Festivals
ಭಾರತವನ್ನು ಸಂತರ ಮತ್ತು ದೇವತೆಗಳ ಭೂಮಿ ಎನ್ನಲಾಗುತ್ತೆ. ಇಲ್ಲಿ ವಿವಿಧ ಪ್ರಕಾರದ ಗ್ರಂಥಗಳು, ಆವಿಷ್ಕಾರಗಳು ಸಹ ಹುಟ್ಟಿಕೊಂಡಿವೆ.
ಭಾರತೀಯ ಋಷಿಗಳು ಘೋರ ತಪಸ್ಸು ಮಾಡುವ ಮೂಲಕ ವೇದಗಳಲ್ಲಡಗಿದ ಗೂಢ ಜ್ಞಾನವನ್ನು ತಿಳಿದು ಸಹಸ್ರ ವರ್ಷಗಳ ಮುನ್ನ ರಹಸ್ಯಗಳನ್ನು ಭೇದಿಸಿದ್ದಾರೆ.
ವೈಮಾನಿಕ ಶಾಸ್ತ್ರದ ಅನುಸಾರ ಮಹರ್ಷಿ ಭಾರಧ್ವಜ್ ವಿಮಾನದ ಆವಿಷ್ಕಾರವನ್ನು ಸಹಸ್ರ ವರ್ಷಗಳ ಮೊದಲೇ ಮಾಡಿದ್ದರಂತೆ.
ಆಧುನಿಕ ಜಗತ್ತಿನ ಪ್ರಕಾರ ರೈಟ್ ಬ್ರದರ್ಸ್ ವಿಮಾನದ ಆವಿಷ್ಕಾರ ಮಾಡಿದ್ದಾರೆ ಎನ್ನಲಾಗಿದೆ.
ವಿಮಾನ ಶಾಸ್ತ್ರ ವಿಮಾನ ಬಗ್ಗೆ ಸಂಸ್ಕೃತದಲ್ಲಿ ಬರೆದಂತಹ ಒಂದು ಗ್ರಂಥವಾಗಿದೆ. ಇದರಲ್ಲಿ ವಿಮಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಮಹರ್ಷಿ ಭಾರಧ್ವಜ್ ತಮ್ಮ ವಿಮಾನ ಶಾಸ್ತ್ರದಲ್ಲಿ ವಿಮಾನ ಮಾಡುವ ಬಗ್ಗೆ ಮತ್ತು ಅವುಗಳ ಯಂತ್ರ ತಯಾರಿಸುವ ಬಗ್ಗೆ, ವಿಮಾನ ಚಲಾಯಿಸುವ ಬಗ್ಗೆ ಸಹ ಮಾಹಿತಿ ನೀಡಿದ್ದರು.
ಇಂದು ಪ್ರಪಂಚದಲ್ಲಿ ವಿಮಾನ ತಂತ್ರಜ್ಞಾನದ ವಿಕಾಸವಾಗಿದೆಯೋ ಅದರ ಬಗ್ಗೆ ಸಹಸ್ರಾರು ವರ್ಷಗಳ ಹಿಂದೆಯೇ ವಿಮಾನ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿಮಾನ ಶಾಸ್ತ್ರದಲ್ಲಿ ಸುಮಾರು 500 ವಿವಿಧ ಬಗೆಯ ವಿಮಾನ ತಯಾರಿಸುವ ಬಗ್ಗೆ ಮಹರ್ಷಿ ಭಾರಧ್ವಜ್ ತಿಳಿಸಿದ್ದಾರಂತೆ.
ಈ ಗ್ರಂಥದಲ್ಲಿ ವಿಮಾನ ಅಂದರೇನು ಅಂತಾನು ತಿಳಿಸಿದ್ದಾರೆ. ಪಕ್ಷಿಯಂತೆ ವೇಗವಾಗಿ ಗಾಳಿಯಲ್ಲಿ ಹಾರಾಡುವ ಕಾರಣ ಇದನ್ನು ವಿಮಾನ ಎನ್ನಲಾಗುತ್ತದೆ.
ನೀವು ಶಿವನ ಪೂಜೆ ಮಾಡುವಿರಾ? ಮನೆಯಲ್ಲಿ ಶಂಕರನ ಚಿತ್ರವಿಡುವಾಗ ಈ ನಿಯಮ ಬಲು ಮುಖ್ಯ.
ಹೆಂಡತಿಯ ವಿಚಾರದಲ್ಲಿ ಈ ತಪ್ಪು ಮಾಡಬೇಡಿ; ಜೀವನವಿಡೀ ಪಶ್ಚಾತ್ತಾಪ ತಪ್ಪಿದ್ದಲ್ಲ..!
ನಂದಿಯ ಕಿವಿಯಲ್ಲಿ ಇಷ್ಟಾರ್ಥ ಏಕೆ ಹೇಳುತ್ತಾರೆ? ಅದು ಶಿವನಿಗೆ ಹೇಗೆ ತಲುಪುತ್ತೆ?
ಇದು ದೇವಭೂಮಿ; ಉತ್ತರಾಖಂಡದ ಈ 10 ದೇವಾಲಯಗಳು ಹಿಂದೂಗಳಿಗೆ ಬಲು ಪವಿತ್ರ