ಹಾಗಲಕಾಯಿ ಆರೋಗ್ಯಕ್ಕೆ ಬಹಳ ಒಳ್ಳೇದು. ಆದರೆ ಅನೇಕರಿಗೆ ಅದರ ಕಹಿಯದ್ದೇ ಭಯ. ಇನ್ಮೇಲೆ ಈ ಚಿಂತೆ ಬೇಡ. ಇದನ್ನು ಹೋಗಲಾಡಿಸುವುದು ತುಂಬಾ ಸುಲಭ.
ಮೊದಲು ಹಾಗಲಕಾಯಿಯನ್ನು ತೊಳೆದು, ನಿಮಗೆ ಬೇಕಾದ ಗಾತ್ರದಲ್ಲಿ (ದುಂಡಗೆ ಅಥವಾ ಉದ್ದಕ್ಕೆ) ಹೆಚ್ಚಿಕೊಳ್ಳಿ.
ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಅದಕ್ಕೆ ಒಂದು ಚಮಚ ಉಪ್ಪನ್ನು ಸೇರಿಸಿ. ಉಪ್ಪು ಕಹಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಬಿಸಿ ಉಪ್ಪು ನೀರಿಗೆ ಹೆಚ್ಚಿದ ಹಾಗಲಕಾಯಿ ತುಂಡುಗಳನ್ನು ಹಾಕಿ. ಕೇವಲ 5 ರಿಂದ 10 ನಿಮಿಷಗಳ ಕಾಲ ಸಾಧಾರಣ ಉರಿಯಲ್ಲಿ ಕುದಿಸಿ.
ನಿಗದಿತ ಸಮಯದ ನಂತರ ಗ್ಯಾಸ್ ಆಫ್ ಮಾಡಿ. ಈಗ ಆ ನೀರನ್ನು ಸಂಪೂರ್ಣವಾಗಿ ಸೋಸಿ (ಬಸಿದು) ತೆಗೆಯಿರಿ.
ಈ ರೀತಿ ಉಪ್ಪು ನೀರಿನಲ್ಲಿ ಕುದಿಸಿ ನೀರು ಬಸಿದ ನಂತರ ಹಾಗಲಕಾಯಿಯನ್ನು ಬಳಸಿದರೆ, ಅದರ ಕಹಿ ಅಂಶ ಗಣನೀಯವಾಗಿ ಕಡಿಮೆಯಾಗಿರುತ್ತದೆ.
ಈಗ ಈ ತುಂಡುಗಳಿಂದ ಪಲ್ಯ, ಗೊಜ್ಜು ಅಥವಾ ಫ್ರೈ ಮಾಡಿ ನೋಡಿ. ಕಹಿಯಿಲ್ಲದ ರುಚಿಕರ ಹಾಗಲಕಾಯಿ ಅಡುಗೆ ಸಿದ್ಧ!
ಪರೋಟ ರಬ್ಬರ್‌ನಂತೆ ಗಟ್ಟಿಯಾಗುತ್ತಿದ್ಯಾ? ಈ ರೀತಿ ಮಾಡಿದ್ರೆ ಹೂವಂಗೆ ಇರುತ್ತೆ
Soft Idli: ಬೆಣ್ಣೆಯಷ್ಟು ಮೃದುವಾದ ಇಡ್ಲಿ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್!
Banned Indian Foods: ವಿದೇಶಗಳಲ್ಲಿ ಬ್ಯಾನ್ ಆದ ಭಾರತೀಯ ಆಹಾರಗಳ ಪಟ್ಟಿ
ಈ ಪದಾರ್ಥ ಸೇರಿಸಿ ಒಗ್ಗರಣೆ ಹಾಕಿ.. ಮುಖ ಮಾತ್ರವಲ್ಲ ಗೋಡೆಗೂ ಎಣ್ಣೆ ಸಿಡಿಯಲ್ಲ