೊಳ್ಳಲು ಬಯಸುವವರು ಪೇರಳೆ ತಿನ್ನಬಹುದು. ಇದರಲ್ಲಿ ಹೇರಳವಾಗಿ ನಾರಿನಂಶವಿದೆ.
ಪೇರಳೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಪೇರಳೆಯನ್ನು ತಿನ್ನೋದರಿಂದ ನಿಮ್ಮ ಚರ್ಮ ಬೇಗ ಸುಕ್ಕಾಗೋದಿಲ್ಲ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೇರಳೆ ಉತ್ತಮವಾಗಿದೆ. ಋತುಮಾನಕ್ಕೆ ತಕ್ಕಂತೆ ಬರುವ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ.
ರಾತ್ರಿ ಉಳಿದ ಅನ್ನದಿಂದ ಮಾಡಿ ರುಚಿಕರವಾದ ಛತ್ತೀಸ್‌ಗರಿ ಫರ: ರೆಸಿಪಿ ಇಲ್ಲಿದೆ
ರುಚಿ ರುಚಿಯಾದ ಸಿಂಧಿ ಕರ್ರಿ V/s ಪಂಜಾಬಿ ಕರ್ರಿ ರೆಸಿಪಿ
ಕ್ರಂಚಿ ಕ್ರಂಚಿಯಾದ ಬಾಯಲ್ಲಿ ನೀರು ಬರಿಸುವ ಸಿಹಿಗೆಣಸಿನ ಫ್ರೈಸ್ ರೆಸಿಪಿ
ಬಾಯಲ್ಲಿ ನೀರೂರಿಸುವ ರುಚಿಯಾದ ಸೋರೆಕಾಯಿ ಪಾಯಸ: ರೆಸಿಪಿ ಇಲ್ಲಿದೆ.