Kannada

ಆರೋಗ್ಯ ಕಾಪಾಡಲು 5 ಆ್ಯಂಟಿ-ಇನ್‌ಫ್ಲಮೇಟರಿ ಪಾನೀಯಗಳು

Kannada

ಅರಿಶಿನ ಮತ್ತು ಕರಿಮೆಣಸಿನ ಟೀ

ಅರಿಶಿನದಲ್ಲಿ ಕರ್ಕ್ಯುಮಿನ್ ಅಂಶವಿದೆ. ಇದು ದೇಹದ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತೆ. ಇದರ ಜೊತೆ ಕರಿಮೆಣಸು, ಶುಂಠಿ ಸೇರಿಸಿ ಕುದಿಸಿ ಕುಡಿದರೆ ಡಬಲ್ ಪ್ರಯೋಜನ ಸಿಗುತ್ತೆ.

Image credits: Getty
Kannada

ಶುಂಠಿ-ನಿಂಬೆ ಪಾನಕ

ಶುಂಠಿಯನ್ನು 10 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ಆಮೇಲೆ ಅದಕ್ಕೆ ನಿಂಬೆ ರಸ ಹಾಗೂ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಹಾಗೂ ಮೈಕೈ ನೋವು ಕಡಿಮೆಯಾಗುತ್ತದೆ.

Image credits: Getty
Kannada

ಪುದೀನಾ ಹಾಕಿದ ಗ್ರೀನ್ ಟೀ

ಗ್ರೀನ್ ಟೀ ಆ್ಯಂಟಿ-ಆಕ್ಸಿಡೆಂಟ್‌ಗಳಿಂದ ತುಂಬಿರುತ್ತೆ. ಇದಕ್ಕೆ ಪುದೀನಾ ಎಲೆಗಳು ಮತ್ತು ನಿಂಬೆರಸ ಸೇರಿಸಿದರೆ, ಬೇಸಿಗೆಯಲ್ಲಿ ದೇಹಕ್ಕೆ ಫ್ರೆಶ್‌ನೆಸ್ ಹಾಗೂ ತಂಪಾದ ಅನುಭವ ಸಿಗುತ್ತೆ.

Image credits: Freepik
Kannada

ಟಾರ್ಟ್ ಚೆರ್ರಿ ಸ್ಪ್ರಿಟ್ಜರ್

ಸಕ್ಕರೆ ಇಲ್ಲದ ಚೆರ್ರಿ ಜ್ಯೂಸ್‌ಗೆ ಸ್ಪಾರ್ಕ್ಲಿಂಗ್ ವಾಟರ್ ಮತ್ತು ಸ್ವಲ್ಪ ನಿಂಬೆ ರಸ ಸೇರಿಸಿ. ಇದು ಮಸಲ್ಸ್ ಪೇನ್ ಕಡಿಮೆ ಮಾಡಲು ಸಹಾಯ ಮಾಡುವ ಒಂದು ಬೆಸ್ಟ್ ಡ್ರಿಂಕ್.

Image credits: Getty
Kannada

ಸೌತೆಕಾಯಿ - ಚಿಯಾ ಸೀಡ್ಸ್ ನೀರು

ಸೌತೆಕಾಯಿ, ಪುದೀನಾ ಎಲೆಗಳು ಮತ್ತು ಚಿಯಾ ಸೀಡ್ಸ್ ಹಾಕಿದ ನೀರು ಬಾಯಾರಿಕೆ ನೀಗಿಸುತ್ತೆ. ಜೊತೆಗೆ ದೇಹದಲ್ಲಿನ ಟಾಕ್ಸಿನ್‌ಗಳನ್ನು ಹೊರಹಾಕಲು ಹೆಲ್ಪ್ ಮಾಡುತ್ತೆ.

Image credits: Getty
Kannada

ತಯಾರಿಸುವುದು ಸುಲಭ

ಈ ಆರೋಗ್ಯಕರ ಪಾನೀಯಗಳ ವಿಶೇಷತೆ ಅಂದ್ರೆ, ಮನೆಯಲ್ಲಿ ಸಿಗುವ ಪದಾರ್ಥಗಳನ್ನೇ ಬಳಸಿ ಕಡಿಮೆ ಸಮಯದಲ್ಲಿ ರೆಡಿ ಮಾಡಬಹುದು.

Image credits: Getty
Kannada

ಸಕ್ಕರೆ ಬೇಡ

ಈ ಪಾನೀಯಗಳಲ್ಲಿ ಸಕ್ಕರೆ ಅಥವಾ ಕೃತಕ ಸಿಹಿಯನ್ನು ಅವಾಯ್ಡ್ ಮಾಡಿ. ಬದಲಿಗೆ ಜೇನುತುಪ್ಪದಂತಹ ನ್ಯಾಚುರಲ್ ಸ್ವೀಟ್ನರ್ ಬಳಸಿ. ಇದರಿಂದ ಹೆಚ್ಚಿನ ಲಾಭ ಸಿಗುತ್ತದೆ.

Image credits: Getty

ಮನೆಯಲ್ಲೇ ಮಾಡಿ ಕಾಜು ಬರ್ಫಿ, ಕಡಿಮೆ ಸಕ್ಕರೆಯಲ್ಲೇ ಸವಿಯಿರಿ ರುಚಿಕರ ಸಿಹಿ

ಒಂದೆರಡು ಪದಾರ್ಥದಲ್ಲಿ 'ಸಾಂಬಾರ್‌ ದೋಸೆ' ಮಾಡೋದು ಹೇಗೆ? ಇದು ಉತ್ತಪ್ಪ ಅಲ್ಲ!

ಈ ರೀತಿಯ ಚಾಟ್ ಮಸಾಲಾ ಪೌಡರ್ ಮಾಡಿದ್ರೆ ನಾಲ್ಕೈದು ತಿಂಗಳಾದ್ರೂ ಏನು ಆಗಲ್ಲ!

ಕರಿ ನೋಡಲು ಸೂಪರ್.. ಆದ್ರೆ ಉಪ್ಪು ಹೆಚ್ಚಾಯಿತೆ? ತಕ್ಷಣ ಹೀಗೆ ಮಾಡಿ