ಪ್ರತಿದಿನ ಪ್ರಿಬಯೋಟಿಕ್ ಅಂಶವಿರುವ ಆಹಾರಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಎಂದು ಇಲ್ಲಿ ತಿಳಿಯಿರಿ.
ಪ್ರಿಬಯೋಟಿಕ್ ಆಹಾರಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ಇವು ಹೊಟ್ಟೆ ಉಬ್ಬರವನ್ನು ತಡೆಯುವುದರ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತವೆ.
ಕರುಳು ಆರೋಗ್ಯವಾಗಿದ್ದರೆ ಮಾತ್ರ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪ್ರಿಬಯೋಟಿಕ್ ಆಹಾರಗಳು ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ನಾವು ತಿಂದ ಆಹಾರದಲ್ಲಿರುವ ಪೋಷಕಾಂಶಗಳನ್ನು ದೇಹವು ಸುಲಭವಾಗಿ ಹೀರಿಕೊಳ್ಳಲು ಪ್ರಿಬಯೋಟಿಕ್ ಆಹಾರಗಳು ಸಹಾಯ ಮಾಡುತ್ತವೆ.
ಪ್ರಿಬಯೋಟಿಕ್ ಅಂಶವಿರುವ ಆಹಾರಗಳನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಪ್ರಿಬಯೋಟಿಕ್ ಆಹಾರಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.
ಕರುಳು ಮತ್ತು ಮೆದುಳಿನ ನಡುವೆ ನಿರಂತರ ಸಂಪರ್ಕವಿರುತ್ತದೆ. ಕರುಳಿನ ಆರೋಗ್ಯ ಸುಧಾರಿಸಿದರೆ, ನಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ.
ಗ್ರೋಬ್ಯಾಗ್‌ನಲ್ಲಿ ಬೀಟ್‌ರೂಟ್ ಬೆಳೆಯಿರಿ, ಮನೆಯಲ್ಲಿ ಮ್ಯಾಜಿಕ್ ಮಾಡಿ!
ಅಂಗಡಿಯಿಂದಲೇ ತರಬೇಕಿಲ್ಲ, ಮನೆಯಲ್ಲೇ ಬೆಳೆಯಬಹುದು ಪಾಲಕ್ ಸೊಪ್ಪು!
ಆತಂಕ & ಒತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ಆಹಾರಗಳು ಇವು!
ಲಟ್ಟಣಿಗೆ ಮುಟ್ಟದೆಯೂ ಮಾಡಬಹುದು ತೆಳು ಹೋಳಿಗೆ.. ಇಲ್ಲಿದೆ ಸಿಂಪಲ್ ಟ್ರಿಕ್