ಸಾಮಾನ್ಯವಾಗಿ ದೋಸೆಯನ್ನು ಉದ್ದಿನಬೇಳೆ, ಅಕ್ಕಿ ನೆನೆಸಿ ರುಬ್ಬಿ ತಯಾರಿಸುತ್ತೇವೆ. ಆದರೆ ರಾಗಿ ದೋಸೆಗೆ ಇಷ್ಟೆಲ್ಲಾ ಫಜೀತಿ ಬೇಡ. ಊಟ ಪೌಷ್ಟಿಕಾಂಶಯುಕ್ತವಾಗಿರಬೇಕು ಅಂದರೆ ಈ ರೀತಿ ಮಾಡಿ ಸೇವಿಸಿ.
food Jul 30 2026
Author: Ashwini HR Image Credits:social media
Kannada
ಬೇಕಾಗುವ ಪದಾರ್ಥಗಳು
1.5 ಕಪ್ ರಾಗಿ ಹಿಟ್ಟು, 4 ಕಪ್ ನೀರು, 1 ಈರುಳ್ಳಿ, 2 ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು ಅಗತ್ಯಕ್ಕೆ ಅನುಗುಣವಾಗಿ, ರುಚಿಗೆ ತಕ್ಕಷ್ಟು ಉಪ್ಪು, ಬೇಯಿಸಲು ಎಣ್ಣೆ.
Image credits: social media
Kannada
ಹಂತ-1
ರಾಗಿ ಹಿಟ್ಟು-ನೀರಿನಿಂದ ಹಿಟ್ಟನ್ನು ಸಿದ್ಧಪಡಿಸಿ. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಗಂಟಿಲ್ಲದಂತೆ ಕಲಸಿ. ಹಿಟ್ಟು ತೆಳುವಾಗಿರಲಿ. ಹೆಚ್ಚಿದ ಈರುಳ್ಳಿ, ಕೊತ್ತಂಬರಿ, ಹಸಿಮೆಣಸಿನಕಾಯಿ, ಕರಿಬೇವು, ಉಪ್ಪು ಸೇರಿಸಿ.
Image credits: social media
Kannada
ಹಂತ-3
ಸಿದ್ಧಪಡಿಸಿದ ಹಿಟ್ಟಿಗೆ ಎಲ್ಲಾ ಪದಾರ್ಥಗಳನ್ನು ಬೆರೆಸಿದ ನಂತರ 15 ರಿಂದ 20 ನಿಮಿಷಗಳ ಕಾಲ ನೆನೆಯಲು ಬಿಡಿ.
Image credits: Social media
Kannada
ಹಂತ-4
ಕಾದ ಹಂಚಿಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ. ಅದು ಕ್ರಿಸ್ಪಿಯಾಗುವವರೆಗೆ ಬೇಯಿಸಿ. ಒಂದು ವೇಳೆ ನಿಮಗೆ ದೋಸೆ ಸರಿಯಾಗಿ ಎದ್ದೇಳುತ್ತಿಲ್ಲ ಎನಿಸಿದರೆ ಹಿಟ್ಟಿಗೆ 1-2 ಚಮಚ ಅಕ್ಕಿ ಹಿಟ್ಟು ಸೇರಿಸಿಕೊಳ್ಳಿ.
Image credits: social media
Kannada
ಹಂತ-5
ಅಷ್ಟೇ ರಾಗಿ ದೋಸೆ ರೆಡಿ. ಇದನ್ನು ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿ.