ಮನೆಯ ಕೈತೋಟ ಅಥವಾ ಗ್ರೋ ಬ್ಯಾಗ್‌ಗಳಲ್ಲಿ ಬೆಳೆಸಿದ ಟೊಮೆಟೊ ಗಿಡದಲ್ಲಿ ಹಣ್ಣುಗಳು ಸಿಗುತ್ತಿಲ್ಲವೇ? ಹಾಗಾದರೆ ನೀವು ಗಮನಿಸಬೇಕಾದ ಕೆಲವು ವಿಷಯಗಳು ಇಲ್ಲಿವೆ.
food Jul 16 2026
Author: Naveen Kodase Image Credits:Getty
Kannada
ಸರಿಯಾದ ನೀರಿನ ಕ್ರಮ
ಗಿಡಗಳಿಗೆ ತಪ್ಪದೆ ನೀರು ಹಾಕಬೇಕು. ಮಣ್ಣು ಯಾವಾಗಲೂ ತೇವವಾಗಿರಬೇಕು, ಆದರೆ ನೀರು ನಿಲ್ಲಬಾರದು. ಬೆಳಗ್ಗಿನ ಹೊತ್ತು ನೀರು ಹಾಕಿದರೆ ತುಂಬಾ ಒಳ್ಳೆಯದು.
Image credits: Getty
Kannada
ಸೂರ್ಯನ ಬೆಳಕು
ಟೊಮೆಟೊ ಚೆನ್ನಾಗಿ ಬೆಳೆಯಬೇಕಾದರೆ ಬಿಸಿಲು ತುಂಬಾ ಮುಖ್ಯ. ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಸಿಗುವ ಜಾಗದಲ್ಲಿ ಗಿಡಗಳನ್ನು ಇಡಿ.
Image credits: Getty
Kannada
ಗಿಡಕ್ಕೆ ಆಸರೆ ನೀಡಿ
ಗಿಡ ಬೆಳೆಯಲು ಶುರುವಾದಾಗಲೇ, ಒಂದು ಕೋಲು ಅಥವಾ ಕಂಬದ ಆಸರೆ ಕೊಡಿ. ಇದು ಟೊಮೆಟೊ ಭಾರಕ್ಕೆ ಕಾಂಡ ಮುರಿಯದಂತೆ ಮತ್ತು ಕಾಯಿಗಳು ಮಣ್ಣಿಗೆ ತಾಗಿ ಕೊಳೆಯದಂತೆ ತಡೆಯುತ್ತದೆ.
Image credits: Getty
Kannada
ಫಂಗಸ್ ರೋಗಗಳು
ನೀರು ಹಾಕುವಾಗ ಗಿಡದ ಬುಡಕ್ಕೆ ನೇರವಾಗಿ ಹಾಕಿ. ಎಲೆಗಳು ಮತ್ತು ಕಾಂಡಗಳ ಮೇಲೆ ನೀರು ಬಿದ್ದರೆ ಫಂಗಸ್ ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ.
Image credits: Getty
Kannada
ಸಾವಯವ ಗೊಬ್ಬರ
ಗಿಡ ನೆಡುವಾಗ ಮಣ್ಣಿನಲ್ಲಿ ಸಗಣಿ ಗೊಬ್ಬರ ಅಥವಾ ಕಾಂಪೋಸ್ಟ್ ಬೆರೆಸಿ. ಗಿಡ ಬೆಳೆದಂತೆ 15 ದಿನಕ್ಕೊಮ್ಮೆ ಕಡಲೆ ಹಿಂಡಿ, ಬೇವಿನ ಹಿಂಡಿ ಅಥವಾ ಗಂಜಿಯನ್ನು ನೀರಿನಲ್ಲಿ ಬೆರೆಸಿ ಹಾಕಬಹುದು.
Image credits: Getty
Kannada
ಪ್ರೂನಿಂಗ್ (ಸವರುವಿಕೆ)
ಗಿಡದ ಬುಡದಲ್ಲಿ, ಮಣ್ಣಿಗೆ ತಾಗುವ ಹಾಗೆ ಇರುವ ಎಲೆಗಳನ್ನು ಕತ್ತರಿಸಿ ತೆಗೆಯಿರಿ. ಇದು ಮಣ್ಣಿನಿಂದ ಬರುವ ಫಂಗಸ್ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
Image credits: Getty
Kannada
ಪರಾಗಸ್ಪರ್ಶ
ಪಾಟ್‌ಗಳಲ್ಲಿ ಗಿಡ ಬೆಳೆಸುವಾಗ ಗಾಳಿ ಅಥವಾ ಜೇನುನೊಣಗಳು ಕಡಿಮೆ ಇರಬಹುದು. ಹಾಗಾಗಿ, ಹೂವು ಬಿಟ್ಟಿರುವ ಕೊಂಬೆಗಳನ್ನು ಬೆಳಗ್ಗೆ ಹೊತ್ತು ನಿಧಾನವಾಗಿ ಅಲ್ಲಾಡಿಸಿ. ಇದರಿಂದ ಪರಾಗಸ್ಪರ್ಶಕ್ಕೆ ಸಹಾಯವಾಗುತ್ತದೆ.
Image credits: Getty
Kannada
ಕ್ಯಾಲ್ಸಿಯಂ ಕೊರತೆ
ಕ್ಯಾಲ್ಸಿಯಂ ಕೊರತೆ ನೀಗಿಸಲು, ಗಿಡ ನೆಡುವಾಗ ಮತ್ತು ನಂತರ ಸ್ವಲ್ಪ ಸುಣ್ಣ ಅಥವಾ ಮೊಟ್ಟೆಯ ಸಿಪ್ಪೆಯ ಪುಡಿಯನ್ನು ಮಣ್ಣಿಗೆ ಸೇರಿಸುವುದು ಒಳ್ಳೆಯದು.
Image credits: Getty
Kannada
ರೋಗ ಮತ್ತು ಕೀಟ ನಿಯಂತ್ರಣ
ಟೊಮೆಟೊ ಗಿಡಕ್ಕೆ ಎಲೆ ಸುರುಳಿ ಮತ್ತು ಬಿಳಿ ನೊಣಗಳ ಕಾಟ ಹೆಚ್ಚು. ಇದನ್ನು ತಡೆಯಲು ವಾರಕ್ಕೊಮ್ಮೆ ಬೇವಿನ ಎಣ್ಣೆ-ಬೆಳ್ಳುಳ್ಳಿ ಮಿಶ್ರಣ ಅಥವಾ ಸೋಪಿನ ನೀರನ್ನು ಎಲೆಗಳ ಎರಡೂ ಬದಿಗೆ ಸಿಂಪಡಿಸಿ.