ಮನೆಗೆ ಅತಿಥಿಗಳು ಬಂದಾಗ, ನೀವೇ ಸ್ವತಃ ಮಾಡಿದ ಸಿಹಿ ತಿನಿಸು ಬಡಿಸಿದರೆ ಸಿಗುವ ಖುಷಿಯೇ ಬೇರೆ. ನಿಮ್ಮ ಕೈರುಚಿಗೆ ಮೆಚ್ಚುಗೆಯ ಸುರಿಮಳೆಯೇ ಗ್ಯಾರಂಟಿ.
food May 04 2026
Author: Sathish Kumar KH Image Credits:social media
Kannada
ಸಾಮಗ್ರಿಗಳು
ತುಂಬಾ ಸುಲಭವಾಗಿ ಕಾಜು ಬರ್ಫಿ ತಯಾರಿಸಲು ಗೋಡಂಬಿ, ಹಾಲು, ಸಕ್ಕರೆ, ನೀರು, ಏಲಕ್ಕಿ ಮತ್ತು ಕೇಸರಿ ಬೇಕಾಗುತ್ತದೆ.
Image credits: social media
Kannada
ಮಾಡುವ ವಿಧಾನ
ಮಿಕ್ಸಿ ಜಾರ್‌ನಲ್ಲಿ ಗೋಡಂಬಿ ಪುಡಿ ಮಾಡಿಕೊಳ್ಳಿ. ದಪ್ಪ ತಳದ ಪಾತ್ರೆ ಗ್ಯಾಸ್ ಮೇಲೆ ನೀರನ್ನ ಬಿಸಿ ಮಾಡಿ. ಬಿಸಿನೀರಿಗೆ ಬೇಕಾದಷ್ಟು ಸಕ್ಕರೆ ಸೇರಿಸಿ, ಕರಗಿ ಪಾಕ ಬರುವವರೆಗೆ ಚೆನ್ನಾಗಿ ಕುದಿಸಿ.
Image credits: social media
Kannada
ವಿಧಾನ
ಸಕ್ಕರೆ ಪಾಕಕ್ಕೆ ಗೋಡಂಬಿ ಪುಡಿ ಸೇರಿಸಿ ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಹಾಲು, ಸ್ವಲ್ಪ ಏಲಕ್ಕಿ ಪುಡಿ ಮತ್ತು ಕೇಸರಿ ಹಾಕಿ ತಿರುಗಿಸಿ.
Image credits: social media
Kannada
ಅಂತಿಮ ವಿಧಾನ
ಈಗ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗಿ ಹರಡಿ. ನಂತರ ಬರ್ಫಿ ಆಕಾರದಲ್ಲಿ ಕತ್ತರಿಸಿ, ಮೇಲೆ ಕೇಸರಿ ದಳಗಳಿಂದ ಅಲಂಕರಿಸಿ. ರುಚಿಕರವಾದ ಕಾಜು ಬರ್ಫಿ ಸವಿಯಲು ಸಿದ್ಧ.